ಬೆಂಗ್ಳೂರಿನಲ್ಲಿ ಸಿಕ್ಕ ಆತ, ಬಲವಂತವಾಗಿ ಗೋಮಾಂಸ ತಿನ್ನಿಸಿದ್ದ: ಮಿಸೆಸ್ ಇಂಡಿಯಾ ಗ್ಯಾಲಕ್ಸಿ ವಿಜೇತೆಯ ಮಾತು

By Mahmad Rafik  |  First Published Nov 9, 2024, 3:48 PM IST

ಅನ್‌ಟೋಲ್ಡ್ ಪಾಡ್‌ಕ್ಯಾಸ್ಟ್‌ನಲ್ಲಿ 2024ರ ಮಿಸೆಸ್ ಇಂಡಿಯಾ ಗ್ಯಾಲಕ್ಸಿ ರಿನಿಮಾ ಬೋರಾ, ತಮ್ಮ ಹಿಂದಿನ ಕರಾಳ ಅನುಭವಗಳನ್ನು ಬಹಿರಂಗಪಡಿಸಿದ್ದಾರೆ.


ನವದೆಹಲಿ: 2024ರ ಮಿಸೆಸ್ ಇಂಡಿಯಾ ಗ್ಯಾಲಕ್ಸಿ ಕಿರೀಟ ಮುಡಿಗೇರಿಸಿಕೊಂಡಿರುವ ರಿನಿಮಾ ಬೋರಾ ಮೊದಲ ಬಾರಿಗೆ ತಮ್ಮ ಜೀವನದ ಕರಾಳ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅನ್‌ಟೋಲ್ಡ್ ಪಾಡ್‌ಕ್ಯಾಸ್ಟ್‌ಗೆ ರಿನಿಮಾ ಬೋರಾ ಸಂದರ್ಶನ ನೀಡಿದ್ದು, ಇದರ ವಿಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ರಿನಿಮಾ ಅಸ್ಸಾಂ ಮೂಲದವರಾಗಿದ್ದು, ಶಿಕ್ಷಣಕ್ಕಾಗಿ ತಮ್ಮ 16ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬರುತ್ತಾರೆ. ಇಲ್ಲಿ ರಿನಿಮಾಗೆ ಮುಸ್ಲಿಂ ಹುಡುಗನೊಬ್ಬನ ಪರಿಚಯವಾಗುತ್ತದೆ. ಗೆಳೆಯ ಮತ್ತು ಆತನ ಕುಟುಂಬಸ್ಥರು ನೀಡಿದ ಕಿರುಕುಳ ಏನು ಎಂಬುದನ್ನು ರಿನಿವಾ ಬೋರಾ ಅನ್‌ಟೋಲ್ಡ್ ಪಾಡ್‌ಕಾಸ್ಟ್‌ನಲ್ಲಿ ವಿವರಿಸಿದ್ದಾರೆ. 

ಕಳೆದ 16 ವರ್ಷಗಳಿಂದ ನಾನು ಒಂದು ರೀತಿಯ ಹಿಂಸೆಯನ್ನು ಅನುಭವಿಸುತ್ತಿದ್ದೇನೆ. ಆ ಹಿಂಸೆಯ ದಿನಗಳು ಮುಗಿದಿವೆ ಎಂದು ನಿರಾಳವಾಗುತ್ತೇನೆ.  ಆ ಕರಾಳ ದಿನಗಳನ್ನು ಮರೆಯಲು ನನಗೆ ವರ್ಷಗಳೇ ಬೇಕಾದವು. ಅಧ್ಯಯನಕ್ಕಾಗಿ ಬೆಂಗಳೂರಿಗೆ ಹೋದಾಗ ಮುಸ್ಲಿಂ ಹುಡುಗನ ಪರಿಚಯವಾಗುತ್ತದೆ. ಅದು ನನ್ನ ಮೊದಲ ರಿಲೇಶನ್‌ಶಿಪ್. ಆತ ನನಗೆ ದೈಹಿಕ ಹಿಂಸೆ ನೀಡುತ್ತಿದ್ದನು. ಆರಂಭದಲ್ಲಿ ಸಂಬಂಧ ಚೆನ್ನಾಗಿರುವ ಉದ್ದೇಶದಿಂದ ಮಾಡ್ತಾನೆ ಅಂದ್ಕೊಂಡಿದ್ದೆ. ಆದರೆ ಅದು ನನ್ನ ತಪ್ಪಾಗಿತ್ತು ಎಂದು ರಿನಿಮಾ ಹೇಳುತ್ತಾರೆ. 

Tap to resize

Latest Videos

ಆತ ನನ್ನನ್ನು ಹೇಗೆ ಕ್ರೂರ ಮತ್ತು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದ ಅಂದ್ರೆ ಕೆಲವು ವೇಳೆ ಆತನನ್ನು ತಾಲಿಬಾನಿ ಎಂದು ಕರೆಯುತ್ತಿದ್ದೆ. ತುಂಬಾ ಕ್ರೂರವಾಗಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದನು. ಆತ ಬಲವಂತವಾಗಿ ಗೋಮಾಂಸ ತಿನ್ನಿಸಿದ ದಿನಗಳು ಕೆಲವೊಮ್ಮೆ ಕಣ್ಮುಂದೆ ಬರುತ್ತವೆ. ಆತನ ಪೋಷಕರು ಸಹ ಗೋಮಾಂಸ ತಿನ್ನುವಂತೆ ಬಲವಂತ ಮಾಡುತ್ತಿದ್ದರು. ಬಹುಶಃ ಇದೇ ಲವ್ ಜಿಹಾದ್ ಆಗಿರಬಹುದು ಎಂದು ರಿನಿಮಾ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ: ಲವ್ ಜಿಹಾದ್‌ ಟ್ರೋಲ್‌ ಬಗ್ಗೆ ಮೌನಮುರಿದ ಸೋನಾಕ್ಷಿ ಸಿನ್ಹಾ : ಮಗಳ ಮದುವೆಗೆ ಒಪ್ಪಿಗೆ ನೀಡಿಲ್ವಾ ಕುಟುಂಬಸ್ಥರು?

ಇಷ್ಟು ಮಾತ್ರವಲ್ಲ ಹೆಸರನ್ನು ಆಯೇಷಾ ಹುಸೇನ್ ಎಂದು ಬದಲಾಯಿಸಿ ನನ್ನನ್ನ ಐಡೆಂಟಿಟಿಯನ್ನು ಮರೆ ಮಾಡಲು ಪ್ರಯತ್ನಿಸಿದರು. ನಮಾಜ್ ಮಾಡಲು ಸಹ ನನ್ನ ಮೇಲೆ ಒತ್ತಡ ಹಾಕಲಾಗುತ್ತಿತ್ತು. ಯಾವಾಗ ಆತ ಆಸಿಡ್ ಹಾಕೋದಾಗಿ ಬೆದರಿಕೆ ಹಾಕಲು ಆರಂಭಿಸಿದಾದ ಈತನ ಜೊತೆಗಿನ ಸಂಬಂಧ ಕಳೆದುಕೊಳ್ಳಲು ನಿರ್ಧರಿಸಿದೆ. ಅಂತಿಮವಾಗಿ ಆತನಿಂದ ದೂರ ಬಂದು ಹೊಸ ಜೀವನ ಕಟ್ಟಿಕೊಂಡು ಬದುಕು ಆರಂಭಿಸಿದೆ ಎಂಬ ವಿಷಯವನ್ನು ರಿನಿಮಾ ಬೋರಾ ಹೇಳಿದ್ದಾರೆ. 

Assam’s Rinima Borah is Mrs India Galaxy, will represent India at Mrs Galaxy 2025.

She joined us in the Podcast - and opened about how she was a victim of ‘Love Jihad’.

OPEN, NO HESITATION & DIRECT episode. pic.twitter.com/3GgtRyAjzt

— aboyob bhuyan (@aboyobbhuyan)

ಹಲವು ಸಂಕಷ್ಟಗಳನ್ನು ಎದುರಿಸಿ ಗೆದ್ದಿರುವ ರಿನಿಮಾ ಬೋರಾ, 2024ರ ಮಿಸೆಸ್ ಇಂಡಿಯಾ ಗ್ಯಾಲಕ್ಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.  ಮಹಿಳಾ ಹಕ್ಕುಗಳಿಗಾಗಿ ಪ್ರತಿಪಾದಿಸಲು ಮತ್ತು  ಇತರರು ತಮ್ಮ ಕನಸುಗಳನ್ನು ಅನುಸರಿಸಲು ಪ್ರೇರೇಪಿಸಲು ಒಂದು ಶಕ್ತಿಶಾಲಿ ವೇದಿಕೆಯಾಗಿದೆ. ಮಿಸೆಸ್ ಗ್ಯಾಲಕ್ಸಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಮತ್ತು ನಮ್ಮ ಸುಂದರ ಸಂಸ್ಕೃತಿಯನ್ನು ಜಗತ್ತಿಗೆ ಹಂಚಿಕೊಳ್ಳಲು ನಾನು ಉತ್ಸುಕಳಾಗಿದ್ದೇನೆ ಎಂದು ರಿನಿಮಾ ಬೋರಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪ್ಲೀಸ್, ಒಬ್ಬೊಬ್ಬರಾಗಿ ರೇಪ್ ಮಾಡಿ… ಬಾಂಗ್ಲಾದೇಶದ ಹಿಂದೂ ತಾಯಿಯ ಅಸಹಾಯಕತೆ ನಿಮಗೆ ಕಣ್ಣೀರು ತರಿಸುತ್ತೆ!

click me!