
ಕಾನ್ಪುರ (ಜ.26) ಪ್ರೀತಿಗೆ ಎರಡು ಮನೆಯ ಪೋಷಕರ ವಿರೋಧ. ಆದರೆ ತಮ್ಮ ಪ್ರೀತಿ ಸೋಲಬಾರದು ಎಂದು ಗಟ್ಟಿಯಾಗಿ ನಿರ್ಧರಿಸಿದ ಜೋಡಿ ಮನೆಯವರ ವಿರೋಧದ ನಡುವೆ ರಿಜಿಸ್ಟರ್ಡ್ ಮದುವೆಯಾಗಿ ನಾಲ್ಕೇ ತಿಂಗಳಾಗಿತ್ತು ಅಷ್ಟೇ. ಸಂಸಾರದ ಬಂಡಿ ಆಗಷ್ಟೇ ಸಾಗಲು ಆರಂಭಿಸಿತ್ತು. ಆದರೆ ಅಚಾನಕ್ಕಾಗಿ ಮನೆಗೆ ಬಂದ ಗಂಡನಿಗೆ ಆಘಾತವಾಗಿದೆ. ಪಕ್ಕದಲ್ಲೇ ಇದ್ದ ಎಂಜಿನೀಯರಿಂಗ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ಪತ್ನಿ ಜೊತೆ ಹಾಸಿಗೆಯಲ್ಲಿದ್ದರು. ಕೆರಳಿದ ಗಂಡ, ಅದೇ ಮಂಚದಲ್ಲಿ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಸಚಿನ್ ಸಿಂಗ್ ಹಾಗೂ ಶ್ವೇತಾ ಸಿಂಗ್ ಪ್ರೀತಿಸಿ ಮದುವೆಯಾಗಿದ್ದರು. ವರ್ಷಗಳಿಂದ ಇವರ ಪ್ರೀತಿ ಸಾಗಿತ್ತು. ಇವರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಸಚಿನ್ ಸಿಂಗ್ ಮನೆಯ ಪೋಷಕರು ತೀವ್ರವಾಗಿ ವಿರೋಧಿಸಿದ್ದರು. ತೋರಿಕೆ ಪ್ರೀತಿ ಬೇಡ, ಉತ್ತಮ ವ್ಯಕ್ತಿಗಳನ್ನು ಪ್ರೀತಿಸಿದರೆ ನಾವೇ ಮದುವೆ ಮಾಡಿಕೊಡುತ್ತೇವೆ ಎಂದು ಸಲಹೆ ನೀಡಿದ್ದರು. ಇತ್ತ ಶ್ವೇತಾ ಮನೆಯಲ್ಲೂ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಪೋಷಕರ ವಿರುದ್ಧ ವಿವಾಹ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದರು.
ಮಹರಾಜಪುರ ಎಂಜಿನೀಯರಿಂಗ್ ಕಾಲೇಜಿನ ಪಕ್ಕದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸಚಿನ್ ಕೆಲಸಕ್ಕೆಂದು ನಗರಕ್ಕೆ ತೆರಳತ್ತಿದ್ದರೆ, ಮರಳಿ ಬರುವಾಗ ರಾತ್ರಿಯಾಗುತ್ತಿತ್ತು. ಇದರ ನಡುವೆ ಬಾಡಿಗೆ ಮನೆಯಲ್ಲಿರುತ್ತಿದ್ದ ಪತ್ನಿ ಶ್ವೇತಾ ಸಿಂಗ್‌ಗೆ ಅದೇ ಕಟ್ಟಡದಲ್ಲಿದ್ದ ಇಬ್ಬರು ಎಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಜೊತೆ ಸಲುಗೆ ಬೆಳೆದಿದೆ. ಒಂದೇ ತಿಂಗಳಲ್ಲಿ ಈ ಸಲುಗೆ ಅತೀಯಾಗಿದೆ. ಇದು ಗಂಡ ಸಚಿನ್ ಸಿಂಗ್ ಅನುಮಾನಕ್ಕೂ ಕಾರಣವಾಗಿದೆ.
ಮದುವೆಯಾದ ಮೂರನೇ ತಿಂಗಳಿಗೆ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಚಿನ್ ಮನೆಗೆ ಆಗಮಿಸಲು ಆರಂಭಿಸಿದ್ದರು. ಸಚಿನ್ ಸಿಂಗ್ ಇಲ್ಲದ ವೇಳೆ ವಿದ್ಯಾರ್ಥಿಗಳು ಶ್ವೇತಾ ಸಿಂಗ್ ಜೊತೆ ಕಾಲ ಕಳೆಯುತ್ತಿದ್ದರು. ಅನುಮಾನ ತೀವ್ರಗೊಳ್ಳುತ್ತಿದ್ದಂತೆ ಸಚಿನ್ ಸಿಂಗ್ ಈ ರಂಗಿನಾಟ ಪತ್ತೆ ಹಚ್ಚಲು ಮುಂದಾಗಿದ್ದ. ಹೀಗಾಗಿ ಪತ್ನಿಗೆ ತಾನು ಊರಿಗೆ ತೆರಳುತ್ತಿದ್ದೇನೆ. ಊರಿನ ಜಮೀನು ವಿಚಾರದಲ್ಲಿ ಮಾತುಕತೆ ಇದೆ. ಹೀಗಾಗಿ ಎರಡು ದಿನ ಕಳೆದು ಬರುತ್ತೇನೆ ಎಂದಿದ್ದಾನೆ. ಬಳಿಕ ಬಾಡಿಗೆ ಮನೆಯಿಂದ ಹೊರಟಿದ್ದಾನೆ.
ಪತ್ನಿ ಬಳಿ ಸುಳ್ಳು ಹೇಳಿದ್ದ ಸಚಿನ್ ಸಿಂಗ್ ತಡ ರಾತ್ರಿವರೆಗೆ ಕಾದು ಮನೆಗೆ ಮರಳಿದ್ದ. ಈ ವೇಳೆ ಪತ್ನಿ ಶ್ವೇತಾ ಸಿಂಗ್ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಜೊತೆ ಒಂದೇ ಸಮಯದಲ್ಲಿ ಹಾಸಿ ಹಂಚಿಕೊಂಡಿರುವ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾನೆ. ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಂತೆ ಪತ್ನಿ ಹಾಗೂ ವಿದ್ಯಾರ್ಥಿಗಳಿಗೆ ಗೊತ್ತಾಗಿದೆ. ದಾಳಿಗೆ ಮುಂದಾಗಿದ್ದಾರೆ. ಮನೆ ಲಾಕ್ ಮಾಡಿದ ಸಚಿನ್ ಸಿಂಗ್ ಪೊಲೀಸರಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಸಚಿನ್ ಹಾಗೂ ಶ್ವೇತಾ ಠಾಣೆಗೆ ಕರೆಯಿಸಿದ್ದರು. ಶ್ವೇತಾಳಿಗೆ ಪೊಲೀಸರು ಬುದ್ದಿ ಹೇಳಿದ್ದರು.
ಮನೆಗೆ ಮರಳಿದ ಬಳಿಕ ಶ್ವೇತಾ ಹಾಗೂ ಸಚಿನ್ ನಡುವೆ ಜಗಳವಾಗಿದೆ. ಮೊದಲೇ ಆಕ್ರೋಶಗೊಂಡಿದ್ದ ಸಚಿನ್ ಸಿಂಗ್ ಅದೇ ಹಾಸಿಗೆಯಲ್ಲಿ ಶ್ವೇತಾ ಸಿಂಗ್ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಕಂಬಳಿ ಸುತ್ತಿ ಮೃತದೇಹವನ್ನು ಬಾಡಿಗೆ ಮನೆಯಲ್ಲೇ ಇಟ್ಟು ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ