UP Elections: ಸೊಸೆ ಬೆನ್ನಲ್ಲೇ ಮುಲಾಯಂ ನಾದಿನಿ ಗಂಡ, ಕಾಂಗ್ರೆಸ್‌ 'ಪೋಸ್ಟರ್ ಗರ್ಲ್' ಕೂಡಾ ಬಿಜೆಪಿಗೆ!

By Suvarna NewsFirst Published Jan 20, 2022, 1:21 PM IST
Highlights

* ಚುನಾವಣೆಗೆ ಉತ್ತರ ಪ್ರದೇಶ ಬಿಜೆಪಿ ಸಜ್ಜು

* ಮುಲಾಯಂ ಸೊಸೆ ಬೆನ್ನಲ್ಲೇ ಇನ್ನಿಬ್ಬರು ಘಟಾನುಘಟಿ ನಾಯಕರು ಕೇಸರಿ ಪಾಳಯಕ್ಕೆ

* ಸೊಸೆ ಬೆನ್ನಲ್ಲೇ ಮುಲಾಯಂ ನಾದಿನಿ ಗಂಡ, ಕಾಂಗ್ರೆಸ್‌ 'ಪೋಸ್ಟರ್ ಗರ್ಲ್' ಕೂಡಾ ಬಿಜೆಪಿಗೆ

ಲಕ್ನೋ(ಜ.20): ಉತ್ತರ ಪ್ರದೇಶದಲ್ಲಿ (UP Election 2022) ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ. ಇದೀಗ ಮುಲಾಯಂ ಸಿಂಗ್ ಯಾದವ್ ಅವರ ನಾದಿನಿ ಗಂಡ ಪ್ರಮೋದ್ ಗುಪ್ತಾ ಮತ್ತು ಕಾಂಗ್ರೆಸ್ ನ ಪೋಸ್ಟರ್ ಗರ್ಲ್ ಪ್ರಿಯಾಂಕಾ ಮೌರ್ಯ ಬಿಜೆಪಿ ಸೇರಿದ್ದಾರೆ. ಈ ಹಿಂದೆ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರಿದ್ದರು.

ಬಿಜೆಪಿ ಸೇರುವ ಮುನ್ನ ಪ್ರಮೋದ್ ಗುಪ್ತಾ ಕೂಡ ದೊಡ್ಡ ಹೇಳಿಕೆ ನೀಡಿದ್ದಾರೆ. ಅಖಿಲೇಶ್ ಯಾದವ್ ಅವರು ಮುಲಾಯಂ ಸಿಂಗ್ ಯಾದವ್ ಅವರನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಿದರು. ಇಂದು ಪಕ್ಷದಲ್ಲಿ ಅವರಿಗೆ ಕೆಟ್ಟ ಸ್ಥಾನವಿದೆ. ಇಂದು ಕ್ರಿಮಿನಲ್‌ಗಳು ಮತ್ತು ಜೂಜುಕೋರರನ್ನು ಎಸ್‌ಪಿ ಕರೆತರಲಾಗುತ್ತಿದೆ ಎಂದು ಗುಪ್ತಾ ಹೇಳಿದರು.

ಅಷ್ಟೇ ಅಲ್ಲ, ಕಾಂಗ್ರೆಸ್‌ನ ಪೋಸ್ಟರ್ ಗರ್ಲ್ ಎನಿಸಿಕೊಂಡಿದ್ದ ಪ್ರಿಯಾಂಕಾ ಮೌರ್ಯ ಕೂಡ ಬಿಜೆಪಿ ಸೇರಿದ್ದಾರೆ. ಚುನಾವಣೆಗೂ ಮುನ್ನವೇ ಬಿಜೆಪಿ ಮತ್ತು ಎಸ್‌ಪಿಯಲ್ಲಿ ಚೆಕ್ ಮತ್ತು ಸೋಲಿನ ಆಟ ನಡೆಯುತ್ತಿದೆ ಎಂಬುವುದು ಉಲ್ಲೇಖನೀಯ. ಬಿಜೆಪಿ ತೊರೆದ ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ಎಸ್‌ಪಿ ಸ್ಥಾನ ನೀಡಿದೆ.

ಮುಲಾಯಂ ಕಿರಿ ಸೊಸೆ ಬಿಜೆಪಿಗೆ, ಕೇಸರಿ ಪಾಳಯಕ್ಕೆ ಕಂಟಕ?

 

ಯುಪಿ ಅಸೆಂಬ್ಲಿ ಚುನಾವಣೆ 2022 ರ ಮೊದಲು, ಭಾರತೀಯ ಜನತಾ ಪಕ್ಷವು ಸಮಾಜವಾದಿ ಪಕ್ಷಕ್ಕೆ ಬಹುದೊಡ್ಡ ಪೆಟ್ಟು ಕೊಟ್ಟಿದೆ. ಮುಲಾಯಂ ಸಿಂಗ್ ಯಾದವ್ ಅವರ ಕಿರಿ ಸೊಸೆ ಅಪರ್ಣಾ ಯಾದವ್ ಜನವರಿ 19, 2022 ರಂದು ಬುಧವಾರ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ಸೇರಿದ ಬಳಿಕ ಅಪರ್ಣಾ ಯಾದವ್ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದು, ನನ್ನ ಚಿಂತನೆಯಲ್ಲಿ ರಾಷ್ಟ್ರವೇ ಮೊದಲು ಎಂದು ಹೇಳಿದ್ದಾರೆ. ಈಗ ನಾನು ರಾಷ್ಟ್ರವನ್ನು ಆರಾಧಿಸಲು ಹೊರಟಿದ್ದೇನೆ. ನಾನು ಯಾವಾಗಲೂ ಪ್ರಧಾನಿಯಿಂದ ಪ್ರಭಾವಿತಳಾಗಿದ್ದೇನೆ ಎಂದು ಅವರು ಹೇಳಿದರು.

ರೀಟಾ ಬಹುಗುಣ ಅಸಮಾಧಾನವನ್ನು ಬಿಜೆಪಿ ಎದುರಿಸಬೇಕಾಗಬಹುದು

ಅಪರ್ಣಾ ಯಾದವ್ ಅವರು ಎಸ್‌ಪಿಯಿಂದ ಭ್ರಮನಿರಸನಗೊಂಡು ಬಿಜೆಪಿ ಸೇರಲು ಲಕ್ನೋ ಕ್ಯಾಂಟ್‌ ಸೀಟ್‌ ದೊಡ್ಡ ಕಾರಣ ಎನ್ನಲಾಗುತ್ತಿದೆ. ಆದರೆ, ಅಪರ್ಣಾ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ನಂತರ ಭಾರತೀಯ ಜನತಾ ಪಕ್ಷಕ್ಕೂ ಸಂಕಷ್ಟ ಎದುರಾಗಬಹುದು. ವಾಸ್ತವವಾಗಿ ಸಂಸದೆ ರೀಟಾ ಬಹುಗುಣ ಜೋಶಿ ಅವರು ತಮ್ಮ ಪುತ್ರ ಮಯಾಂಕ್ ಜೋಶಿಯನ್ನು ಲಕ್ನೋ ಕ್ಯಾಂಟ್ ಕ್ಷೇತ್ರದಿಂದ ಕಣಕ್ಕಿಳಿಸಲು ಬಯಸಿದ್ದಾರೆ. ಮಗನಿಗೆ ಟಿಕೆಟ್‌ ನೀಡುವುದಾದರೆ ಸಂಸದೆ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಹೀಗಿರುವಾಗ ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ ಹಾಗೂ ಮಗ ಮಯಾಂಕ್ ಜೋಶಿಗೆ ಕ್ಯಾಂಟ್‌ನಿಂದ ಟಿಕೆಟ್ ಸಿಗದಿರುವ ಸಾಧ್ಯತೆಯಿಂದ ರೀಟಾ ಬಹುಗುಣ ಜೋಶಿಯವರ ಅಸಮಾಧಾನವೂ ಪಕ್ಷಕ್ಕೆ ಬಿಸಿ ತುಪ್ಪವಾಗಬಹುದು.  

ಅಪರ್ಣಾ ಯಾದವ್ ಈಗಾಗಲೇ ಕ್ಯಾಂಟ್‌ನಿಂದ ಸ್ಪರ್ಧಿಸಲು ಯತ್ನಿಸಿದ್ದಾರೆ

ಅಪರ್ಣಾ ಯಾದವ್ ಅವರು 2017 ರಲ್ಲಿ ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್‌ ಪಡೆದು ಸ್ಪರ್ಧಿಸಿದ್ದರು. ಅವರು ಕೇವಲ 61 ಸಾವಿರ ಮತಗಳನ್ನು ಪಡೆದಿದ್ದರು. 2017 ರ ಚುನಾವಣೆಯಲ್ಲಿ ಬಿಜೆಪಿಯ ರೀಟಾ ಬಹುಗುಣ ಜೋಶಿ ಅವರನ್ನು (ಅಪರ್ಣಾ ಯಾದವ್) 33,796 ಮತಗಳಿಂದ ಸೋಲಿಸಿದ್ದರು ಎಂಬುವುದು ಉಲ್ಲೇಖನೀಯ. ರೀಟಾ 95,402 ಮತಗಳನ್ನು ಪಡೆದರೆ, ಅಪರ್ಣಾ ಕೇವಲ 61,606 ಮತಗಳನ್ನು ಗಳಿಸಿದ್ದರು.

ಕ್ಯಾಂಟ್ ಸೀಟಿನ ಜಾತಿ ಸಮೀಕರಣ ಏನು?

ಕ್ಯಾಂಟ್ ಸೀಟ್ ಬ್ರಾಹ್ಮಣ ಪ್ರಾಬಲ್ಯ ಹೊಂದಿದೆ. ಈ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಮತದಾರರು ಬ್ರಾಹ್ಮಣರಾಗಿದ್ದಾರೆ. ಇಲ್ಲಿನ ಸಿಂಧಿ-ಪಂಜಾಬಿ ಮತದಾರರ ಸಂಖ್ಯೆ ಸುಮಾರು 65 ಸಾವಿರ. ಅತ್ತ ಇಲ್ಲಿ ಮುಸ್ಲಿಂ ಜನಸಂಖ್ಯೆಯು ಸುಮಾರು 25 ಸಾವಿರ. ಯಾದವ ಜಾತಿಯ ಮತಗಳು ಸುಮಾರು 20 ಸಾವಿರ ಮತ್ತು ಠಾಕೂರ್ ಜಾತಿಯ ಮತಗಳು ಸುಮಾರು 15 ಸಾವಿರ.

ಲಕ್ನೋ ಕ್ಯಾಂಟ್ ಕ್ಷೇತ್ರ ಬಿಜೆಪಿಯ ಭದ್ರಕೋಟೆ

ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಇಲ್ಲಿ ರೀಟಾ ಬಹುಗುಣ ಜೋಶಿ 2017 ರ ಚುನಾವಣೆಯಲ್ಲಿ ಟಿಕೆಟ್ ಪಡೆದು ಗೆದ್ದಿದ್ದರು. ಇದಾದ ನಂತರ ಉಪಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ತಿವಾರಿ ಮತ್ತೊಮ್ಮೆ ಇಲ್ಲಿಂದ ಶಾಸಕರಾದರು. ಸುರೇಶ್ ತಿವಾರಿ ಅವರು ಇಲ್ಲಿಂದ ಮೂರು ಬಾರಿ (1996, 2002 ಮತ್ತು 2007) ಬಿಜೆಪಿಯ ಬಾವುಟ ಹಾರಿಸಿದ್ದಾರೆ. 2012ರಲ್ಲಿ ಈ ಕ್ಷೇತ್ರವನ್ನು ರೀಟಾ ಬಹುಗುಣ ಜೋಶಿ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದರು.

ಕ್ಯಾಂಟ್‌ನಿಂದ ಬಿಜೆಪಿ ಆಕಾಂಕ್ಷಿಗಳ ಪಟ್ಟಿ

ರಾಜಕೀಯ ಸಮೀಕರಣದ ಪ್ರಕಾರ ಬಿಜೆಪಿಗೆ ಅನುಕೂಲಕರ ಎನ್ನಲಾದ ಈ ಸ್ಥಾನಕ್ಕೆ ಅಭ್ಯರ್ಥಿಗಳ ಪಟ್ಟಿಯೂ ದೊಡ್ಡದಿದೆ. ಇಲ್ಲಿ ಸ್ವತಃ ಶಾಸಕ ಸುರೇಶ್ ತಿವಾರಿ ಹೆಸರೇ ಮೊದಲ ಸ್ಥಾನದಲ್ಲಿದೆ. ಇದರ ನಂತರ, ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ, ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ಸಂಪುಟ ಸಚಿವ ಮಹೇಂದ್ರ ಸಿಂಗ್, ಮೇಯರ್ ಸಂಯುಕ್ತಾ ಭಾಟಿಯಾ ಅವರ ಸೊಸೆ ಕೂಡ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

click me!