NSA Ajit Doval turns 77 : ಧೈರ್ಯ ಹಾಗೂ ದೇಶಭಕ್ತಿಯ ಒಂದೇ ರೂಪ ಭಾರತದ ಜೇಮ್ಸ್ ಬಾಂಡ್!

Suvarna News   | Asianet News
Published : Jan 20, 2022, 12:39 PM IST
NSA Ajit Doval turns 77 : ಧೈರ್ಯ ಹಾಗೂ ದೇಶಭಕ್ತಿಯ ಒಂದೇ ರೂಪ ಭಾರತದ ಜೇಮ್ಸ್ ಬಾಂಡ್!

ಸಾರಾಂಶ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ 77ನೇ ವರ್ಷಕ್ಕೆ ಕಾಲಿಟ್ಟ ಅಜಿತ್ ಧೋವಲ್ ಆಪರೇಷನ್ ಬ್ಲಾಕ್ ಥಂಡರ್, ಸರ್ಜಿಕಲ್ ಸ್ಟ್ರೈಕ್ ಹಿಂದಿನ ಬಿಗ್ ಮೈಂಡ್

ನವದೆಹಲಿ (ಜ. 20): ಭಾರತದ ಐದನೇ ಹಾಗೂ ಹಾಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ (National Security Advisor )ಅಜಿತ್ ಧೋವಲ್ (Ajit Doval)ಗುರುವಾರ 77ನೇ ವರ್ಷದ ಜನ್ಮದಿನ ಆಚರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಅಧಿಕಾರ ಸ್ವೀಕಾರ ಮಾಡಿದ ಹಂತದಿಂದಲೂ ಭದ್ರತಾ ಸಲಹೆಗಾರ ಹುದ್ದೆಯಲ್ಲಿರುವ ಅಜಿತ್ ಧೋವಲ್ ಅವರನ್ನು ದೇಶದ ಜನ ಪ್ರೀತಿಯಿಂದ "ಭಾರತದ ಜೇಮ್ಸ್ ಬಾಂಡ್" (Indian James Bond) ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ತಮ್ಮ ಜೀವಿತದ 40 ವರ್ಷವನ್ನು ದೇಶದ ರಕ್ಷಣೆಯ ವಿಚಾರವಾಗಿಯೇ ಕಳೆದಿರುವ ಧೈರ್ಯ ಹಾಗೂ ದೇಶಭಕ್ತಿಯ ಒಂದೇ ರೂಪವಾಗಿರುವ ಅಜಿತ್ ಧೋವಲ್ ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಜನ್ಮದಿನದ ಶುಭಾಶಯಗಳು ಬಂದಿವೆ. ಶತ್ರು ದೇಶದಲ್ಲಿ ಉಳಿದುಕೊಂಡು ಭಾರತೀಯ ಸೇನೆಗೆ ಮಾಹಿತಿಯನ್ನು ರವಾನೆ ಮಾಡುತ್ತಿದ್ದ ಅಜಿತ್ ಧೋವಲ್, ದೇಶದ ಬಹುಮುಖ್ಯ ಸಾಧನೆಗಳಾದ ಆಪರೇಷನ್ ಬ್ಲ್ಯಾಕ್ ಥಂಡರ್, ಸರ್ಜಿಕಲ್ ಸ್ಟ್ರೈಕ್  (Surgical Strike) ಹಿಂದಿನ ಬಿಗ್ ಮೈಂಡ್.

1945ರ ಜನವರಿ 20 ರಂದು ಉತ್ತಾರಖಂಡದ ಪೌರಿ ಗರ್ವಾಲ್ ನಲ್ಲಿ ಜನಿಸಿದ ಅಜಿತ್ ಧೋವಲ್ ಅವರ ತಂದೆ ಗುಣಾನಂದ್ ಧೋವಲ್ ಸೇನಾ ಸಿಇಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು. ಆ ಕಾರಣದಿಂದಾಗಿ ಅಜಿತ್ ಧೋವಲ್ ಅವರ ಶಾಲಾ ಶಿಕ್ಷಣವು ಅಜ್ಮೀರ್ ಮಿಲಿಟರಿ ಶಾಲೆಯಲ್ಲಿ ನಡೆದಿತ್ತು. 1967ರಲ್ಲಿ ಆಗ್ರಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮೊದಲ ಸ್ಥಾನದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಆ ಬಳಿಕ ಅವರು ಐಪಿಎಸ್ ಸಿದ್ಧತೆಯಲ್ಲಿ ತೊಡಗಿ 1968ರಲ್ಲಿ ಕೇರಳ ಕೆಡರ್ ನಿಂದ ಪೊಲೀಸ್ ಅಧಿಕಾರಿಯಾಗಿ ನೇಮಕವಾಗಿದ್ದರು. ನಾಲ್ಕು ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ, 1972ರಲ್ಲಿ ಇಂಟಲಿಜೆನ್ಸ್ ಬ್ಯುರೋಗೆ ಸೇರ್ಪಡೆಯಾಗಿದ್ದರು.  ಮುಸ್ಲಿಂ ವ್ಯಕ್ತಿಯಾಗಿ  ಭಾರತೀಯ ಗುಪ್ತಚರ ಸಂಸ್ಥೆ ರಾ ಗಾಗಿ ಕೆಲಸ ಮಾಡುವಾಗ ಪಾಕಿಸ್ತಾನದಲ್ಲಿ 7 ವರ್ಷಗಳನ್ನು ಅಜಿತ್ ಧೋವಲ್ ಕಳೆದಿದ್ದರು.
 


ಅಜಿತ್ ಧೋವಲ್ ಅವರ ಸಾಧನೆಗಳು
ಮಿಜೋರಾಂ ಶಾಂತಿ ಒಪ್ಪಂದ: 1980ರ ಅವಧಿಯಲ್ಲಿ ಮಿಜೋರಾಂನಲ್ಲಿ ದೊಡ್ಡ ಮಟ್ಟದ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದ ಮಿಜೋರಾಂ ನ್ಯಾಷನಲ್ ಫ್ರಂಟ್ ನ 6 ರಿಂದ 7 ಕಮಾಂಡೋಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಅಜಿತ್ ಧೋವಲ್ ಅವರನ್ನು ಸರ್ಕಾರದ ಪರವಾಗಿ ಸೇರ್ಪಡೆಗೊಳ್ಳುವಂತೆ ಮಾಡಿದ್ದರು. ಇದು ಎಂಎನ್ ಎಫ್ ನ ಬೆನ್ನೆಲುಬನ್ನು ಮುರಿದು ಹಾಕಿತ್ತು. ಇದರಿಂದ ಎಂಎನ್ಎಫ್ ವಿಚಾರ ತಣ್ಣಗಾಗಿ ಶಾಂತಿ ಒಪ್ಪಂದ ಏರ್ಪಡುವ ಮೂಲಕ ಮಿಜೋರಾಂನಲ್ಲಿ ಶಾಂತಿ ನೆಲೆಸಿತ್ತು.

ಕುಕಾ ಪರ್ರೆ ಮತ್ತು ಪಡೆಗಳ ಶರಣಾಗತಿ: 1990 ರಲ್ಲಿ, ಅಜಿತ್ ದೋವಲ್ ಕಾಶ್ಮೀರಕ್ಕೆ ಹೋಗಿದ್ದ ಸಮಯದಲ್ಲಿ ಕುಖ್ಯಾತ ಉಗ್ರಗಾಮಿ ಕುಕಾ ಪರ್ರೆ ಮತ್ತು ಅವರ ಸೈನಿಕರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಹೊಸ ಬೆಳವಣಿಗೆಯು 1996 ರಲ್ಲಿ ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ದಾರಿ ಮಾಡಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸ್ವರ್ಣ ಮಂದಿರ:  ಮಿಜೋ ನ್ಯಾಷನಲ್ ಫ್ರಂಟ್ ಶಾಂತಿ ಸಾಹಸದ ರೀತಿಯಲ್ಲಿಯೇ ಧೋವಲ್, 1984 ರಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ಒಳಗೆ ರಿಕ್ಷಾ ಚಾಲಕನ ಸೋಗಿನಲ್ಲಿ ಹೋಗಿ ಸೇನೆಗೆ ಎಲ್ಲಾ ಮಾಹಿತಿಯನ್ನು ಒದಗಿಸಿದ್ದರು. ಆಪರೇಷನ್ ಬ್ಲೂ ಸ್ಟಾರ್‌ಗಾಗಿ ಭಾರತೀಯ ಸೇನೆಯೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಇವರ ಮಾಹಿತಿಯಿಂದಾಗಿ ಸ್ವರ್ಣ ಮಂದಿರದಲ್ಲಿ ಖಲಿಸ್ತಾನಿ ಉಗ್ರರನ್ನು ಹತ್ಯೆ ಮಾಡಲು ಸೇನೆಗೆ ಯಾವುದೇ ಸಮಸ್ಯೆ ಆಗಿರಲಿಲ್ಲ.

ಮೋದಿ ರಹಸ್ಯ ಭೇಟಿ ಸೂತ್ರದಾರ ದೋವಲ್‌!
ಐಸಿಸಿ ಕಪಿಮುಷ್ಟಿಯಿಂದ ನರ್ಸ್ ಗಳ ಬಿಡುಗಡೆ: ಇರಾಕ್‌ನ ತಿಕ್ರಿತ್ ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದಿದ್ದ 46 ಭಾರತೀಯ ನರ್ಸ್‌ಗಳ ಬಿಡುಗಡೆಯಲ್ಲಿ ಧೋವಲ್ ಪ್ರಮುಖ ಪಾತ್ರ ವಹಿಸಿದ್ದರು. ಉನ್ನತ ರಹಸ್ಯ ಕಾರ್ಯಾಚರಣೆಯ ಭಾಗವಾಗಿ ಇರಾಕ್ ಗೆ ತೆರಳಿದ್ದ ಅಜಿತ್  ಧೋವಲ್, ಅಲ್ಲಿನ ಸ್ಥಳೀಯರು ಹಾಗೂ ಅಧಿಕಾರಿಗಳ ಸಂಪರ್ಕ ಮಾಡಿ, ಐಸಿಸಿ ಉಗ್ರರ ಕಪಿಮುಷ್ಠಿಯಿಂದ ನರ್ಸ್ ಗಳ ಬಿಡುಗಡೆಯಲ್ಲಿ ಕೆಲಸ ಮಾಡಿದ್ದರು.

ಸರ್ ಎಲ್ಲಾ ಕೂಲ್ ಇದೆ: ಶಾಗೆ ಧೋವಲ್ ಕೊಟ್ಟ ಮೆಸೆಜ್ ಸಿಕ್ಕಿದೆ!
ಮ್ಯಾನ್ಮಾರ್, ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 35-40 ಭಯೋತ್ಪಾದಕರನ್ನು ಕೊಂದ ಎರಡೂ ಸರ್ಜಿಕಲ್ ಸ್ಟ್ರೈಕ್‌ಗಳ ನೇತೃತ್ವವನ್ನು ಎನ್‌ಎಸ್‌ಎ ಆಗಿ ದೋವಲ್ ವಹಿಸಿದ್ದರು. 2015ರಲ್ಲಿ ಮ್ಯಾನ್ಮಾರ್‌ನಲ್ಲಿ ಗಡಿಯಲ್ಲಿ ಉಗ್ರರನ್ನು ಹತ್ಯೆಗೈದ ತಂಡದ ನೇತೃತ್ವ ವಹಿಸಿದ್ದರು. ಮತ್ತು 29 ಸೆಪ್ಟೆಂಬರ್ 2016 ರ ರಾತ್ರಿ, ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯಶಸ್ವಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?