
ಇಂದೋರ್ (ಜ.26) ಭಾರತೀಯ ಯೋಧನೊಬ್ಬನ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿ ಮಗುವಿನ ಡಿಎನ್‌ಎ ಟೆಸ್ಟ್‌ಗೆ ಆದೇಶ ನೀಡಿದ ಘಟನೆ ನಡೆದಿದೆ. ಮದುವೆಯಾದ ಪತ್ನಿ ತನಗೆ ಮೋಸ ಮಾಡಿದ್ದಾಳೆ. ಪತ್ನಿ ಜೊತೆ ದೈಹಿಕ ಸಂಪರ್ಕ ಇಲ್ಲದೆ ಸಮಯದಲ್ಲಿ ಗರ್ಭಿಣಿಯಾಗಿದ್ದು ಹೇಗೆ ಎಂದು ಯೋಧ ಹೈಕೋರ್ಟ್ ಮೊರೆ ಹೋಗಿದ್ದ. ಮೋಸ ಮಾಡಿರುವ ಪತ್ನಿಯಿಂದ ವಿಚ್ಚೇದನ ನೀಡಬೇಕು ಎಂದು ಕೋರಿದ್ದ. ಮನವಿ ಪುರಸ್ಕರಿಸಿದ ಹೈಕೋರ್ಟ್, ಮಗುವಿನ ಡಿಎನ್‌ಎ ಟೆಸ್ಟ್‌ಗೆ ಆದೇಶ ನೀಡಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಇತ್ತ ಯೋಧನ ಪತ್ನಿಯ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಭಾರತೀಯ ಯೋಧ ಮದುವೆಯಾದ ಬಳಿಕ ಕೆಲ ದಿನಗಳ ಕಾಲ ಪತ್ನಿ ಜೊತೆಗಿದ್ದು ಕರ್ತವ್ಯಕ್ಕೆ ಮರಳಿದ್ದರು. ಇದರ ನಡುವೆ 6 ತಿಂಗಳಿಗೆ ಒಮ್ಮೆ ರಜೆ ಮೇಲೆ ಬಂದು ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ಆದರೆ ಮತ್ತೊಮ್ಮೆ 8 ತಿಂಗಳ ಬಿಟ್ಟು ರಜೆ ಮೇಲೆ ಬಂದಾಗ ಯೋಧನಿಗೆ ಆಘಾತವಾಗಿದೆ. ಕಾರಣ ಪತ್ನಿ ಮೂರು ತಿಂಗಳ ಗರ್ಭಿಣಿ ಎಂದು ಗುಡ್ ನ್ಯೂಸ್ ಹೇಳಿದ್ದಾರೆ. ಕಳೆದ 8 ತಿಂಗಳಿನಿಂದ ಮನೆಗೆ ಮರಳಿಲ್ಲ. ಪತ್ನಿ ಜೊತೆ ಕಳೆದಿಲ್ಲ, ದೈಹಿಕ ಸಂಪರ್ಕ ನಡೆಸಿಲ್ಲ. ಹೀಗಾಗಿ ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದು ಹೇಗೆ? 8 ತಿಂಗಳ ಹಿಂದೆ ಬಂದ ಸಂದರ್ಭದಲ್ಲೇ ಪತ್ನಿ ಗರ್ಭಿಣಿಯಾಗಿದ್ದರೆ, 7 ರಿಂದ ತಿಂಗಳ ಗರ್ಭಿಣಿಯಾಗಬೇಕಿತ್ತು. ಪತ್ನಿ ಮೋಸ ಮಾಡಿದ್ದಾಳೆ ಎಂದು ಯೋಧ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್‌ನಲ್ಲಿ ಯೋಧ ಹಲವು ಮನವಿ ಮಾಡಿದ್ದಾನೆ. ಪತ್ನಿ ತನಗೆ ಮೋಸ ಮಾಡಿದ್ದಾಳೆ. 2015ರಲ್ಲಿ ಪತ್ನಿ ಮಗುವಿಗೆ ಜನ್ಮ ನೀಡಿದ್ದಾಳೆ . ಪತ್ನಿ, ಮಗುವಿಗೆ ಜೀವನಾಂಶ ನೀಡಲು ಅದು ತನ್ನದೇ ಮಗು ಎಂದು ಸಾಬೀತಾಗಬೇಕು. ನನ್ನ ಮಗುವಾಗಿದ್ದರೆ ಸಂಪೂರ್ಣ ಜವಾಬ್ದಾರಿ ನಿರ್ವಹಿಸಲು ನಾನು ಸಿದ್ದ. ಯಾವುದೇ ಜವಾಬ್ದಾರಿಗಳಿಂದ ನಾನು ನುಣುಚಿಕೊಳ್ಳುತ್ತಿಲ್ಲ. ಒಬ್ಬ ಯೋಧನಾಗಿ ಅತ್ಯಂತ ಯೋಚನೆಯಿಂದ ಹಾಗೂ ಜವಾಬ್ದಾರಿಯಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ಯೋಧ ಕೋರ್ಟ್‌ನಲ್ಲಿ ಹೇಳಿದ್ದಾನೆ.
ಇತ್ತ ಪತ್ನಿ ಡಿಎನ್‌ಎ ಪರೀಕ್ಷೆ ವಿರೋಧಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಗು ದೊಡ್ಡದಾಗುತ್ತಿದೆ. ಡಿಎನ್‌ಎ ಪರೀಕ್ಷೆಯಿಂದ ಮಗುವಿನ ಖಾಸಗೀತನಕ್ಕೆ ಧಕ್ಕೆಯಾಗಲಿದೆ. ಇಷ್ಟೇ ಅಲ್ಲ ಈ ಪರೀಕ್ಷೆಗಳಿಂದ ಮಗು ಆಘಾತಗೊಳ್ಳಲಿದೆ. ಮಗುವಿನ ಸ್ವಾತಂತ್ರ್ಯ, ಖಾಸಗೀತನದ ಉಲ್ಲಂಘನೆ ಕಾನೂನು ವಿರೋಧಿ ನಡೆ ಎಂದು ಪತ್ನಿ ವಾದಿಸಿದ್ದರು. ಆದರೆ ಹೈಕೋರ್ಟ್ ಯೋಧನ ಪತ್ನಿ ವಾದ ತಳ್ಳಿಹಾಕಿದೆ.
ಪತಿ ಜವಾಬ್ದಾರಿಗಳಿಂದ ಓಡಿ ಹೋಗುತ್ತಿಲ್ಲ, ಮಗುವಿನ ತಂದೆ ಯಾರು, ಅದರ ಹೊಣೆ ಯಾರಿಗೆ ಅನ್ನೋ ವಿಚಾರದಲ್ಲಿ ಸ್ಪಷ್ಟತೆ ಕೇಳುತ್ತಿದ್ದಾರೆ. ಈ ಸ್ಪಷ್ಟತೆ ಸಿಗಲು ಡಿಎನ್‌ಎ ಟೆಸ್ಟ್ ಅನಿವಾರ್ಯವಾಗಿದೆ. ಹೀಗಾಗಿ ಮಗುವಿನ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು ಅನ್ನೋದಕ್ಕೆ ಡಿಎನ್ಎ ಟೆಸ್ಟ್‌ಗೆ ಆದೇಶ ನೀಡುತ್ತಿದ್ದೇವೆ ಎಂದ ಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ