ಕೇಂದ್ರ ಸಚಿವರಾದ ಮುಖ್ತಾರ್‌ ಅಬ್ಬಾಸ್‌ ನಖ್ವಿ, ಆರ್‌ಸಿಪಿ ಸಿಂಗ್‌ ರಾಜೀನಾಮೆ

Published : Jul 06, 2022, 05:02 PM ISTUpdated : Jul 06, 2022, 06:25 PM IST
ಕೇಂದ್ರ ಸಚಿವರಾದ ಮುಖ್ತಾರ್‌ ಅಬ್ಬಾಸ್‌ ನಖ್ವಿ, ಆರ್‌ಸಿಪಿ ಸಿಂಗ್‌ ರಾಜೀನಾಮೆ

ಸಾರಾಂಶ

ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರೊಂದಿಗೆ ಕೇಂದ್ರ ಉಕ್ಕು ಸಚಿವ ಆರ್‌ಸಿಪಿ ಸಿಂಗ್ ಕೂಡ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ನೀಡಿದ್ದಾರೆ.  

ನವದೆಹಲಿ (ಜುಲೈ 6): ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಇಲಾಖೆಯ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ (Mukhtar Abbas Naqvi) ಹಾಗೂ ಕೇಂದ್ರ ಉಕ್ಕು ಸಚಿವ ಆರ್‌ಸಿಪಿ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬುಧವಾರ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ನಖ್ವಿ ಹಾಗೂ ಆರ್‌ಸಿಪಿ ಸಿಂಗ್‌ ಅವರ ರಾಜ್ಯಸಭಾ ಸದಸ್ಯತ್ವ ಗುರುವಾರ ಕೊನೆಗೊಳ್ಳಲಿದ್ದು,  ನಿಯಮಗಳ ಪ್ರಕಾರ ನಾಳೆಯೊಳಗೆ ಕೇಂದ್ರ ಸಂಪುಟಕ್ಕೆ ರಾಜೀನಾಮೆ ರಾಜೀನಾಮೆ ನೀಡುವುದು ಅವರಿಗೆ ಅನಿವಾರ್ಯವಾಗಿತ್ತು. ಇದೇ ಮೊದಲ ಬಾರಿಗೆ ಕೇಂದ್ರ ಸಚಿವರು ಸಂಸತ್‌ನ ಎರಡೂ ಸದನಗಳಲ್ಲಿ ತಮ್ಮ ಸದಸ್ಯತ್ವ ಮುಕ್ತಾಯವಾದ ಕಾರಣಕ್ಕಾಗಿ ತಮ್ಮ ಸ್ಥಾನವನ್ನು ತೊರೆದಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ನಖ್ವಿ ಅವರನ್ನು ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಹೆಸರಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.  ಎರಡೂ ಸದನಗಳಿಗೆ ಮರು ಆಯ್ಕೆಯಾಗುವ ಮೊದಲು ಇಬ್ಬರೂ ಇನ್ನೂ ಆರು ತಿಂಗಳು ಸಚಿವರಾಗಿ ಮುಂದುವರಿಯಬಹುದು ಆದರೆ ಈ ಸಂದರ್ಭದಲ್ಲಿ, ಅವರು ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕಾಗುತ್ತದೆ. ಇತ್ತೀಚೆಗೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಹಲವಾರು ಬಿಜೆಪಿ ನಾಯಕರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ, ಪಕ್ಷವು ನಖ್ವಿಗೆ ರಾಜ್ಯಸಭಾ ಟಿಕೆಟ್ ನೀಡಿರಲಿಲ್ಲ.

ಬಿಹಾರದ ಮಿತ್ರ ಪಕ್ಷವಾದ ಜೆಡಿಯುನಿಂದ ಬಂದಿರುವ ಆರ್‌ಸಿಪಿ ಸಿಂಗ್, ಒಂದು ವರ್ಷದ ಹಿಂದೆ 2021ರ ಜುಲೈ 7 ರಂದು ಮೋದಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಇತ್ತೀಚೆಗೆ ರಾಜ್ಯಸಭಾ ಟಿಕೆಟ್‌ಗಳ ಘೋಷಣೆಯಲ್ಲಿ ನಿತೀಶ್ ಕುಮಾರ್ ರಾಜ್ಯಸಭೆಗೆ ಆರ್‌ಸಿಪಿ ಸಿಂಗ್ ಅವರ ಆಯ್ಕೆಯನ್ನು ನಿರಾಕರಿಸಿದರು.

ಇತ್ತೀಚೆಗೆ ತ್ರಿಪುರಾ ವಿಧಾನಸಭೆಗೆ ಆಯ್ಕೆಯಾದ ಕಾರಣಕ್ಕೆ ಮಾಣಿಕ್ ಸಹಾ ರಾಜೀನಾಮೆ ನೀಡಿದ ನಂತರ ತ್ರಿಪುರಾದಿಂದ ರಾಜ್ಯಸಭಾ ಸ್ಥಾನ ತೆರವಾಗಿತ್ತು. ಇದಲ್ಲದೇ, ಶೀಘ್ರ ಇನ್ನು ಯಾವುದೇ ರಾಜ್ಯಸಭಾ ಸ್ಥಾನ ತೆರವಾಗುವ ಲಕ್ಷಣಗಳಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌