ಪ್ರಕ್ಷುಬ್ಧ ಹವಾಮಾನದಲ್ಲಿ ಸಿಲುಕಿದ ವಿಸ್ತಾರ ವಿಮಾನ, ಮೂವರು ಪ್ರಯಾಣಿಕರಿಗೆ ಗಾಯ

By Suvarna NewsFirst Published Jun 7, 2021, 10:24 PM IST
Highlights
  • ಮುಂಬೈನಿಂದ ಕೋಲ್ಕತಾಗೆ ಪ್ರಯಾಣಿಸಿದ ವಿಸ್ತಾರ ವಿಮಾನ
  • ಕೋಲ್ಕಾತದಲ್ಲಿ ಲ್ಯಾಂಡಿಂಗ್ ವೇಳೆ ಅವಘಡ
  • ಬೆನ್ನುಮೂಳೆ, ಕೈ ಸೇರಿದಂತೆ ಪ್ರಯಾಣಿಕರಿಗೆ ಗಾಯ

ಕೋಲ್ಕತಾ(ಜೂ.07):  ಮುಂಬೈನಿಂದ ಕೋಲ್ಕಾತಾಗೆ 120 ಪ್ರಯಾಣಿಕರನ್ನು ಹೊತ್ತು ಸಾಗಿದ ವಿಸ್ತಾರ ವಿಮಾನ ಲ್ಯಾಂಡಿಂಗ್ ವೇಳೆ ಅವಘಡಕ್ಕೀಡಾಗಿದೆ. ಪರಿಣಾಮ ಇಬ್ಬರು ಹಿರಿಯ ಪ್ರಯಾಣಿಕರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. 

ರೆಮ್ಡಿಸಿವಿರ್ ಲಸಿಕೆ ಹೊತ್ತ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ; ತನಿಖೆಗೆ ಆದೇಶಿಸಿದ ಸರ್ಕಾರ!.

ವಿಸ್ತಾರ ವಿಮಾನ ಕೋಲ್ಕಾತಾ ವಿಮಾನ ನಿಲ್ದಾಣದಲ್ಲಿ 15 ನಿಮಿಷ ಮುಂಚಿತವಾಗಿ ಲ್ಯಾಂಡಿಂಗ್(ಫ್ಲೈಟ್ ಟರ್ಬ್ಯುಲೆನ್ಸ್) ಆಗಿದೆ. ಪರಿಣಾಮ ಹಿರಿಯ ಪ್ರಯಾಣಿಕರೊಬ್ಬರು ಕೈ ಮೂಳೆ ಮುರಿತಕ್ಕೊಳಾಗಿದ್ದರೆ, ಮತ್ತೊರ್ವರ ಬೆನ್ನು ಮೂಳೆ ಮುರಿದಿದೆ. ತಕ್ಷಣವೇ ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಾಗಿದೆ.

ಯುಕೆ ಮೂಲದ ಬೋಯಿಂಗ್ 777 ವಿಮಾನ ಮುಂಬೈ - ಕೋಲ್ಕತಾ ನಡುವಿನ ಸೇವೆ ನೀಡುತ್ತಿದೆ. ಈ ಘಟನೆ ತೀವ್ರ ಬೇಸರತಂದಿದೆ. ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಕುರಿತು ತನಿಖೆ ನಡೆಸಲಿದ್ದೇವೆ ಎಂದು ವಿಸ್ತಾರ ಏರ್‌ಲೈನ್ ಹೇಳಿದೆ.

ಭಾರತೀಯ ಪ್ರಯಾಣಿಕನ ರಂಪಾಟಕ್ಕೆ ವಿಮಾನ ತುರ್ತು ಭೂಸ್ಪರ್ಶ; 10 ವರ್ಷ ಜೈಲು ಶಿಕ್ಷೆ ಭೀತಿ!.

ಪ್ರಾಥಮಿಕ ವರದಿಯಲ್ಲಿ ಹವಾಮಾನ ವೈಪರಿತ್ಯ ಕಾರಣಗಳು ಗೋಚರಿಸುತ್ತಿದೆ ಎಂದು ವಿಸ್ತಾರ ಏರ್‌ಲೈನ್ಸ್ ಹೇಳಿದೆ. ಹವಾಮಾನ ವೈಪರಿತ್ಯದಿಂದ ಜೂನ್ 6 ರಂದು ಬೆಂಗಳೂರಿನಿಂದ ಕೋಲ್ಕತಾ ವಿಮಾನವನ್ನು ರಾಂಚಿಯಲ್ಲಿ ಲ್ಯಾಂಡಿಂಗ್ ಮಾಡಲಾಗಿತ್ತು. 

click me!