
ನವದೆಹಲಿ(ಆ.19): ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕಳೆದ ಹದಿನಾಲ್ಕು ತಿಂಗಳಿಂದ ನಾಪತ್ತೆಯಾಗಿದ್ದರು. ಆದರೀಗ ಏಕಾಏಕಿ ಟ್ವಟರ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ದಿವ್ಯ ಸ್ಪಂದನ ಪಿಎಂ ಕೇರ್ಸ್ ಫಂಡ್ ವಿವಾದ ಸಂಬಂಧ ಧ್ವನಿ ಎತ್ತಿದ್ದಾರೆ.
ಕಾಂಗ್ರೆಸ್ ಮೀಡಿಯಾ ಸೆಲ್ ಮುಖ್ಯಸ್ಥೆಯಾಗಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ಟಿವ್ ಆಗಿದ್ದರು. ಆದರೆ ಕಳೆದ ಹದಿನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾಗಳಿಗೆ ಗುಡ್‌ಬೈ ಎಂದಿದ್ದ ಅವರು ನಾಪಪತ್ತೆಯಾಗಿದ್ದರು. 2019ರ ಜೂನ್ 1ಕ್ಕೆ ಅವರು ಕೊನೆಯಯ ಟ್ವೀಟ್ ಮಾಡಿದ್ದರು. ಇಷ್ಟೇ ಅಲ್ಲದೇ ಕಾಂಗ್ರೆಸ್ ನ ಆಂತರಿಕ ವಾಟ್ಸ್ ಗ್ರೂಪ್ ನಿಂದಲೂ ಲೆಫ್ಟ್ ಆಗಿದ್ದರು.
ಆದರೀಗ ಏಕಾಏಕಿ ಟ್ವಿಟರ್‌ಗೆ ರೀ ಎಂಟ್ರಿ ನೀಡಿರುವ ರಮ್ಯಾ ಪಿ ಎಂ ಕೇರ್ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ ಎಂದಾದರೆ ಪಿಎಂ ಕೇರ್ಸ್ ಫಂಡ್ ಮಾಹಿತಿ ನೀಡಲು ಯಾಕೆ ಭಯ ಪಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲ ತಿಂಗ ಹಿಂದಷ್ಟೇ ರಮ್ಯಾ ಇನ್ಸ್ಟಾಗ್ರಾಂಗೂ ಮತ್ತೆ ಎಂಟ್ರಿಯಾಗಿದ್ದು, ಇಲ್ಲಿ ತಮ್ಮ ಕೆಲ ಫೋಟೋಗಳನ್ನು ಸೇರ್ ಮಾಡಿಕೊಂಡಿದ್ದಾರೆ,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ