ಅತ್ಯಾಚಾರ ನಡೆಸಿ ಬಲವಂತದ ಮತಾಂತರ, ಕೇರಳ ಸ್ಟೋರಿ ಚಿತ್ರ ನೋಡಿ ಎಚ್ಚೆತ್ತ ಖ್ಯಾತ ಮಾಡೆಲ್!

Published : May 31, 2023, 07:25 PM IST
ಅತ್ಯಾಚಾರ ನಡೆಸಿ ಬಲವಂತದ ಮತಾಂತರ, ಕೇರಳ ಸ್ಟೋರಿ ಚಿತ್ರ ನೋಡಿ ಎಚ್ಚೆತ್ತ ಖ್ಯಾತ ಮಾಡೆಲ್!

ಸಾರಾಂಶ

ಕೇರಳ ಸ್ಟೋರಿ ಚಿತ್ರ ತೆರೆಕಂಡ ಬಳಿಕ ಹಲವು ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಖ್ಯಾತ ಮಾಡೆಲ್ ಇದೇ ರೀತಿ ಮೋಸ ಹೋಗಿದ್ದಾಳೆ. ಹಿಂದೂ ಹೆಸರಿನಲ್ಲಿ ಪ್ರೀತಿಯ ನಾಟವಾಡಿ ಅತ್ಯಾಚಾರ ಎಸಗಿದ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. 

ಮುಂಬೈ(ಮೇ.31): ಐಸಿಸ್ ಉಗ್ರವಾದ, ಮತಾಂತರ, ಭಯೋತ್ಪಾದನೆ ಷ್ಯಡ್ಯಂತ್ರ ಕುರಿತ ಕೇರಳ ಸ್ಟೋರಿ ಚಿತ್ರ ಭಾರಿ ಸಂಚಲನ ಸೃಷ್ಟಿಸಿದೆ. ಈ ಚಿತ್ರ ತೆರೆಕಂಡ ಬಳಿಕ ಹಲವು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಲವರು ಮೋಸಹೋಗಿರುವ ಕುರಿತು ದೂರು ದಾಖಲಿಸುವ ಧೈರ್ಯ ತೋರಿದ್ದಾರೆ. ಇದೀಗ ಮುಂಬೈನ ಖ್ಯಾತ ಮಾಡೆಲ್ ಇದೇ ರೀತಿ ಲವ್ ಜಿಹಾದ್‌ ಸಂಕಷ್ಟ ಅನುಭವಿಸಿರುವುದು ಬೆಳಕಿಗೆ ಬಂದಿದೆ. ಕೇರಳ ಸ್ಟೋರಿ ಚಿತ್ರ ನೋಡಿದ ಬಳಿಕ ಹಿಂದೂ ಹೆಸರಿನಲ್ಲಿ ಮೋಸ ಮಾಡಿ, ಬಲವಂತದ ಮತಾಂತರ ಮಾಡಿದ ತನ್ವೀರ್ ಅಕ್ತರ್ ಲೇಕ್ ಖಾನ್ ವಿರುದ್ದ ದೂರು ದಾಖಲಿಸಿದ್ದಾಳೆ. ಪ್ರೀತಿಯ ನಾಟಕವಾಡಿದ ತನ್ವೀರ್, ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮದುವೆಯಾಗಲು ಮತಾಂತರಕ್ಕೆ ಬಲವಂತ ಮಾಡಿದ್ದಾನೆ. 

23 ವರ್ಷದ ಮಾಡೆಲ್ 2020ರಲ್ಲಿ ಇದೇ ತನ್ವೀರ್ ಅಕ್ತರ್ ಮಾಡೆಲಿಂಗ್ ಎಜೆನ್ಸಿಯಲ್ಲಿ ಕೆಲಸಕ್ಕಾಗಿ ಸೇರಿಕೊಂಡಿದ್ದಳು. ಮೊದಲು ಈ ತನ್ವೀರ್ ಅಕ್ತರ್ ತನ್ನ ಹೆಸರನ್ನು ಯಶ್ ಎಂದು ಹೇಳಿಕೊಂಡಿದ್ದ. ಇಷ್ಟೇ ಅಲ್ಲ ತಾನು ಚಿರ ಯುವಕ ಎಂದು ಫೋಸ್ ಕೊಟ್ಟಿದ್ದ. ಆದರೆ ಈತನ ವಯಸ್ಸು 40. ಯಶ್ ಹೆಸರಿನಲ್ಲಿ ಪ್ರೀತಿಯ ನಾಟಕವಾಡಿದ ತನ್ವೀರ್, ಶೂಟಿಂಗ್ ಕಾರಣ ನೀಡಿ ರಾಂಚಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಮದುವೆಯಾಗಲು ಇಸ್ಲಾಂಗೆ ಮತಾಂತರವಾಗಬೇಕು ಎಂದಾಗ ಈತ ಯಶ್ ಅಲ್ಲ ತನ್ವೀರ್ ಎಂದು ತಿಳಿದಿದೆ.

ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್‌: 15 ದಿನದ ಹಿಂದೆಯೇ ಸ್ಕೆಚ್‌; ಕೊಲೆಗೆ ಕಾರಣ ಹೀಗಿದೆ..

ಒಂದೆಡೆ ಅತ್ಯಾಚಾರ, ಮತ್ತೊಂದೆಡೆ ಕರಿಯರ್. ಈ ಎರಡು ವಿಚಾರಗಳಿಂದ ತೀವ್ರ ಆಘಾತಗೊಂಡಿದ್ದಾಳೆ. ಇತ್ತ ತನ್ವೀರ್ ಮತಾಂತರವಾಗಲು ಒತ್ತಾಯಿಸಿದ್ದಾನೆ. ಕಿರುಕುಳ ತಾಳದೆ ನಾನು ಮುಂಬೈಗೆ ಹೋದರು ಬಿಡದ ತನ್ವೀರ್‌ ವಿರುದ್ಧ ಒಮ್ಮೆ ದೂರು ದಾಖಲಿಸಿದ್ದೆ. ಬಳಿಕ ನನ್ನ ಫೋಟೊಗಳನ್ನು ನನ್ನ ಕುಟುಂಬಸ್ಥರಿಗೆ ಕಳುಹಿಸಿ ಆತ ಬ್ಲ್ಯಾಕ್‌ಮೇಲ್‌ ಮಾಡಲು ಶುರುಮಾಡಿದ. ನನ್ನ ಮೇಲೆ ಮುಂಬೈನಲ್ಲಿ ಕೊಲೆ ಯತ್ನವನ್ನೂ ಮಾಡಿದ್ದ. ಇದಷ್ಟೇ ಅಲ್ಲದೇ ಹೆಸರು ಬದಲಾಯಿಸಿಕೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗು. ನನ್ನ ಮದುವೆಯಾಗು ಎಂದೆಲ್ಲ ಒತ್ತಡ ಹೇರಿದ್ದ. ನನ್ನ ಮತ್ತು ಕುಟುಂಬಸ್ಥರ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದ. ಕೇರಳ ಸ್ಟೋರಿ ಸಿನಿಮಾ ನೋಡಿದ ಬಳಿಕ ಇವನ ಮೇಲೆ ದೂರು ದಾಖಲಿಸಲು ನನಗೆ ಧೈರ್ಯ ಬಂತು’ ಎಂದು ತಿಳಿಸಿದ್ದಾರೆ. ಸದ್ಯ ತ್ನವೀರ್‌ ಮೇಲೆ ಹಲವಾರು ಸೆಕ್ಷನ್‌ಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅತ್ಯಾಚಾರ ನಡೆದಿರುವುದು ರಾಂಚಿ ಎಂದು ಮಾಡೆಲ್ ಹೇಳಿದ್ದಾಳೆ. ಹೀಗಾಗಿ ಈ ಪ್ರಕರಣವನ್ನು ಮುಂಬೈ ಪೊಲೀಸರು ರಾಂಚಿಗೆ ವರ್ಗಾಯಿಸಿದ್ದಾರೆ. ಆದರೆ ಈ ಪ್ರಕರಣ ಕುರಿತು ವಿಡಿಯೋ ಮೂಲಕ ಆರೋಪಿ ತನ್ವೀರ್ ಹೇಳಿಕೆ ನೀಡಿದ್ದಾರೆ. ಮಾಡೆಲ್ ಆರೋಪವನ್ನು ತಳ್ಳಿಹಾಕಿದ್ದಾನೆ. 

Divya Shridhar: ಲವ್​ ಜಿಹಾದ್​‌ಗೆ ಸಿಲುಕಿದ ಕನ್ನಡದ ಖ್ಯಾತ ನಟಿ, ತುಂಬು ಗರ್ಭಿಣಿಯಾದರೂ ತಪ್ಪಿಲ್ಲ ಕಷ್ಟ

ದೇಶದ ಹಲವು ರಾಜ್ಯದಲ್ಲಿ ಈ ರೀತಿಯ ಘಟನೆಗಳು ವರದಿಯಾಗಿದೆ. ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇತ್ತೀತೆಗೆ ಉತ್ತರ ಪ್ರದೇಶದ ಅಜಮ್‌ಗಢದ ಕೊಳಗೇರಿಯೊಂದರಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಮತಾಂತರ ಕಾರ್ಯಾಚರಣೆಯ ಮೇಲೆ ದಾಳಿ ನಡೆಸಿದ ಪೊಲೀಸರು 18 ಮಂದಿಯನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಕೊಳಗೇರಿಯೊಂದರಲ್ಲಿ ಪೂಜಾಸ್ಥಳ ನಿರ್ಮಾಣ ಮಾಡಿ, ಕವ್ವಾಲಿಗಳನ್ನು ಹಾಡುತ್ತಾ ಅಲ್ಲಿ ಬರುವ ಜನರಿಗೆ ಆಮಿಷಗಳನ್ನು ಒಡ್ಡಿ ಅಕ್ರಮವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!