ಲಾಲು ಯಾದವ್ ಭೇಟಿಯಾದ ಸಿಎಂ ನಿತೀಶ್ ಕುಮಾರ್, ಚಿಕಿತ್ಸೆ ಸೇರಿ ಎಲ್ಲಾ ಖರ್ಚು ಸರ್ಕಾರದ್ದೇ!

By Suvarna News  |  First Published Jul 6, 2022, 3:11 PM IST

* ಬಿಹಾರ ಮಾಜಿ ಸಿಎಂ ಆರೋಗ್ಯ ಗಂಭೀರ

* ದೆಹಲಿಗೆ ಶಿಫ್ಟ್‌ ಮಾಡೋ ಮೊದಲು ಲಾಲು ಭೇಟಿಯಾದ ನಿತೀಶ್ ಕುಮಾರ್

* ಲಾಲು ಚಿಕಿತ್ಸೆಯ ವೆಚ್ಚವೆಲ್ಲಾ ಸರ್ಕಾರದ್ದೇ ಎಂದು ಘೋಷಿಸಿದ ನಿತೀಶ್ ಕುಮಾರ್


ಪಾಟ್ನಾ(ಜು.06): ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಉತ್ತಮ ಚಿಕಿತ್ಸೆ ನೀಡಲು ರಾತ್ರಿ 7 ಗಂಟೆಗೆ ಏರ್ ಆಂಬುಲೆನ್ಸ್ ಮೂಲಕ ಪಾಟ್ನಾದಿಂದ ದೆಹಲಿಗೆ ಕರೆದೊಯ್ಯಲಾಗುತ್ತದೆ. ಆರ್‌ಜೆಡಿ ಮುಖ್ಯಸ್ಥರನ್ನು ದೆಹಲಿಗೆ ಕರೆದೊಯ್ಯಲಾಗುತ್ತದೆ ಎಂಬ ವರದಿಗಳ ನಡುವೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್‌ಜೆಡಿ ಮುಖ್ಯಸ್ಥರನ್ನು ಭೇಟಿ ಮಾಡಲು ಪಾರಸ್ ಆಸ್ಪತ್ರೆಗೆ ತಲುಪಿದ್ದಾರೆ. ತೇಜಸ್ವಿ ಯಾದವ್ ಬಳಿ ಲಾಲು ಯಾದವ್‌ರನ್ನು ದೆಹಲಿಗೆ ಕರೆದೊಯ್ಯುವ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ ನಿತೀಶ್ ಕುಮಾರ್ ಅವರ ಆರೋಗ್ಯದ ಬಗ್ಗೆ ವೈದ್ಯರ ಬಳಿಯೂ ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಅವರನ್ನು ದೆಹಲಿಗೆ ಕರೆದೊಯ್ದು ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ, ಯಾವುದೇ ತೊಂದರೆ ಇಲ್ಲ. ನಿತೀಶ್ ಕುಮಾರ್ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುವುದಾಗಿಯೂ ತಿಳಿಸಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆರೋಗ್ಯ ಮತ್ತಷ್ಟು ಗಂಭೀರ, AIIMSಗೆ ಏರ್‌ಲಿಫ್ಟ್‌!

Tap to resize

Latest Videos

ಲಾಲೂ ಜಿ ಅವರನ್ನು 10-15 ದಿನಗಳ ನಂತರ ಸಿಂಗಾಪುರಕ್ಕೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಈಗ ಮೂಳೆ ಮುರಿತ ಸಂಭವಿಸಿದೆ. ದೆಹಲಿಯಲ್ಲಿರುವ ವೈದ್ಯರೊಂದಿಗೆ ಮಾತನಾಡಿ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲಾಗುವುದು. ನಿನ್ನೆ ಪ್ರಧಾನಿಯಿಂದ ಕರೆ ಬಂದಿತ್ತು  ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಲಾಲು ಯಾದವ್ ಆಸ್ಪತ್ರೆಗೆ ದಾಖಲಾದ ಸಮಯದಿಂದ ಸಿಎಂ ನಿತೀಶ್ ಕುಮಾರ್ ನಿರಂತರವಾಗಿ ವರದಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುವುದು ಉಲ್ಲೇಖನೀಯ.

ಲಾಲು ಯಾದವ್ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದರು

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಪ್ರಸ್ತುತ ಪಾಟ್ನಾದ ಪಾರಸ್ ಆಸ್ಪತ್ರೆಯ ಸರ್ಜಿಕಲ್ ಐಸಿಯುನಲ್ಲಿ ದಾಖಲಾಗಿದ್ದಾರೆ. ಲಾಲು ಅವರು ತಮ್ಮ ಕುಟುಂಬದೊಂದಿಗೆ ವಾಸಿಸುವ ಸರ್ಕ್ಯುಲರ್ ರಸ್ತೆಯ 10 ರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಅಧಿಕೃತ ನಿವಾಸದಲ್ಲಿ ಭಾನುವಾರ ಮೆಟ್ಟಿಲುಗಳಿಂದ ಬಿದ್ದಿದ್ದರು. ಇದರಿಂದಾಗಿ ಅವರ ಬಲ ಭುಜದ ಮೂಳೆ ಮುರಿದು, ಬೆನ್ನಿಗೆ ಗಾಯಗಳಾಗಿವೆ.

ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಲಾಲು ಅವರ ಆರೋಗ್ಯ ಸ್ಥಿತಿ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಗಂಭೀರವಾಗಿದ್ದು, ಅವರನ್ನು ಪಾಟ್ನಾದ ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಾಲು ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಕುಟುಂಬದಲ್ಲೂ ಹತಾಶೆ ಮೂಡಿದೆ. ಸೋಮವಾರ, ಅವರ ಇಬ್ಬರು ಮಕ್ಕಳಾದ ತೇಜ್ ಪ್ರತಾಪ್ ಮತ್ತು ತೇಜಸ್ವಿ ಪರಾಸ್ ದಿನವಿಡೀ ಆಸ್ಪತ್ರೆಯಲ್ಲಿಯೇ ಇದ್ದರು.

ಮೆಟ್ಟಿಲಿನಿಂದ ಜಾರಿ ಬಿದ್ದು ಲಾಲು ಭುಜದ ಮೂಳೆ ಮುರಿತ

ಇದೇ ವೇಳೆ ಸಿಂಗಾಪುರದಲ್ಲಿ ನೆಲೆಸಿರುವ ಲಾಲು ಪುತ್ರಿ ರೋಹಿಣಿ ಆಚಾರ್ಯ ಕೂಡ ತಮ್ಮ ತಂದೆಯ ಆರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದು, ಇಂದು ಅವರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ರೋಹಿಣಿ ತನ್ನ ತಂದೆಯೊಂದಿಗೆ ವಿಡಿಯೋ ಕಾಲ್‌ನಲ್ಲಿ ನಡೆಸಿದ ಸಂಭಾಷಣೆಯ ಚಿತ್ರಗಳನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಗಮನಿಸಬೇಕಾದ ಸಂಗತಿಯೆಂದರೆ, ಭಾನುವಾರ ಬಿದ್ದ ನಂತರ ಲಾಲು ಯಾದವ್ ಅವರ ಪ್ರಾಥಮಿಕ ತನಿಖೆಯ ನಂತರ, ವೈದ್ಯರು ಅವರಿಗೆ ಮನೆಯಲ್ಲಿಯೇ ಇರಲು ಸಲಹೆ ನೀಡಿದ್ದರು. ಆದರೆ ಜುಲೈ 3ರ ರಾತ್ರಿ ಅವರ ಆರೋಗ್ಯ ಹದಗೆಟ್ಟಿತ್ತು. ಇದಾದ ಬಳಿಕ ಬೆಳಗ್ಗೆಯೇ ದಾಖಲಾಗಬೇಕಿದ್ದ ಅವರನ್ನು ಸೋಮವಾರ ಬೆಳಗ್ಗೆ ಶುಗರ್ ಲೆವೆಲ್ ಹೆಚ್ಚಾದ ಕಾರಣ ದಾಖಲಿಸಲಾಗಿತ್ತು.

click me!