ಹಾವಿನ ಜೊತೆ 4 ದಿನ ಕಳೆದ ಬೋರ್‌ವೆಲ್‌ಗೆ ಬಿದ್ದ ಬಾಲಕ

By Anusha KbFirst Published Jun 15, 2022, 1:17 PM IST
Highlights

80 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ದಿವ್ಯಾಂಗ ಬಾಲಕನನ್ನು 104 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಛತ್ತೀಸ್‌ಗಢದ 
ಜಂಜಗೀರ್-ಚಂಪಾ ಜಿಲ್ಲೆಯ  ರಾಹುಲ್ ಸಾಹು ಎಂಬ 10 ವರ್ಷದ ವಿಶೇಷ ಚೇತನ ಮಗು ಜೂನ್ 10 ರಂದು ಬೋರ್‌ವೆಲ್‌ಗೆ ಬಿದ್ದಿತ್ತು.

ರಾಯ್‌ಪುರ: 80 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ದಿವ್ಯಾಂಗ ಬಾಲಕನನ್ನು 104 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಛತ್ತೀಸ್‌ಗಢದ 
ಜಂಜಗೀರ್-ಚಂಪಾ ಜಿಲ್ಲೆಯ (Janjgir-Champa district) ರಾಹುಲ್ ಸಾಹು (Rahul Sahu) ಎಂಬ 10 ವರ್ಷದ ವಿಶೇಷ ಚೇತನ ಮಗು ಜೂನ್ 10 ರಂದು ಬೋರ್‌ವೆಲ್‌ಗೆ ಬಿದ್ದಿತ್ತು. ಸುದ್ದಿ ತಿಳಿದು  ಕನಿಷ್ಠ 500 ಜನರನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯ ತಂಡ ಸುಮಾರು 104 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಜೂನ್ 14 ರಂದು ಮಧ್ಯರಾತ್ರಿಯ ಸುಮಾರಿಗೆ ರಾಹುಲ್ ಅವರನ್ನು ರಕ್ಷಣಾ ತಂಡದ ಸದಸ್ಯರು ಸ್ಟ್ರೆಚರ್‌ನಲ್ಲಿ ಸುರಂಗದಿಂದ ಹೊರಗೆ ಕರೆ ತಂದರು. ನಂತರ ಬಾಲಕನನ್ನು ಆಂಬ್ಯುಲೆನ್ಸ್‌ನಲ್ಲಿ ಬಿಲಾಸ್‌ಪುರದ ಅಪೊಲೊ ಆಸ್ಪತ್ರೆಗೆ (Apollo Hospital in Bilaspur) ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಈತನನ್ನು ಸಾಗಿಸಲು ಹಸಿರು ಕಾರಿಡಾರ್ ರಚಿಸಲಾಗಿತ್ತು.

ಇದು ನಮ್ಮೆಲ್ಲರ ಸಾಮೂಹಿಕ ವಿಜಯವಾಗಿದೆ. ಬಾಲಕ ರಾಹುಲ್ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ ಮತ್ತು ನಾವು ಅವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದೇವೆ  ಎಂದು ರಕ್ಷಣಾ ಕಾರ್ಯಾಚರಣೆಯ ನಂತರ ಜಾಂಜ್‌ಗೀರ್-ಚಂಪಾ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ (Jitendra Shukla) ಹೇಳಿದರು. ಇಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಉಸಿರು ಉಳಿಸಿಕೊಂಡು ಹೋರಾಡಿದ ಪುಟ್ಟ ಬಾಲಕ ರಾಹುಲ್ ಅವರ ಹೋರಾಟದ ಮನೋಭಾವಕ್ಕಾಗಿ  ಶುಕ್ಲಾ ಬಾಲಕನ್ನು ಶ್ಲಾಘಿಸಿದರು. ಬಾಲಕ ಬಿದ್ದಿದ್ದ ಕೊಳವೆಯ ಸಮೀಪ ಹಾವು ಮತ್ತು ಕಪ್ಪೆ ಇತ್ತು ಆದರೆ ಭಯವನ್ನು ತಡೆಯಲು ಆಡಳಿತವು ಈ ವಿಚಾರವನ್ನು ಆತನ ರಕ್ಷಣೆಗೂ ಮೊದಲು ಮರೆಮಾಚಿತು ಎಂದು ಅವರು ಹೇಳಿದರು.

Latest Videos

ಕರ್ನಾಟಕದಲ್ಲಿ ಮತ್ತೆ ಸಂಭವಿಸಿದ ಬೋರ್​ವೆಲ್ ದುರಂತ: ಎರಡೂವರೆ ವರ್ಷದ ಮಗು ಸಾವು

ಕಳೆದ ನಾಲ್ಕು ದಿನಗಳಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chief Minister Bhupesh Baghel), ರಕ್ಷಣಾ ತಂಡಕ್ಕೆ ಶುಭ ಕೋರಿ ಧನ್ಯವಾದ ತಿಳಿಸಿದ್ದಾರೆ. ತಂಡದ ಹಾರೈಕೆಗಳು ಮತ್ತು ದಣಿವರಿಯದ ಮತ್ತು ಬದ್ಧತೆಯ ಪ್ರಯತ್ನಗಳು ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾಗಿವೆ ಎಂದು ಟ್ವೀಟ್ ಮಾಡಿದ್ದಾರೆ. ರಾಹುಲ್ ಶೀಘ್ರ ಗುಣಮುಖರಾಗಲಿ ಎಂದು ಸಿಎಂ ಹಾರೈಸಿದ್ದಾರೆ.

Operation Divyanshi : ಕೊಳವೆಬಾವಿಗೆ ಬಿದ್ದ 15 ತಿಂಗಳ ಮಗುವಿನ ರಕ್ಷಣೆ!

ಇನ್ನು ಕೊಳವೆ ಬಾವಿಯಿಂದ ರಕ್ಷಿಸಲ್ಪಟ್ಟ ಬಾಲಕನನ್ನು ಸೂಕ್ಷ್ಮವಾಗಿ ನೋಡಿಕೊಳ್ಳಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದ್ದರೂ ಆಹಾರ ಮತ್ತು ದ್ರವಗಳ ಸೀಮಿತ ಸೇವನೆಯಿಂದಾಗಿ ಬಾಲಕ ಗಣನೀಯವಾಗಿ ದುರ್ಬಲಗೊಂಡಿದ್ದ. ಬೋರ್‌ವೆಲ್‌ನೊಳಗೆ ನೀರು ಮತ್ತು ಕೆಸರಿಗೆ ದೀರ್ಘಕಾಲದವರೆಗೆ ಒಡ್ಡಿಕೊಂಡಿರುವುದರಿಂದ ಕೆಲವು ಚರ್ಮದ ಸಮಸ್ಯೆಗಳೂ ಉಂಟಾಗಬಹುದು ಎಂದು ವೈದ್ಯರು ಹೇಳಿದರು. ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯ ಆಡಳಿತದ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ರಾಹುಲ್ ಸಿಕ್ಕಿಬಿದ್ದಿದ್ದ ಆಳಕ್ಕೆ ಸಮಾನಾಂತರವಾಗಿ ದೂರದಲ್ಲಿ ಮತ್ತೊಂದು ಆಳವಾದ ಹೊಂಡವನ್ನು ಅಗೆದು ಸುರಂಗದ ಮೂಲಕ ಆತನನ್ನು ಸಂಪರ್ಕಿಸಿ ರಕ್ಷಣೆ ಮಾಡಲಾಗಿದೆ.

ಆದಾಗ್ಯೂ, ಕಲ್ಲಿನ ಭೂಪ್ರದೇಶದಲ್ಲಿ ಆಳವಾದ ಹೊಂಡವನ್ನು ನಿರಂತರವಾಗಿ ಅಗೆಯುವುದು  ದೊಡ್ಡ ಸವಾಲಿನ ವಿಚಾರವಾಗಿತ್ತು. ರಾಹುಲ್ ಇರುವ ಆಳದಲ್ಲಿ ಕ್ಷಿಪ್ರ ಅಂತರ್ಜಲ ಮರುಪೂರಣವು ಅಪಾಯಕಾರಿ ಎಂದು ಸಾಬೀತಾಗಬಹುದಾಗಿರುವುದರಿಂದ ಹತ್ತಿರದ ಇತರ ಬೋರ್‌ವೆಲ್‌ಗಳ ಮೂಲಕ ನೀರನ್ನು ನಿರಂತರವಾಗಿ ಪಂಪ್ ಮಾಡಲು ತಂಡಗಳು ಗ್ರಾಮಸ್ಥರನ್ನು ಕೇಳಬೇಕಾಗಿತ್ತು.

ಮಣ್ಣು ಅಗೆಯುವವರು ತಮ್ಮ ಕೆಲಸವನ್ನು ಮಾಡಿದ ನಂತರ, ಡ್ರಿಲ್ ಯಂತ್ರಗಳನ್ನು ಹೊಂದಿದ  ರಕ್ಷಣಾ ತಂಡಗಳು ಸುರಂಗದ ಕೊನೆಯ ಹಂತವನ್ನು ಪೂರ್ಣಗೊಳಿಸಲು ಹೆಜ್ಜೆ ಹಾಕಿದವು. ಕೊನೆಯ 1.5 ಅಡಿಗಳು ವಿಶೇಷವಾಗಿ ಸವಾಲಾಗಿತ್ತು ಏಕೆಂದರೆ ಇದು ಗಟ್ಟಿಯಾದ ಬಂಡೆಯನ್ನು ಅಗೆಯುವುದನ್ನು ಒಳಗೊಂಡಿತ್ತು ಮತ್ತು ಯಾವುದೇ ಅಪಘಾತಕ್ಕೆ ಕಾರಣವಾಗಬಹುದಗಿತ್ತು ಎಂದು ರಕ್ಷಣಾ ತಂಡಗಳು ಕಾರ್ಯಾಚರಣೆಯ ಬಗ್ಗೆ ವಿವರಿಸಿದರು.

click me!