ನೀಟ್ ಪರೀಕ್ಷೆಯಲ್ಲಿ ಕಾಪಿ ಅವಕಾಶ: ಡಿಎಂಕೆ ಭರವಸೆ| ತಮಿಳುನಾಡಿನ ಮಾಜಿ ಸಚಿವ ನೆಹರೂ ವಿವಾದಿತ ಹೇಳಿಕೆ
ಚೆನ್ನೈ(ಮಾ.20): ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ನಲ್ಲಿ ಕಾಪಿ ಹೊಡೆಯಲು ಅವಕಾಶ ಮಾಡಿಕೊಡುವುದಾಗಿ ಮಾಜಿ ಸಚಿವ ಕೆ.ಎನ್.ನೆಹರೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಿರುಚಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡುತ್ತಿದ್ದ ಅವರು, ‘ಬಿಹಾರ ಮತ್ತು ಮಧ್ಯಪ್ರದೇಶದ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ವೇಳೆ ಕಾಪಿ ಹೊಡೆಯುತ್ತಾರೆ. ಅಲ್ಲಿ ಅದಕ್ಕೆ ಅವಕಾಶ ಇದೆ. ಹಾಗಿದ್ದಾಗ ತಮಿಳುನಾಡು ವಿದ್ಯಾರ್ಥಿಗಳು ಮಾತ್ರ ಏಕೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯಬೇಕು.
ರಾಜ್ಯದಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಇಲ್ಲಿನ ವೈದ್ಯ ವಿದ್ಯಾರ್ಥಿಗಳಿಗೂ ಕಾಪಿ ಹೊಡೆಯಲು ಅವಕಾಶ ಮಾಡಿಕೊಡುತ್ತೇವೆ’ ಎಂದು ಹೇಳಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ.