ಪುಣೆಯ ಸ್ಯಾನಿಟೈಸರ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ; ಸಾಂತ್ವನ ಜೊತೆಗೆ ಪರಿಹಾರ ಘೋಷಿಸಿದ ಮೋದಿ

By Suvarna NewsFirst Published Jun 7, 2021, 7:36 PM IST
Highlights
  • ಹೊತ್ತಿ ಉರಿದ ಸ್ಯಾನಿಟೈಸರ್ ಫ್ಯಾಕ್ಟರಿ
  • ಘಟಕದೊಳಗೆ ಸಿಲುಕಿಗ ಹಲವು ಸಿಬ್ಬಂದಿಗಳು 
  • 7 ಮಂದಿ ಸಾವು, 20 ಮಂದಿ ರಕ್ಷಣೆ, 10 ಮಂದಿ ಕಣ್ಮೆರೆ

ಪುಣೆ(ಜೂ.07): ಕೊರೋನಾ ವಕ್ಕರಿಸಿದ ಬಳಿಕ ಸ್ಯಾನಿಟೈಸರ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಹಲವು ಕಂಪನಿಗಳು ಸ್ಯಾನಿಟೈಸರ್ ಉತ್ಪಾದನೆ ಮಾಡುತ್ತಿದೆ. ಹೀಗೆ ಸ್ಯಾನಿಟೈಸರ್ ಉತ್ಪಾದನೆ ಮಾಡುತ್ತಿದ್ದ ಪುಣೆಯ ಕೆಮಿಕಲ್ ಫ್ಯಾಕ್ಟರಿ ದಿಢೀರ್ ಹೊತ್ತಿ ಉರಿದಿದೆ.  ಸದ್ಯದ ಮಾಹಿತಿ ಪ್ರಕಾರ 7 ಮಂದಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ.

ಕೊರೋನಾ ಮಾರ್ಗಸೂಚಿ ಪಾಲನೆ ವೇಳೆ ಎಚ್ಚರ ಮರೆತ ಚಾಲಕ; ಹೊತ್ತಿ ಉರಿದ ಕಾರು!.

ಬೆಂಕಿ ಕಾಣಿಸಿಕೊಂಡ ತಕ್ಷಣವೆ ಕೆಮಿಕಲ್ ಹೊತ್ತಿ ಉರಿದಿದೆ. ಪರಿಣಾಣ ಇಡಿ ಫ್ಯಾಕ್ಟರಿಗೆ ಆವರಿಸಿಕೊಂಡಿದೆ. ಕೆಲಸ ಮಾಡುತ್ತಿದ್ದ  ಸಿಬ್ಬಂದಿಗಳಿಗೆ ಹೊರಗೆ ಓಡಲು ಸಾಧ್ಯವಾಗದೆ ಸಿಲುಕಿಕೊಂಡರು. 20 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು 10 ಮಂದಿ ಕಣ್ಮರೆಯಾಗಿದ್ದಾರೆ.

 

Maharashtra | 7 dead and 10 missing in massive fire incident at a company in Ghotawade Phata, Pune. Out of 37 on-duty employees, 20 have been rescued: Fire Department pic.twitter.com/wZs6j5UVwe

— ANI (@ANI)

ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಪೊಲೀಸರು ಠಿಕಾಂ ಹೂಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಗ್ನಿದುರಂತಕ್ಕೆ ತೀವ್ರ ಬೇಸರ ವ್ಯಕ್ತಪಡಿಸಸಿದ ಪ್ರಧಾನಿ ಮೋದಿ, ಮಡಿದವರ ಕಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ಸಾವಿರ ರೂಪಾಯಿ ಘೋಷಿಸಿದ್ದಾರೆ.

 

The Prime Minister has announced an ex-gratia of Rs. 2 lakh each from the PMNRF for the next of kin of those who have lost their lives due to a fire at an industrial unit in Pune, Maharashtra. Rs. 50,000 would be provided to those injured.

— PMO India (@PMOIndia)

Pained by the loss of lives due to a fire at a factory in Pune, Maharashtra. Condolences to the bereaved families.

— Narendra Modi (@narendramodi)
click me!