ಗಂಡ-ಹೆಂಡ್ತಿ ಜಗಳದಲ್ಲಿ ಬಡವಾಗಿದ್ದು ಮಗು ಅಲ್ಲ, ಭಾರತೀಯ ರೈಲ್ವೆ; ಬರೋಬ್ಬರಿ 3 ಕೋಟಿ ನಷ್ಟ

By Mahmad Rafik  |  First Published Nov 9, 2024, 2:35 PM IST

ಗಂಡ-ಹೆಂಡ್ತಿ ಜಗಳದಿಂದ ಭಾರತೀಯ ರೈಲ್ವೆಗೆ 3 ಕೋಟಿ ರೂ. ನಷ್ಟವಾಗಿದೆ.  ನ್ಯಾಯಾಲಯವು ಪತ್ನಿಯ ನಡವಳಿಕೆಯನ್ನು ಮಾನಸಿಕ ಕ್ರೌರ್ಯ ಎಂದು ಪರಿಗಣಿಸಿ ವಿಚ್ಛೇದನ ನೀಡಿದೆ.


ರಾಯ್ಪುರ: ಛತ್ತೀಸ್‌ಗಢ ಹೈಕೋರ್ಟ್‌ನಲ್ಲಿ ವಿಚಿತ್ರ ಪ್ರಕರಣದ ವಿಚಾರಣೆ ನಡೆದಿದೆ. ಗಂಡ-ಹೆಂಡ್ತಿ ಜಗಳದಲ್ಲಿ ಭಾರತೀಯ ರೈಲ್ವೆಗೆ 3 ಕೋಟಿ ರೂಪಾಯಿ ನಷ್ಟವಾಗಿದೆ. ಇದೇ ಕಾರಣ ನೀಡಿ ಪತ್ನಿಯಿಂದ ದೂರವಾಗಲು ಪತಿ ಮುಂದಾಗಿದ್ದು, ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾನೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಡ್ಯೂಟಿಯಲ್ಲಿದ್ದಾಗ ಪತಿಗೆ ತೊಂದರೆಯನ್ನುಂಟು ಮಾಡೋದು ಮಾನಸಿಕ ಕ್ರೂರತೆಯಾಗುತ್ತೆ ಎಂದು ಅಭಿಪ್ರಾಯಪಟ್ಟಿದೆ. ಛತ್ತೀಸ್‌ಗಡ  ಉಚ್ಛ ನ್ಯಾಯಾಲಯದ ನ್ಯಾಯಧೀಶ ರಜನಿ ದುಬೆ ಮತ್ತು ನ್ಯಾ.ಸಂಜಯ್ ಅಗ್ರವಾಲ್ ಪೀಠ ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ. 

ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿರುವ ವ್ಯಕ್ತಿ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯದ ಸಂದರ್ಭದಲ್ಲಿ ಪದೇ ಪದೇ ಫೋನ್ ಮಾಡಿ ಪತ್ನಿ ಜಳ ಆಡುತ್ತಾಳೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಮದುವೆಗೂ ಮುನ್ನ ಲೈಬ್ರಿರಿಯನ್ ಒಬ್ಬನನ್ನು ಪ್ರೀತಿಸುತ್ತಿದ್ದನು. ಮದುವೆ ಬಳಿಕವೂ ಇಬ್ಬರ ಸಂಬಂಧ ಮುಂದುವರಿದಿತ್ತು ಎಂಬ ಕಾರಣವನ್ನು ನ್ಯಾಯಾಲಯದಲ್ಲಿ ನೀಡಲಾಗಿದೆ. ಈ ವಿಷಯವಾಗಿ ಇಬ್ಬರ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು.

Tap to resize

Latest Videos

12ನೇ ಅಕ್ಟೋಬರ್ 2011ರಂದು ಭಿಲಾಯಿ ಮೂಲದ ಯುವತಿ ಮದುವೆ ವಿಶಾಖಪಟ್ಟಣದ ನಿವಾಸಿ ಜೊತೆ ಆಗುತ್ತದೆ. ಯುವಕ ರೈಲ್ವೆ ನಿಲ್ದಾಣದಲ್ಲಿ ಸ್ಟೇಶನ್ ಮಾಸ್ಟರ್ ಕೆಲಸ ಮಾಡುತ್ತಿದ್ದನು. ಮದುವೆ ಬಳಿಕ ಅಕ್ಟೋಬರ್ 14ರ ಆರತಕ್ಷತೆಯಲ್ಲಿ ವಧು ಖುಷಿಯಾಗಿರಲಿಲ್ಲ. ಇದನ್ನು ಗಮನಿಸಿದ ವರ ಏನಾಯ್ತು ಎಂದು ಕೇಳಿದ್ದಾರೆ. ಈ ವೇಳೆ ವಧು, ಕಾಲೇಜಿನಲ್ಲಿ ಲ್ರೈಬ್ರರಿಯನ್ ಜೊತೆ ತನಗೆ ಸಂಬಂಧವಿತ್ತು. ಆತನ ಜೊತೆ ಹಲವು ಬಾರಿ ದೈಹಿಕ ಸಂಪರ್ಕ ಸಹ ಬೆಳೆಸಿದ್ದು, ಅದನ್ನು ಮರೆಯಲಾಗುತ್ತಿಲ್ಲ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾಳೆ. ಕೂಡಲೇ ವಧುವಿನ ತಂದೆ ಬಳಿ ಹೋದ ಎಲ್ಲಾ ವಿಷಯವನ್ನು ತಿಳಿಸಿದಾಗ, ಮುಂದೆ ಮಗಳು ಹಾಗೆಲ್ಲಾ ಮಾಡಿ. ಚೆನ್ನಾಗಿ ಸಂಸಾರ ಮಾಡಿಕೊಂಡು ಹೋಗ್ತಾಳೆ ಎಂದು ಸಮಾಧಾನಪಡಿಸಿದ್ದಾರೆ. ಇದನ್ನು ವರ ಸಹ ಒಪ್ಪಿಕೊಂಡಿದ್ದಾನೆ. 

ಹಾಗಾದ್ರೆ ರೈಲ್ವೆ ಇಲಾಖೆಗೆ ನಷ್ಟವಾಗಿದ್ದೇಗೆ?
ಕೋರ್ಟ್ ಮಾಹಿತಿ ಪ್ರಕಾರ, ಗಂಡ-ಹೆಂಡತಿ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು. ಕೆಲಸಕ್ಕೆ ಬಂದರೂ ಫೋನ್‌ನಲ್ಲಿ ಇಬ್ಬರ ಜಗಳ ಮುಂದುವರಿಯುತ್ತಿತ್ತು. ಜಗಳದ ಸಂದರ್ಭದಲ್ಲಿ ಓಕೆ ಎಂದು ಹೇಳಿದ ಪದದಿಂದ ರೈಲ್ವೆ ಇಲಾಖೆಗೆ 3 ಕೋಟಿ ರೂ. ನಷ್ಟವಾಗಿದೆ. 

ಇದನ್ನೂ ಓದಿ: ಭಾರತದಲ್ಲಿ ಎಲ್ಲಿ ತಯಾರಾಗುತ್ತವೆ ಅತ್ಯಧಿಕ ರೈಲಿನ ಬೋಗಿಗಳು? 2024ರಲ್ಲಿ ಬಂದ ಹೊಸ ಕೋಚ್‌ಗಳ ಸಂಖ್ಯೆಯಷ್ಟು?

ಒಂದು ಕೈಯಲ್ಲಿ ಮೊಬೈಲ್, ಮತ್ತೊಂದು ಕೈಯಲ್ಲಿ ರೈಲ್ವೆ ನಿಲ್ದಾಣದ ಫೋನ್ ಹಿಡಿದು ವ್ಯಕ್ತಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮನೆಗೆ ಬನ್ನಿ, ಇಲ್ಲೇ ಎಲ್ಲವನ್ನೂ ಮಾತನಾಡೋಣ ಎಂದು ಪತ್ನಿ ಹೇಳಿದ್ದಕ್ಕೆ ಓಕೆ ಎಂದು ಹೇಳಿದ್ದಾನೆ. ಮತ್ತೊಂದು ಫೋನ್‌ನಲ್ಲಿದ್ದ ರೈಲ್ವೆ ಸಿಬ್ಬಂದಿ ಓಕೆ ಪದ ಕೇಳಿದ ಕೂಡಲೇ 'ಗೂಡ್ಸ್ ಟ್ರೈನ್‌'ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಒಂದು ಕಾರಣದಿಂದ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದರಿಂದ ಇಲಾಖೆಗೆ 3  ಕೋಟಿ ರೂ.ಗಳಷ್ಟು ನಷ್ಟವಾಗಿದೆ. ನಿರ್ಲಕ್ಷ್ಯ ಕಾರಣ ನೀಡಿದ ವ್ಯಕ್ತಿಯನ್ನು ಅಮಾನತುಗೊಳಿಸಲಾಗಿದೆ. ಇದೀಗ ವ್ಯಕ್ತಿ, ಈ ಕಾರಣವನ್ನು ಸಹ ಡಿವೋರ್ಸ್ ಅರ್ಜಿಯಲ್ಲಿ ಸೇರಿಸಲಾಗಿದೆ. ಮತ್ತೊಂದೆಡೆ ಮಹಿಳೆ, ವರದಕ್ಷಿಣೆ ಕಿರುಕುಳದ ಆರೋಪವನ್ನು ಮಾಡಿದ್ದಾರೆ. 

ನ್ಯಾಯಾಲಯ ಹೇಳಿದ್ದೇನು? 
ಪತಯೊಂದಿಗೆ ಫೋನ್‌ನಲ್ಲಿ ಜಗಳವಾಡಿದ್ದರಿಂದಲೇ ಆತ ಸೇವೆಯಿಂದ ಅಮಾನತುಗೊಂಡಿದ್ದಾನೆ. ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಮಹಿಳೆ ಸುಳ್ಳು ಆರೋಪ ಮಾಡಿದ್ದಾಳೆ. ಪತ್ನಿಯ ಎಲ್ಲಾ ರೀತಿಯ ವರ್ತನೆ ಪತಿಗೆ ನೀಡಲಾಗಿರುವ ಮಾನಸಿಕ ಕ್ರೌರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಚ್ಛೇದನ ಅರ್ಜಿಯನ್ನು ಅಂಗೀಕರಿಸಿದೆ. 

ಇದನ್ನೂ ಓದಿ: ಹೊಸ ದಾಖಲೆ ಬರೆದ ಭಾರತೀಯ ರೈಲ್ವೆ; ಒಂದೇ ದಿನ ನ್ಯೂಜಿಲ್ಯಾಂಡ್ ಜನಸಂಖ್ಯೆಗಿಂತಲೂ ಅಧಿಕ ಜನರ ಪ್ರಯಾಣ

click me!