
ನವದೆಹಲಿ(ಡಿ.05): ಮಾಯಾನಗರಿ, ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬೈನಲ್ಲಿ ಜನರ ಜೀವನ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ಬಾಂಬೆ ಐಐಟಿ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಭಾರತದ ನಗರಗಳಲ್ಲಿರುವ ಪರಿಸ್ಥಿತಿಯ ವಾಸ್ತವತೆ ತಿಳಿಯುವ ಸಲುವಾಗಿ ನಡೆಸಲಾದ ಈ ಸಮೀಕ್ಷೆಯ ಸೂಚ್ಯಂಕ ಬಿಡುಗಡೆ ಮಾಡಲಾಗಿದೆ. ಇನ್ನು ಇದೇ ಮೊದಲ ಬಾರಿಗೆ ಲಿಂಗಾನುಪಾತ ಅಂಶ ಸೇರಿಸಿದ್ದು, ಚೆನ್ನೈ ಮಹಿಳೆಯರ ಪಾಲಿಗೆ ಅತ್ಯುತ್ತಮ ಹಾಗೂ ಸುರಕ್ಷತೆಯುಳ್ಳ ನಗರ ಎನಿಸಿಕೊಂಡಿದೆ.
ಈ ಸಮೀಕ್ಷೆಯಲ್ಲಿ ಒಳಪಡಿಸಲಾದ ದೇಶದ ಒಟ್ಟು 14 ನಗರಗಳ ಪೈಕಿ ಮುಂಬೈ ಮೊದಲ ಸ್ಥಾನ ಬಾಚಿಕೊಂಡರೆ, ರಾಷ್ಟ್ರ ರಾಜಧಾನಬಿ ದೆಹಲಿ, ಕೊಲ್ಕತ್ತಾ ಹಾಗೂ ಚೆನ್ನೈ ಇದಾಧ ಬಳಿಕದ ಸ್ಥಾನಗಳನ್ನು ಪಡೆದುಕೊಂಡಿವೆ. ಲಿಂಗ ಸಮಾನತೆ ಮಾನದಂಡ, ಜೀವನ ಗುಣಮಟ್ಟ ಈ ಫಲಿತಾಂಶಕ್ಕೆ ಸೇರಿಸಿದ್ದರೆ ಆರು ನಗರಗಳ ರ್ಯಾಂಕಿಂಗ್ ಬದಲಾಗುತ್ತಿತ್ತು.
ದೆಹಲಿ ಜೈಪುರ ಹಾಗೂ ಇಂದೋರ್ ಮೊದಲ ಮೂರು ಸ್ಥಾನಗಳನ್ನು ಅಲಂಕರಿಸುತ್ತಿದ್ದವು, ಈ ಮೂಲಕ ಮುಂಬೈ, ಭೋಪಾಲ್ ಮತ್ತು ಲಕ್ನೋವನ್ನು ಹಿಂದಿಕ್ಕುತ್ತಿದ್ದವು. ಲಿಂಗ ಸೂಚ್ಯಂಕದಲ್ಲಿ ಚೆನ್ನೈ, ಕೊಲ್ಕತ್ತಾ ಹಾಗೂ ಮುಂಬೈ ಮಾತ್ರ ಸರಾಸರಿಗಿಂತ ಅಧಿಕ ಅಂಕ ಗಳಿಸಿವೆ. ಇಂದೋರ್, ಜೈಪುರ ಹಾಗೂ ಪಾಟ್ನಾ ಸರಾಸರಿಗಿಂತ ಹಿಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ