ತಾಜ್ ಮಹಲ್ ನ ಮುಚ್ಚಿದ ರೂಮ್ ಗಳ ಬಗ್ಗೆ ಪ್ರಶ್ನೆ ಮಾಡಲು ನೀವ್ಯಾರು ಎಂದು ಕೇಳಿದ ಅಲಹಾಬಾದ್ ಹೈಕೋರ್ಟ್!

By Santosh NaikFirst Published May 12, 2022, 4:25 PM IST
Highlights

ತಾಜ್‌ಮಹಲ್‌ನ 22 ಕೊಠಡಿಗಳ ತೆರೆಯುವ ಕುರಿತಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಸತ್ಯಶೋಧನಾ ಸಮಿತಿಯ ರಚನೆಯ ಬೇಡಿಕೆಯ ಔಚಿತ್ಯವನ್ನೇ ಪ್ರಶ್ನೆ ಮಾಡಿದೆ. ಈ ಸಮಿತಿಯನ್ನು ರಚಿಸುವ ಮೂಲಕ ನೀವು ಏನು ತಿಳಿದುಕೊಳ್ಳಲು ಬಯಸುತ್ತೀರಿ ಎಂದು ಅರ್ಜಿದಾರರನ್ನು ಪ್ರಶ್ನೆ ಮಾಡಿದೆ.
 

ಲಕ್ನೋ (ಮೇ.12):  ಅಲಹಾಬಾದ್ ಹೈಕೋರ್ಟ್‌ನ (Allahabad High Court) ಲಕ್ನೋ ಪೀಠವು (Lucknow Bench) ತಾಜ್ ಮಹಲ್‌ನಲ್ಲಿ (Taj Mahal)  ಮುಚ್ಚಿರುವ 22 ಕೋಣೆಗಳನ್ನು ತೆರೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ವಿಚಾರಣೆ ವೇಳೆ, ಸತ್ಯಶೋಧನಾ ಸಮಿತಿ ರಚನೆಯ ಬೇಡಿಕೆಯ ಔಚಿತ್ಯವನ್ನು ಪ್ರಶ್ನಿಸಿದ ಹೈಕೋರ್ಟ್ (High Court), ಸಮಿತಿಯನ್ನು ರಚಿಸುವ ಮೂಲಕ ನೀವು ಏನು ತಿಳಿದುಕೊಳ್ಳಲು ಬಯಸುತ್ತೀರಿ ಎಂದು ಅರ್ಜಿದಾರರನ್ನು ಕೇಳಿದೆ. ಅರ್ಜಿಯು ಸರಿಯಾದ ಮತ್ತು ನ್ಯಾಯಾಂಗ ಸಮಸ್ಯೆಗಳನ್ನು ಆಧರಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ (DK Upadhyay ) ಮತ್ತು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ (Subhash Vidyarthi) ಅವರ ವಿಭಾಗೀಯ ಪೀಠ, ತಾಜ್ ಮಹಲ್ ಕುರಿತು ಸಲ್ಲಿಸಲಾದ ವಿವಾದದ ವಿಚಾರಣೆಯ ಸಂದರ್ಭದಲ್ಲಿ, ನೀವು ಯಾವ ತೀರ್ಪುಗಳನ್ನು ತೋರಿಸುತ್ತಿದ್ದೀರಿ ಎಂದು ಅರ್ಜಿದಾರರನ್ನು ಕೇಳಿದರು. ಅರ್ಜಿದಾರರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳನ್ನು ಮಂಡಿಸಿದರು, ಇದರಲ್ಲಿ 19 ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕುಗಳು ಮತ್ತು ವಿಶೇಷವಾಗಿ ಆರಾಧನೆ, ಪೂಜೆ ಮತ್ತು ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯವನ್ನು ಉಲ್ಲೇಖಿಸಲಾಗಿದೆ.

ಈ ಕುರಿತು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ನಿಮ್ಮ ವಾದಗಳನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದೆ. ವಿಚಾರಣೆ ವೇಳೆ ಹೈಕೋರ್ಟ್, ಈ ಅರ್ಜಿ ಸೂಕ್ತ ಮಾದರಿಯಲ್ಲಿಲ್ಲ. ಕೋಣೆಗಳನ್ನು ತೆರೆಯುವ ಕುರಿತು ಸಲ್ಲಿಸಿರುವ ಅರ್ಜಿಗೆ ಐತಿಹಾಸಿಕ ಸಂಶೋಧನೆಯಲ್ಲಿ ಸೂಕ್ತ ವಿಧಾನ ಅಳವಡಿಸಬೇಕು, ಐತಿಹಾಸಿಕ ಸಂಶೋಧನೆಯಲ್ಲಿ ಸೇರಿಸಬೇಕು, ಹಾಗಾಗಿ ನಾವು ಅಂತಹ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯವಸ್ಥೆಯನ್ನು ಅಪಹಾಸ್ಯ ಮಾಡಬೇಡಿ ಎಂದ ಅಲಹಾಬಾದ್ ಹೈಕೋರ್ಟ್, ತಾಜ್ ಮಹಲ್ ಕೊಠಡಿಗಳನ್ನು ತೆರೆಯಲು ಸಲ್ಲಿಸಿದ್ದ ಮನವಿಯನ್ನು ಕಸದ ಬುಟ್ಟಿಗೆ ಎಸೆಯುವಂತೆ ಹೇಳಿದೆ. "ನಾಳೆ ನೀವು ಬಂದು ನಮ್ಮನ್ನು ಗೌರವಾನ್ವಿತ ನ್ಯಾಯಾಧೀಶರ ಚೇಂಬರ್‌ಗೆ ಹೋಗುವಂತೆ ಅನುಮತಿ ಕೇಳುತ್ತೀರಾ? ದಯವಿಟ್ಟು, ಪಿಐಎಲ್ ವ್ಯವಸ್ಥೆಯನ್ನು ಅಪಹಾಸ್ಯ ಮಾಡಬೇಡಿ." ಎಂದು ಹೇಳಿದೆ.

ಇದು ನಿಮ್ಮ ಹಕ್ಕಲ್ಲ ಎಂದ ಹೈಕೋರ್ಟ್!: ತಾಜ್‌ಮಹಲ್‌ನ 22 ಕೋಣೆಗಳನ್ನು ತೆರೆಯುವ ಅರ್ಜಿಯ ವಿಚಾರಣೆಯ ವೇಳೆ, ನೀವು ಸಮಿತಿಯ ಮೂಲಕ ಸತ್ಯವನ್ನು ಕಂಡುಹಿಡಿಯಲು ಬಯಸುತ್ತಿದ್ದೀರಿ. ಆದರೆ, ಇದನ್ನು ಪ್ರಶ್ನೆ ಮಾಡೋಕೆ ನೀವು ಯಾರು. ಇದು ನಿಮ್ಮ ಹಕ್ಕಲ್ಲ. ಈ ವಿಷಯ ಆರ್ ಟಿಐ ವ್ಯಾಪ್ತಿಗೂ ಒಳಪಡುವುದಿಲ್ಲ. ನಾನು ನಿಮ್ಮ ವಾದವನ್ನು ಪುರಸ್ಕರಿಸುವುದಿಲ್ಲಎಂದು ಕೋರ್ಟ್ ಹೇಳಿದೆ.
 

ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಸಾವು

ವಿಚಾರಣೆಯ ಸಂದರ್ಭದಲ್ಲಿ, ಹೈಕೋರ್ಟ್, 'ಈ ಅರ್ಜಿಯು ಆಗ್ರಾದಲ್ಲಿರುವ ತಾಜ್ ಮಹಲ್‌ನ ಇತಿಹಾಸಕ್ಕೆ ಸಂಬಂಧಿಸಿದಂತೆ ಅಧ್ಯಯನಕ್ಕೆ ನಿರ್ದೇಶನವನ್ನು ಕೋರಿದೆ ಎಂದು ನಾನು ಕಂಡುಕೊಂಡಿದ್ದೇನೆ. ತಾಜ್ ಮಹಲ್ ಒಳಗೆ ಮುಚ್ಚಿದ ಬಾಗಿಲು ತೆರೆಯುವುದು ಎರಡನೇ ಮನವಿ. ಸಂಪೂರ್ಣ ಅನ್ಯಾಯವಾಗಿರುವ ವಿಷಯದ ಬಗ್ಗೆ ತೀರ್ಪು ನೀಡುವಂತೆ ಅರ್ಜಿದಾರರು ನಮಗೆ ಮನವಿ ಮಾಡಿದ್ದಾರೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. ಕೊಠಡಿ ತೆರೆಯಲು ಯಾವುದೇ ಐತಿಹಾಸಿಕ ಸಂಶೋಧನೆಯ ಅಗತ್ಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ, ರಿಟ್ ಅರ್ಜಿಯನ್ನು ಪುರಸ್ಕರಿಸಲು ನಮಗೆ ಸಾಧ್ಯವಾಗುತ್ತಿಲ್ಲ, ಈ ಅರ್ಜಿಯನ್ನು ವಜಾಗೊಳಿಸಲಾಗಿದೆ. ಈ ಹಿಂದೆ ವಿಚಾರಣೆ ವೇಳೆ ಹೈಕೋರ್ಟ್ ಅರ್ಜಿದಾರರಿಗೆ ತೀವ್ರ ಛೀಮಾರಿ ಹಾಕಿದ್ದು, ಈ ವಿಚಾರವಾಗಿ ಸಂಶೋಧನೆ ಮಾಡಿ, ಇದಕ್ಕಾಗಿ ಎಂಎ, ಪಿಎಚ್ ಡಿ ಮಾಡಿ, ಇದನ್ನು ಮಾಡಲು ಯಾರೂ ನಿಮ್ಮನ್ನು ಬಿಡದಿದ್ದರೆ ನಮ್ಮ ಬಳಿಗೆ ಬನ್ನಿ ಎಂದು ಹೇಳಿತ್ತು.

RRR ಸಿನಿಮಾ ಬಗ್ಗೆ ಪ್ರಶ್ನೆ : ತೆಲಂಗಾಣ ಪಿಯುಸಿ ಪ್ರಶ್ನೆ ಪತ್ರಿಕೆ ವೈರಲ್‌

ಈ ನಡುವೆ ಅರ್ಜಿದಾರರು, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿದ್ದಾರೆ. ಅರ್ಜಿದಾರರ ಪರ ವಕೀಲ ರುದ್ರ ವಿಕ್ರಮ್ ಸಿಂಗ್ ಮೇಲಲ್ಮನವಿ ಸಲ್ಲಿಸುವುದಾಗಿ ಹೇಳಿದ್ದು, ಸುಪ್ರೀಂ ಕೋರ್ಟ್ ಗೆ ಹೋಗುವ ಮುನ್ನ ಇತಿಹಾಸ ತಜ್ಞರು ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಸಂಗ್ರಹಿಸಿ ಮತ್ತಷ್ಟು ಮಾಹಿತಿಯನ್ನು ಕಲೆಹಾಕುವುದಾಗಿ ಹೇಳಿದ್ದಾರೆ.

click me!