ಕೊರೋನಾಗೆ ಬಲಿಯಾದ ಮಗ, ಸೊಸೆಗೆ ತಾವೇ ಮುಂದೆ ನಿಂತು ಮದುವೆ ಮಾಡಿಸಿದ ಅತ್ತೆ-ಮಾವ, ಬಂಗಲೆ ಗಿಫ್ಟ್‌!

Published : May 12, 2022, 05:08 PM ISTUpdated : May 12, 2022, 05:09 PM IST
ಕೊರೋನಾಗೆ ಬಲಿಯಾದ ಮಗ, ಸೊಸೆಗೆ ತಾವೇ ಮುಂದೆ ನಿಂತು ಮದುವೆ ಮಾಡಿಸಿದ ಅತ್ತೆ-ಮಾವ, ಬಂಗಲೆ ಗಿಫ್ಟ್‌!

ಸಾರಾಂಶ

* ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಅಪರೂಪದ ಘಟನೆ * ಇಡೀ ಸಮಾಜಕ್ಕೆ ಮಾದರಿಯಾದ ಈ ಅತ್ತೆ ಮಾವ * ಹೆತ್ತವರ ಸ್ಥಾನದಲ್ಲಿ ನಿಂತು ವಿಧವೆ ಸೊಸೆಗೆ ಕನ್ಯಾದಾನ ಮಾಡಿದ ಅತ್ತೆ ಮಾವ

ಭೋಪಾಲ್(ಮೇ.12): ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಅತ್ತೆಯೊಬ್ಬರು ವಿಧವೆಯಾದ ಸೊಸೆಯನ್ನು ಮಗಳಂತೆ ಮದುವೆ ಮಾಡಿಸಿದ್ದಾರೆ. ಈ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗಂಡನ ಮರಣದ ನಂತರ ಸೊಸೆಯು ಮದುವೆಗೆ ಸಿದ್ಧಳಾಗಿರಲಿಲ್ಲ, ಆದರೆ ಅತ್ತೆಗೆ ಆಕೆಯ ಭವಿಷ್ಯದ ಬಗ್ಗೆ ಚಿಂತೆಯಾಗಿತ್ತು. ಮಗನ ತಿಥಿಯಂದೇ, ಅತ್ತೆ ತನ್ನ ಸೊಸೆಗೆ ಬಆಕೆಯ ಭವಿಷ್ಯದ ಬಗ್ಗೆ ವಿವರಿಸಿದ್ದಾರೆ. ಸೊಸೆ ಒಪ್ಪಿಕೊಂಡ ಬಳಿಕ, ಅತ್ತೆ ಮಾವ ಸೇರಿ ಆಕೆಗೆ ಸಂಬಂಧ ಹುಡುಕಲು ಮುಂದಾಗಿದ್ದಾರೆ. ಇದಾದ ನಂತರ ನಾಗ್ಪುರದಲ್ಲಿ ನೆಲೆಸಿರುವ ಹುಡುಗನೊಂದಿಗೆ ಸೊಸೆಯ ಸಂಬಂಧವನ್ನು ನಿಶ್ಚಯಗೊಳಿಸಲಾಗಿದೆ. ಅಕ್ಷಯ ತೃತೀಯ ದಿನದಂದು ನಾಗ್ಪುರದಲ್ಲಿ ಸೊಸೆಯ ಮದುವೆಯಾಗಿದೆ. ಅತ್ತೆ ಮಾವ ಖುದ್ದು ತಾವೇ ಮುಂದೆ ನಿಂತು ಸೊಸೆಗೆ ಮದುವೆ ಮಾಡಿಸಿದ್ದಾರೆ.

ಕೊರೋನಾಗೆ ಮಗ ಬಲಿ

ಎಸ್‌ಬಿಐನ ನಿವೃತ್ತ ಅಧಿಕಾರಿಯಾಗಿರುವ ಯುಗ್‌ ಪ್ರಕಾಶ್ ತಿವಾರಿ ಅವರು ಧಾರ್ ಜಿಲ್ಲೆಯ ಪ್ರಕಾಶ್ ನಗರದಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ ಕೊರೋನಾದ ಎರಡನೇ ಅಲೆಯ ಸಮಯದಲ್ಲಿ, ಕುಟುಂಬ ಮೇಲೆ ಶೋಕದ ಅಲೆ ಬೀಸಿದೆ. ಇಂಜಿನಿಯರ್ ಆಗಿದ್ದ ಪುತ್ರ ಪ್ರಿಯಾಂಕ್ ತಿವಾರಿಗೆ ಕೊರೋನಾ ಸೋಂಕು ತಗುಲಿದೆ. 2021 ರ ಏಪ್ರಿಲ್ 25 ರಂದು ಭೋಪಾಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಿಯಾಂಕ್ ಸಾವನ್ನಪ್ಪಿದ್ದ. ಮಗನ ಸಾವಿನೊಂದಿಗೆ ಕುಟುಂಬದ ಸಂತೋಷ ಕೊನೆಗೊಂಡಿತು. ಈ ನೋವಿನಿಂದ ಕುಟುಂಬ ಚೇತರಿಸಿಕೊಳ್ಳಲು ಕೆಲವು ದಿನಗಳು ಬೇಕಾಯಿತು.

ತಾಳಿ ಕಟ್ಟಿಸಿಕೊಂಡು ನೇರವಾಗಿ ಪರೀಕ್ಷೆಗೆ ಹಾಜರಾದ ನವವಧು..!

ಸೊಸೆಯ ಚಿಂತೆ ಕಾಡತೊಡಗಿತ್ತು

ಯುಗ ಪ್ರಕಾಶ್ ತಿವಾರಿ ಅವರು ಪತ್ನಿ ಮತ್ತು ಸೊಸೆಯೊಂದಿಗೆ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಸೊಸೆ ರಿಚಾಗೆ ಈಗ 32 ವರ್ಷ. ಅಕೆ ಮುಂದೆ ಬಾಳಿ ಬದುಕಬೇಕಿತ್ತು. ಹೀಗಿರುವಾಗ ಅತ್ತೆಗೆ ಸೊಸೆಯ ಚಿಂತೆ ಕಾಡಲಾರಂಭಿಸಿದೆ. ಒಂಭತ್ತು ವರ್ಷದ ಮೊಮ್ಮಗಳೂ ಇದ್ದಾಳೆ. ಪರಿಸ್ಥಿತಿ ಸಹಜವಾದ ನಂತರ, ವಿಧವೆ ಸೊಸೆಯನ್ನು ಮರುಮದುವೆ ಮಾಡಿಸಲು ಅತ್ತೆ ನಿರ್ಧರಿಸಿದರು. ಅತ್ತೆಯ ನಿರ್ಧಾರಕ್ಕೆ ಸೊಸೆ ಒಪ್ಪಲಿಲ್ಲ. ಮಗನ ತಿಥಿಯಂದು ಅತ್ತೆ- ಮಾವ ಇಬ್ಬರೂ ಸೇರಿ ಸೊಸೆಗೆ ವಿವರಿಸಿದರು. ಆ ಬಳಿಕವೇ ಸೊಸೆ ಮದುವೆಗೆ ಸಿದ್ಧಳಾದಳು.

ನಾಗ್ಪುರದಲ್ಲಿ ಮದುವೆ

ಸೊಸೆ ಒಪ್ಪಿದ ನಂತರ ಅತ್ತೆ ವರನನ್ನು ಹುಡುಕತೊಡಗಿದರು. ಕೆಲವು ದಿನಗಳ ನಂತರ ರಿಚಾಳ ಮದುವೆ ನಾಗ್ಪುರದಲ್ಲಿ ವಾಸವಾಗಿರುವ ಇಂಜಿನಿಯರ್ ವರುಣ್ ಮಿಶ್ರಾ ಜೊತೆ ನಿಶ್ಚಯವಾಯಿತು. ಇದಾದ ಬಳಿಕ ಕುಟುಂಬಸ್ಥರು ಸೊಸೆಯ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಮದುವೆಯ ದಿನಾಂಕವನ್ನು ಅಕ್ಷಯ ತೃತೀಯ ದಿನದಂದು ನಿಗದಿಪಡಿಸಲಾಯಿತು. ಅತ್ತೆ ಕುಟುಂಬ ಸಮೇತ ನಾಗಪುರ ತಲುಪಿದರು. ಅಲ್ಲಿ ಮೇ 3 ರಂದು ಇಬ್ಬರೂ ಮದುವೆಯಾದರು. ರಿಚಾ ತಿವಾರಿ ಮದುವೆಯ ಎಲ್ಲಾ ಖರ್ಚು ವೆಚ್ಚವನ್ನು ಅತ್ತೆಯೇ ಭರಿಸಿದ್ದಾರೆ.

ಅತ್ತೆ ಮಾವನಿಂದ ಕನ್ಯಾದಾನ

ಅದೇ ಸಮಯದಲ್ಲಿ, ಮದುವೆಯ ಸಮಯದಲ್ಲಿ, ಅತ್ತೆ ಪ್ರತಿ ಆಚರಣೆಯನ್ನು ಮಾಡಿದ್ದಾರೆ. ತಮ್ಮ ಮಗಳಂತೆ ಅತ್ತೆ ಮಾವ ಇಬ್ಬರೂ ಸೇರಿ ಸೊಸೆಯ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಕನ್ಯಾದಾನ ನೆರವೇರಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಯುಗ್‌ಪ್ರಕಾಶ್ ತಿವಾರಿ, ಸೊಸೆಯನ್ನು ಮಗಳೆಂದು ಪರಿಗಣಿಸಿದರೆ, ಆಕೆಯ ಜೀವನದ ಪ್ರತಿ ಕ್ಷಣದ ಸಂತೋಷಕ್ಕಾಗಿ ಅಂತಹ ಹೆಜ್ಜೆಗಳನ್ನು ಇಡುವ ಯೋಚನೆ ಬರುತ್ತದೆ. ಆ ಮನೆಯವರು ಕೂಡ ಮೊಮ್ಮಗಳನ್ನು ಒಪ್ಪಿಕೊಂಡಿದ್ದಾರೆ ಎಂದರು. ಖುಷಿ ಖುಷಿಯಾಗೇ ಅತ್ತೆ ಮಾವ ತಮ್ಮ ಸೊಸೆಯನ್ನು ಬೀಳ್ಕೊಟ್ಟಿದ್ದಾರೆ.

28 ಪತ್ನಿಯರು 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವ್ಯಕ್ತಿ

ನಾಗ್ಪುರದಲ್ಲಿ ಬಂಗಲೆ ಕೊಡಿಸಿದ್ರು

ಇನ್ನು ಯುಗ ಪ್ರಕಾಶ್ ತಿವಾರಿ ಅವರ ಪುತ್ರ ನಾಗ್ಪುರದಲ್ಲಿ ಬಂಗಲೆ ಖರೀದಿಸಿದ್ದರು. ಹೀಗಿರುವಾಗ ಆತನ ತಂದೆ ತಾಯಿ ಇದನ್ನು ತಮ್ಮ ಸೊಸೆ ಮತ್ತು ಅವಳ ಹೊಸ ಪತಿಗೆ ಉಡುಗೊರೆಯಾಗಿ ನೀಡಿದರು. ಸೊಸೆ ರಿಚಾ ಕೂಡ ಧಾರ್‌ನಲ್ಲಿರುವ ಅತ್ತೆಯ ಮನೆಗೆ ಮಗಳಂತೆ ಬರುತ್ತಲೇ ಇರುತ್ತಾಳೆ. ತಾವು ಆಕೆಯಿಂದ ದೂರವಾಗುವುದಿಲ್ಲ ಎಂದು ಅತ್ತೆ ರಿಚಾಗೆ ಭರವಸೆ ನೀಡಿದ್ದಾರೆ. ನಾವು ಸೊಸೆಯನ್ನು ಮನೆಯಿಂದ ಕೊಟ್ಟಿಲ್ಲ, ಮಗಳಂತೆ ಕಳುಹಿಸಿದ್ದೇವೆ ಎಂದು ಯುಗಪ್ರಕಾಶ್ ತಿವಾರಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!