ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್‌ಗೆ 5 ವರ್ಷ ಜೈಲು ಶಿಕ್ಷೆ!

By Suvarna NewsFirst Published Feb 12, 2020, 5:00 PM IST
Highlights

ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅಂದರ್| ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪ| ಹಫೀಜ್ ಸಯೀದ್’ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕ್ ನ್ಯಾಯಾಲಯ| ಹಫೀಜ್ ವಿರುದ್ಧ ಪಾಕಿಸ್ತಾನದಲ್ಲಿ ಒಟ್ಟು 23 ಭಯೋತ್ಪಾದನಾ ಪ್ರಕರಣಗಳು ದಾಖಲು| ಹಫೀಜ್ ವಿರುದ್ಧ ನೇರ ಭಯೋತ್ಪಾದನೆ ಆರೋಪ ಏಕಿಲ್ಲ?| ಭಾರತ ನೀಡಿದ ಸಾಕ್ಷಿಗಳನ್ನು ಪರಿಗಣಿಸದ ಪಾಕಿಸ್ತಾನಕ್ಕೆ ಧಿಕ್ಕಾರ|

ನವದೆಹಲಿ(ಫೆ.12): ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ ಪಾಕಿಸ್ತಾನ ನ್ಯಾಯಾಲಯ, ಜೈಷ್-ಎ-ಮೊಹ್ಮದ್ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್’ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಹಫೀಜ್ ಸಯೀದ್ ಹಾಗೂ ಆತನ ಜಮಾತ್-ಉದ್-ದಾವಾ ಸಂಘಟನೆ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಹಫೀಜ್ ಸಯೀದ್’ಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಪಾಕಿಸ್ತಾನ ನ್ಯಾಯಾಲಯ ಆದೇಶ ಹೊರಡಿಸಿದೆ.

A Pakistan court convicts Jamat-ud-Dawa chief (JuD) Hafiz Saeed for 5 years in terror financing cases. (file pic) pic.twitter.com/NeokVilX4p

— ANI (@ANI)

ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನದಲ್ಲಿ ಒಟ್ಟು 23 ಭಯೋತ್ಪಾದನಾ ಪ್ರಕರಣಗಳು ದಾಖಲಾಗಿದ್ದು, ನೇರ ಭಯೋತ್ಪಾದನೆ ಹೊರಿಸದೇ ಕೇವಲ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಕಾರಣ ನೀಡಿ ಶಿಕ್ಷೆ ವಿಧಿಸಿರುವುದು ಆಶ್ಚರ್ಯ ತರಿಸಿದೆ.

ನೂತನ ಭಯೋತ್ಪಾದನಾ ತಡೆ ಕಾಯ್ದೆ:ಸಯೀದ್‌,ಮಸೂದ್‌,ದಾವೂದ್‌ ಹೊಸದಾಗಿ ಉಗ್ರ ಪಟ್ಟ

ಮುಂಬೈ ದಾಳಿಯ ರೂವಾರಿಯಾಗಿರುವ ಹಫೀಜ್ ಸಯೀದ್ ವಿರುದ್ಧ ಭಾರತ ಅದೆಷ್ಟೇ ಸಾಕ್ಷಿಗಳನ್ನು ನೀಡಿದ್ದರೂ ಸುಮ್ಮನಿರುವ ಪಾಕಿಸ್ತಾನ, ಇದೀಗ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿರುವುದು ಹಾಸ್ಯಾಸ್ಪದ.

ಹಫೀಜ್ ಸಯೀದ್ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ, ಈಗಾಗಲೇ ಸಂಘಟನೆ ಮೇಲೆ ನಿಷೇಧ ಹೇರಿದೆ.

click me!