ನಿರ್ಭಯಾ ಆರೋಪಿಗಳೆಲ್ಲ ಮುಂಜಾವ 3.30ಕ್ಕೇ ಎದ್ದಿದ್ದರು. ಬೆಳಗಿನ ಉಪಹಾರವನ್ನೂ ನಿರಾಕರಿಸಿದ್ದರು. ರಾತ್ರಿ ಊಟವನ್ನೂ ಮಾಡಿರಲಿಲ್ಲ. ನೇಣಿಗೂ ಮುನ್ನ ಸ್ನಾನ ಮಾಡಲು ಸೂಚನೆ ನೀಡಿದ್ದರೂ ಯಾರೋಬ್ಬರೂ ಸ್ನಾನ ಮಾಡಿರಲಿಲ್ಲ.
ನವದೆಹಲಿ[ಮಾ.20]: 7 ವರ್ಷಗಳ ನಂತರ ನಿರ್ಭಯಾ ರೇಪ್ ರಕ್ಕಸರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಗಿದೆ. ಆರೋಪಿಗಳನ್ನು ನೇಣಿಗೆ ಹಾಕುವ ಮೊದಲು ಪ್ರತ್ಯೇಕ ಸೆಲ್ ಇರಿಸಲಾಗಿತ್ತು.
ಅಕ್ಷಯ್ ಥಾಕೂರ್(31), ಪವನ್ ಗುಪ್ತಾ (25), ವಿನಯ್ ಶರ್ಮಾ(26), ಮುಕೇಶ್ ಸಿಂಗ್ (32)ನ್ನು ಶುಕ್ರವಾರ ಬೆಳಗ್ಗೆ 5.30ಕ್ಕೆ ನೇಣಿಗೇರಿಸಲಾಯಿತು. ಆರೋಪಿಗಳೆಲ್ಲ ಮುಂಜಾವ 3.30ಕ್ಕೇ ಎದ್ದಿದ್ದರು. ಬೆಳಗಿನ ಉಪಹಾರವನ್ನೂ ನಿರಾಕರಿಸಿದ್ದರು. ರಾತ್ರಿ ಊಟವನ್ನೂ ಮಾಡಿರಲಿಲ್ಲ. ನೇಣಿಗೂ ಮುನ್ನ ಸ್ನಾನ ಮಾಡಲು ಸೂಚನೆ ನೀಡಿದ್ದರೂ ಯಾರೋಬ್ಬರೂ ಸ್ನಾನ ಮಾಡಿರಲಿಲ್ಲ.
ಕೊನೆಯೂ ನಿರ್ಭಯಾಗೆ ಸಿಕ್ತು ನ್ಯಾಯ: ಕಾಮುಕರಿಗೆ ಗಲ್ಲು
ಸುಮಾರು 2 ಗಂಟೆಗಳ ಕಾಲ ನೇಣಿಗೆ ಹಾಕುವ ಪ್ರಕ್ರಿಯೆ ನಡೆದಿತ್ತು. ಇವರ್ಯಾರೂ ಯಾವುದೇ ಕೊನೆಯಾಸೆಯನ್ನೂ ಕೇಳಿಕೊಂಡಿರಲಿಲ್ಲ. ತಿಹಾರ್ ಜೈಲನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ನಾಲ್ವರನ್ನೂ ವೈದ್ಯರು ತಪಾಣೆಗೆ ಒಳಪಡಿಸಿದ್ದರು.
ನಿರ್ಭಯಾ ರೇಪ್ ಪ್ರಕರಣದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆರೋಪಿಗಳನ್ನು ನೇಣಿಗೇರಿಸುವಾಗ ಜೈಲು ಸೂಪರಿಡೆಂಟ್, ಡೆಪ್ಯುಟಿ ಸೂಪರಿಡೆಂಟ್, ವೈದ್ಯಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಒಬ್ಬ ಜೈಲು ಸಿಬ್ಬಂದಿ ಇದ್ದರು. ಪವನ್ ಜಲ್ಲದ್ ಆರೋಪಿಗಳನ್ನು ನೇಣಿಗೇರಿಸಿದ್ದಾರೆ.