
ಮುಂಬೈ(ಏ.30): ಪ್ರಪಂಚ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಕೊರೊನಾವೈರಸ್ ಎರಡನೇ ಅಲೆಯಲ್ಲಿ ಭಾರತದಲ್ಲಿ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಆದರೆ ಎಲ್ಲಾ ಕಷ್ಟಗಳ ಮಧ್ಯೆ, ದೇಶಾದ್ಯಂತ ಜನರು ತಮ್ಮ ಹೆಚ್ಚುವರಿ ಸಮಯ ಮತ್ತು ಸಂಪನ್ಮೂಲಗಳನ್ನು ಉತ್ತಮ ಕೆಲಸಕ್ಕಾಗಿ ಬಳಸುವುದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಿದ್ದಾರೆ.
ಅನೇಕರಿಗೆ ಮನೆಯಲ್ಲೇ ಐಸೋಲೇಷನ್‌ನಲ್ಲಿರುವ COVID-19 ರೋಗಿಗಳಿಗೆ ಆಹಾರವನ್ನು ಒದಗಿಸುವ ಅವಕಾಶವಾಗಿ ಬಂದಿದೆ. ಕೋವಿಡ್ ರೋಗಿಗಳು ಆರೋಗ್ಯಕರ ಆಹಾರವನ್ನು ಪಡೆಯುವುದು ಬಹಳ ಮುಖ್ಯ. ಇದನ್ನೇ ಕಾಯಕವಾಗಿ ಮಾಡಿಕೊಂಡಿದ್ದಾರೆ ಮುಂಬೈನ ಒಬ್ಬ ವ್ಯಕ್ತಿ.
ಹೆಚ್ಚುತ್ತಿರೋ ಕೊರೋನಾ ಮಧ್ಯೆ ಬದುಕೋಕೆ ಸುರಕ್ಷಿತ ದೇಶಗಳಿವು..!
ಉದ್ಯಮಿ ರಾಜೀವ್ ಸಿಂಘಾಲ್ ಅವರಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕರೋನವೈರಸ್ ಪಾಸಿಟಿವ್ ಬಂದಿತ್ತು. ನಂತರ, ಅವರ ಇಡೀ ಕುಟುಂಬಕ್ಕೆ ಪಾಸಿಟಿವ್ ಬಂತು. ಕ್ಯಾರೆಂಟೈನ್‌ನಲ್ಲಿದ್ದ ದಿನಗಳಲ್ಲಿ ಅವರಿಗೆ ಸರಿಯಾದ ಆಹಾರ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ಮನೆ ಊಟಕ್ಕಾಗಿ ಬಹಳಷ್ಟು ಹಂಬಲಿಸಿದ್ದರು ರಾಜೀವ್.
ಪ್ರಸ್ತುತ ಭಾರತ ಕರೋನವೈರಸ್ ಎರಡನೇ ಅಲೆಯೊಂದಿಗೆ ಹೋರಾಡುತ್ತಿದೆ. ಆಹಾರದ ವಿಷಯದಲ್ಲಿ ಜನರು ಅವರು ಕಷ್ಟಪಟ್ಟಂತೆ ಕಷ್ಟಪಡದಿರಲಿ ಎಂದೇ ರಾಜೀವ್ ಬಯಸುತ್ತಾರೆ. ಹಾಗಾಗಿ ಅವರು 200 ಕ್ಕೂ ಹೆಚ್ಚು COVID-19 ರೋಗಿಗಳಿಗೆ ದಿನಕ್ಕೆ ಎರಡು ಬಾರಿ ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರವನ್ನು ನೀಡಲು ಪ್ರಾರಂಭಿಸಿದ್ದಾರೆ. ಸಿಂಘಾಲ್ ಆಹಾರವನ್ನು ತಯಾರಿಸಲು ಮುಂಬೈನ ಮಲಾಡ್ನಲ್ಲಿ ಆಶಾ ಕಿಚನ್ ಫುಡ್ ಸೇವೆಯನ್ನು ನೇಮಿಸಿಕೊಂಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ