ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿಲ್ಲ ಎನ್ನುವ ಕಾರಣಕ್ಕೆ ಪತ್ನಿಯೊಬ್ಬಳು ತನ್ನ ಪತಿಯ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವ ಘಟನೆ ನಡೆದಿದೆ.
ನವದೆಹಲಿ (ಫೆ.21): ಬಿಹಾರದ ಮಿಜಾಫರ್‌ಪುರದಲ್ಲಿ ನಡೆದ ವಿಚಿತ್ರ ಪ್ರಕರಣದಲ್ಲಿ ಗಂಡ ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿಲ್ಲ ಎನ್ನುವ ಕಾರಣಕ್ಕೆ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿ ಎಫ್‌ಐಆರ್ ದಾಖಲಿಸಿದ್ದಾಳೆ. ಇದರ ಬೆನ್ನಲ್ಲಿಯೇ ಮಹಿಳಾ ಠಾಣೆ ಪೊಲೀಶ್ ಸ್ಟೇಷನ್ ಆಕೆಯ ಪತಿ ಸೇರಿದಂತೆ ಇನ್ನೂ 6 ಜನರ ಮೇಲೆ ಕೇಸ್ ದಾಖಲಿಸಿದ್ದು, ತನಿಖೆ ಆರಂಭಿಸಿದೆ. ವೈಶಾಲಿ ಜಿಲ್ಲೆಯ ಲಾಲ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ಮೂಲದ ಮಹಿಳೆ ಈ ಕೇಸ್ ದಾಖಲಿಸಿದ್ದಾಳೆ. ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ, "ನನಗೆ 31 ಮೇ 2021 ರಂದು ಮದುವೆಯಾಗಿತ್ತು" ಎಂದು ಸಂತ್ರಸ್ತೆ ಹೇಳಿದ್ದಾಳೆ. ಮದುವೆಯ ನಂತರ ನಾನು ಅತ್ತೆಯ ಮನೆಗೆ ಹೋಗಿದ್ದೆ. ಅದರೆ, ಮದುವೆಯಾಗಿ ಎರಡು ವರ್ಷಗಳಾಗುತ್ತಾ ಬಂದಿದೆ. ಇಲ್ಲಿಯವರೆಗೂ ಪತಿ ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿಲ್ಲ. ಇದೇ ವಿಚಾರವನ್ನು ನಾನು ನನ್ನ ಅತ್ತೆಗೆ ತಿಳಿಸಿದಾಗ ಅವರಿಂದಲೂ ಯಾವುದೇ ಸಹಾಯ ನನಗೆ ಸಿಕ್ಕಿಲ್ಲ. ಈ ಕುರಿತಂತೆ ನಾನು ನನ್ನ ಪತಿಯನ್ನು ಪ್ರಶ್ನೆ ಮಾಡಿದಾಗ, ನನ್ನ ಮೇಲೆ ದೌರ್ಜನ್ಯ ಹಾಗೂ ಹಲ್ಲೆ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ನಾನು ನನ್ನ ತಾಯಿಯ ಮನೆಗೆ ಹೊರಟಲು ನಿಂತಾಗ ಎಲ್ಲರೂ ಸೇರಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಸಾಕಷ್ಟು ಕೌನ್ಸೆಲಿಂಗ್ ಮಾಡಿದ ಬಳಿಕವೂ ಸ್ಥಿತಿ ಹಾಗೆಯೇ ಇದ್ದ ಕಾರಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ. ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 498A, 379, 504, 506, 34 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಅಪ್ರಾಪ್ತ ಬಾಲಕನನ್ನು ಸೆಕ್ಸ್‌ಗೆ ಬಳಸಿದ ಆರೋಪ, ಕೋರ್ಟ್‌ಗೆ ಹಾಜರಾಗಿ ಮೌನಕ್ಕೆ ಶರಣಾದ ನಟಿ!
ಮದುವೆಯನ್ನು ಹೇಗಾದರೂ ಮಾಡಿ ಕೊನೆಮಾಡುವ ಮೂಲಕ ವೈಶಾಲಿ ಜಿಲ್ಲೆಯಲ್ಲಿರುವ ತನ್ನ ಪೋಷಕರ ಮನೆಗೆ ಮರಳುವ ನಿಟ್ಟಿನಲ್ಲಿ ಸಂತ್ರಸ್ಥೆ ಪ್ರಯತ್ನ ಮಾಡಿದ್ದಾಳೆ. ಆದರೆ, ಆಕೆಯನ್ನು ಬಿಟ್ಟುಕೊಡಲು ಗಂಡನ ಮನೆಯವರು ತಯಾರಿಲ್ಲ. ಹಾಗೇನಾದರೂ ಮಾಡಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕೆಗೆ ಜೀವಬೆದರಿಕೆ ಹಾಕಿದ್ದಾರೆ. ಸಮಸ್ಯೆಗೆ ಶಾಂತಿಯುತವಾಗಿ ಪರಿಹಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಿದರೆ, ಆದರೆ ಯಾವುದೂ ಫಲ ಕೊಟ್ಟಿಲ್ಲ ಎಂದು ಸಂತ್ರಸ್ಥೆ ಹೇಳಿದ್ದಾರೆ. ಈಗ ನನ್ನ ಸಹನೆಯ ಕಟ್ಟೆ ಮೀರಿದೆ. ಅದಲ್ಲದೆ, ಅವರು ನನ್ನ ಮೇಲೆ ನಿಂದನೆ ಹಾಗೂ ಹಲ್ಲೆ ಕೂಡ ಮಾಡುತ್ತಿದ್ದಾರೆ. 2021ರಲ್ಲಿ ನಾನು ಮದುವೆಯಾದ ದಿನದಿಂದಲೂ ಇದೇ ರೀತಿಯ ಪರಿಸ್ಥಿತಿ ಇದೆ. ಕೊನೆಗೆ ಪರಿಹಾರ ಹುಡುಕಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಠಾಣೆ ಮಟ್ಟಿಲೇರಿದ್ದೇನೆ ಎಂದಿದ್ದಾರೆ.
ವಯಾಗ್ರ ಸೇವಿಸಿ ಫರ್ಸ್ಟ್ ನೈಟ್‌ನಲ್ಲಿ ಭಾಗಿಯಾದ ಪತಿ, ಸಾವು ಕಂಡ ಪತ್ನಿ!