'ಈ ದೋಸೆ ರೇಟ್‌ನಲ್ಲಿ ಚಿನ್ನ ಖರೀದಿಸ್ತೀನಿ..' ಮುಂಬೈನಲ್ಲಿ ಮಸಾಲೆ ದೋಸೆಗೆ 600 ರೂಪಾಯಿ!

By Santosh Naik  |  First Published Dec 27, 2023, 8:16 PM IST


ರೆಸ್ಟೋರೆಂಟ್‌ನ ಮೆನ್ಯುವಿನಲ್ಲಿ ಬಟರ್‌ಮಿಲ್ಕ್‌ ವಿತ್‌ ಮಸಾಲೆ ದೋಸೆಯ ಬೆಲೆ 600 ರೂಪಾಯಿ ಆಗಿದ್ದರೆ, ಬೆಣ್ಣೆ ಖಾಲಿ ದೋಸೆಯ ಬೆಲೆ 620 ರೂಪಾಯಿ ಆಗಿದೆ.


ಮುಂಬೈ (ಡಿ.27): ಒಂದು ಮಸಾಲೆ ದೋಸೆಗೆ ನೀವು ಈವರೆಗೂ ಹೆಚ್ಚೆಂದರೆ ಎಷ್ಟು ಹಣ ನೀಡಿರಬಹುದು? 100, 250.. ಗರಿಷ್ಠ ಎಂದರೆ 300 ರೂಪಾಯಿ ನೀಡಿರಬಹುದು. ಆದರೆ, ಇತ್ತೀಚೆಗೆ ಮುಂಬೈನ ಏರ್‌ಪೋರ್ಟ್‌ನಲ್ಲಿರುವ ರೆಸ್ಟೋರೆಂಟ್‌, ಒಂದು ಮಸಾಲೆದೋಸೆಗೆ ಫಿಕ್ಸ್ ಮಾಡಿರುವ ಬೆಲೆ ಕೇಳಿ ಗ್ರಾಹಕರು ಹೌಹಾರಿದ್ದಾರೆ. ಈ ಕುರಿತಾದ ವಿಡಿಯೋವನ್ನು ಕೂಡ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ಜಗತ್ತಿನ ಅತ್ಯಂತ ದುಬಾರಿ ದೋಸೆಯ ರೇಟ್‌ ಕೇಳಿ ಅಚ್ಚರಿ ಪಟ್ಟಿದ್ದಾರೆ. ಮುಂಬೈ ಏರ್‌ಪೋರ್ಟ್‌ನಲ್ಲಿರುವ ರೆಸ್ಟೋರೆಂಟ್‌ನ ರೇಟ್‌ ಚಾರ್ಟ್‌ನ ವಿಡಿಯೋವನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಚೆಫ್‌ ದೋಸೆಯನ್ನು ಸಿದ್ಧ ಮಾಡುತ್ತಿದ್ದು, ನಿಧಾನವಾಗಿ ವಿಡಿಯೋ ರೆಸ್ಟೋರೆಂಟ್‌ನ ಮೆನ್ಯು ಕಾರ್ಡ್‌ನತ್ತ ಹೊರಳುತ್ತದೆ. ಇದರಲ್ಲಿ ಬಟರ್‌ಮಿಲ್ಕ್‌ ವಿತ್‌ ಮಸಾಲೆದೋಸೆಯ ಬೆಲೆ 600 ರೂಪಾಯಿ ಆಗಿದ್ದರೆ, ಬೆಣ್ಣೆ ಖಾಲಿ ದೋಸೆಯ ಬೆಲೆ 620 ರೂಪಾಯಿ ಆಗಿದೆ. ಹಾಗೇನಾದರೂ ಈ ದೋಸೆಯೊಂದಿಗೆ ಲಸ್ಸಿ ಅಥವಾ ಫಿಲ್ಟರ್‌ ಕಾಫಿ ಕುಡಿಯುತ್ತೀರಿ ಎಂದಾದಲ್ಲಿ ಮೊತ್ತ ಇನ್ನಷ್ಟು ಏರಿಕೆಯಾಗುತ್ತದೆ.

ಈ ವಿಡಿಯೋವನ್ನು ಚೆಫ್‌ಡನ್‌ಇಂಡಿಯಾ (chefdonindia) ಇನ್ಸ್‌ಟಾಗ್ರಾಮ್‌ ಪೇಜ್‌ ಹಂಚಿಕೊಂಡಿದೆ. ವಿಡಿಯೋಗೆ ನೀಡಿರುವ ಕ್ಯಾಪ್ಶನ್‌ನಲ್ಲಿ ಮುಂಬೈ ಏರ್‌ಪೋರ್ಟ್‌ನಲ್ಲಿ ದೋಸೆಗಿಂತ ಚಿನ್ನವೇ ಕಡಿಮೆ ಬೆಲೆಗೆ ಸಿಗಬಹುದು. ಇಲ್ಲಿ ಒಂದು ದೋಸೆಗೆ 600 ರೂಪಾಯಿ ಎಂದು ಬರೆದುಕೊಂಡಿದೆ. ಈ ಪೋಸ್ಟ್‌ಗೆ ಇಲ್ಲಿಯವರೆಗೂ 9 ಲಕ್ಷ ವೀವ್ಸ್‌ಗಳು ಬಂದಿವೆ.

ಈ ಕುರಿತಾಗಿ ಒಂದು ಕೇಸ್‌ ಫೈಲ್‌ ಮಾಡಲೇಬೇಕಿದೆ. ಕೇವಲ ಶ್ರೀಮಂತರು ಮಾತ್ರವೇ ವಿಮಾನದಲ್ಲಿ ಪ್ರಯಾಣ ಮಾಡೋದಿಲ್ಲ. ವಿಮಾನದಲ್ಲಿ ಉಚಿತವಾಗಿ ಊಟ ಸಿಗುತ್ತದೆ ಎಂದುಕೊಳ್ಳುವ ಬಡವರು ಕೂಡ ಪ್ರಯಾಣ ಮಾಡುತ್ತಾರೆ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ, ದೋಸೆಗೆ ಹಾಕಲಾಗಿರುವ ಐಟಮ್‌ಗಳನ್ನು ನೋಡಿ, 600 ರೂಪಾಯಿ ಕೊಟ್ಟರೂ ಇದರ ಟೇಸ್ಟ್‌ ಕೆಟ್ಟದಾಗಿಯೇ ಇದೆ ಎಂದು ಹೇಳಬಲ್ಲ. ಅದರ ಮೇಲೆ ಹಾಕಲಾಗಿರುವ ಒಣ ಬಟಾಟೆ ಮಸಾಲೆಯನ್ನು ನೋಡಿದರೇ ಹೇಳಬಹುದು' ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ, ಚಿನ್ನ ಇದಕ್ಕಿಂತಲೂ ದುಬಾರಿ ಎಂದು ವಾಸ್ತವ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಇದೆಲ್ಲದರ ನಡುವೆ ಒಬ್ಬ ಬಳಕೆದಾರ ರೆಸ್ಟೋರೆಂಟ್‌ನಲ್ಲಿರುವ ಬೆಲೆಯ ಪರವಾಗಿ ಮಾತನಾಡಿದ್ದಾರೆ. 'ಕೇವಲ ಆಹಾರದ ಬೆಲೆಯನ್ನು ಮಾತ್ರ ನೀಡುತ್ತಿದ್ದೀರಿ ಎಂದು ಏಕೆ ಭಾವಿಸುತ್ತೀರಿ? ನೀವು ಅಲ್ಲಿನ ಆಪರೇಷನ್ಸ್‌ ವೆಚ್ಚ, ಮೂಲಸೌಕರ್ಯದ ವೆಚ್ಚ, ಕನ್ವೀನಿಯನ್ಸ್‌ ವೆಚ್ಚ.. ಎಲ್ಲವನ್ನೂ ನೀವು ಸೇವೆಗಳ ಹೆಸರಿನಲ್ಲಿ ನೀಡುತ್ತೀರಿ. ಹಾಗಾಗಿ ನೀವು ಇದಕ್ಕೆ ಹಣ ಪಾವತಿ ಮಾಡಲೇಬೇಕು' ಎಂದು ಬರೆದಿದ್ದಾರೆ.

Tap to resize

Latest Videos

undefined

 

ಅತಿ ಹೆಚ್ಚು ಹುಡುಕಾಡಿದ ಆಹಾರಗಳಲ್ಲಿ ಮಸಾಲೆದೋಸೆಗೆ ಸ್ಥಾನ-ಮಾನ, ಜೈ

ದೋಸೆಯ ಹೊರತಾಗಿ, ಇದೇ ಸ್ಥಳದಲ್ಲಿ ದೊರೆಯುವ ಉತ್ತಪ್ಪ ಮತ್ತು ಇಡ್ಲಿಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಇಡೀ ರೆಸ್ಟೋರೆಂಟ್‌ನ ಸಂಪೂರ್ಣ ಮೆನು ತುಂಬಾ ದುಬಾರಿಯಾಗಿದೆ. ವೀಡಿಯೋದಲ್ಲಿ ತೋರಿಸಿರುವಂತೆ, ಬಟರ್‌ಮಿಲ್ಕ್‌ ವಿತ್‌ ಮಸಾಲೆ ದೋಸೆಯ ಬೆಲೆ 600 ರೂಪಾಯಿ ಆಗಿದ್ದರೆ, ಬಟರ್‌ಮಿಲ್ಕ್‌ ವಿತ್‌ ಇಡ್ಲಿಗೆ 530 ರೂಪಾಯಿ ಆಗಿದೆ. ಹಾಗಿದ್ದರೂ, ದೋಸೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿರುವುದ ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ, ಗುರುಗ್ರಾಮ್‌ನಲ್ಲಿರುವ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಎರಡು ದೋಸೆಗಳಿಗೆ ₹ 1000 ಪಾವತಿಸುವ ಬಗ್ಗೆ ಜೋಮೋಟಾ ಉದ್ಯೋಗಿ ಅಚ್ಚರಿ ವ್ಯಕ್ತಪಡಿಸಿದ್ದರು.

ಮಸಾಲೆದೋಸೆ, ಮೈಸೂರು ಪಾಕ್ ತಿಂದು ಸಕ್ಸಸ್ ಸೆಲಬ್ರೇಟ್ ಮಾಡಿದ ’ಕವಲುದಾರಿ’

click me!