ದುಬೈನಿಂದ ಆಗಮಿಸುವ ಎಲ್ಲರ ಪ್ರತ್ಯೇಕವಾಗಿಡಲು ಸಿದ್ಧತೆ ನಡೆಸಲಾಗಿದೆ. ಕೊರೋನಾ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಮುಂಬೈ [ಮಾ.20] : ಕೊರೋನಾ ಭೀತಿ ಹಿನ್ನೆಲೆ ಯುಎಇ, ಕುವೈತ್, ಕತಾರ್ ಮತ್ತು ಒಮಾನ್ ಸೇರಿಕೊಲ್ಲಿ ದೇಶಗಳಿಂದ ಸುಮಾರು 26 ಸಾವಿರ ಭಾರತೀಯರು ಮುಂಬೈಗೆ ಆಗಮಿಸಲಿದ್ದು, ಅವರೆಲ್ಲ ರನ್ನೂ 14 ದಿನಗಳ ಕಾಲ ಪ್ರತ್ಯೇಕವಾಗಿ ಇಡುವು ದಕ್ಕೆ ಮುಂಬೈ ಮಹಾನಗರ ಪಾಲಿಕೆ ವ್ಯವಸ್ಥೆ ಮಾಡಿಕೊಂಡಿದೆ.
ಗಲ್ಫ್ ರಾಷ್ಟ್ರಗಳಿಂದ ಮುಂಬೈಗೆ ನಿತ್ಯ 23 ವಿಮಾನಗಳು ಆಗಮಿಸುತ್ತಿವೆ. ಮಾ.31ರ ಒಳಗಾಗಿ ಸುಮಾರು 26,000 ಮಂದಿ ಆಗಮಿಸುವ ನಿರೀಕ್ಷೆ ಇದೆ.
ಭಾರತದಲ್ಲಿ ಕೊರೋನಾಗೆ 5ನೇ ಬಲಿ : ಜೈಪುರದಲ್ಲಿ ವ್ಯಕ್ತಿ ಸಾವು..
ಇದುವರೆಗೆ ಮಹಾರಾಷ್ಟ್ರಕ್ಕೆ ದುಬೈ ನಿಂದ 15 ಮಂದಿ ಆಗಮಿಸಿದ್ದು ಅವರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಸ್ಥಳೀಯವಾಗಿ ಆತಂಕ ಹೆಚ್ಚಿಸಿದೆ.
ದೇಶದಲ್ಲಿ ಇದೀಗ ಕೊರೋನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ. ಭಾರತದಲ್ಲಿ ಇಟಲಿ ಪ್ರವಾಸಿಗನೋರ್ವ ಸಾವಿಗೀಡಾಗಿದ್ದು, ಒಟ್ಟು ಕೊರೋನಾದಿಂದ ಐದು ಮಂದಿ ಸಾವಿಗೀಡಾದಂತಾಗಿದೆ.