ವಂದೇ ಮಾತರಂಗೂ ರಾಷ್ಟ್ರಗೀತೆ ರೀತಿ ಸ್ಥಾನಕ್ಕೆ ಚಿಂತನೆ

Kannadaprabha News   | Kannada Prabha
Published : Jan 27, 2026, 04:28 AM IST
Vande mataram

ಸಾರಾಂಶ

ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರದ ನಿಯಮವನ್ನೂ ವಂದೇಮಾತರಂಗೂ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕುರಿತು ಅದು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರದ ನಿಯಮವನ್ನೂ ವಂದೇಮಾತರಂಗೂ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕುರಿತು ಅದು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

ವಂದೇ ಮಾತರಂಗೂ ನಿಯಮ ಅನ್ವಯ

ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ‘ರಾಷ್ಟ್ರಗೀತೆ ಜನಗಣಮನ ಗಾಯನದ ವೇಳೆ ಜನತೆ ಎದ್ದು ನಿಂತು ಗೌರವಿಸಬೇಕು’ ಎಂಬ ನಿಯಮ 150ನೇ ವರ್ಷಾಚರಣೆಯಲ್ಲಿರುವ ವಂದೇ ಮಾತರಂಗೂ ಅನ್ವಯವಾಗಲಿದೆ.

ಪ್ರಸ್ತುತ ಜನಗಣಮನ ಗಾಯನದ ವೇಳೆ ಜನರು ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯ. ಇದನ್ನು ಉಲ್ಲಂಘಿಸಿದವರಿಗೆ ರಾಷ್ಟ್ರ ಗೌರವ 1971 ಹಾಗೂ ವಿಧಿ 51(ಎ) ಅಡಿಯಲ್ಲಿ 3 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಇದೇ ನಿಯಮವನ್ನು ವಂದೇ ಮಾತರಂ ಗೀತೆಗೂ ಜಾರಿ ತರುವ ಸಾಧ್ಯತೆಗಳ ಕುರಿತು ಕೇಂದ್ರ ಗೃಹ ಸಚಿವಾಲಯವು ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಜಾರಿಯಾದರೆ, ವಂದೇ ಮಾತರಂಗೂ ಎದ್ದು ನಿಂತು ಗೌರವ ಸಲ್ಲಿಕೆ ಕಡ್ಡಾಯವಾಗಲಿದೆ.

ಧರ್ಮದ ಗುಣಗಾನ ಮಾಡಲಾಗಿದೆ ಎಂದು ಆರೋಪ

ಆದರೆ, ವಂದೇಮಾತರಂನಲ್ಲಿ ಒಂದು ಧರ್ಮದ ಗುಣಗಾನ ಮಾಡಲಾಗಿದೆ ಎಂದು ಆರೋಪಿಸಿ ಕೆಲವು ಪಕ್ಷಗಳು ಹಾಗೂ ಕೆಲವು ಧಾರ್ಮಿಕ ಸಂಘಟನೆಗಳು ಅದರ ಗೀತ ಗಾಯನವನ್ನು ವಿರೋಧಿಸುತ್ತಿವೆ. ಇದರ ನಡುವೆಯೇ ಈ ವಿದ್ಯಾಮನ ನಡೆದಿದೆ.

ವಂದೇಮಾತರಂಗೆ 150 ವರ್ಷ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಂಸತ್ತಿನಲ್ಲಿ ವಿಶೇಷ ಚರ್ಚೆ

ಈ ವೇಳೆಗೆ ಕಾಂಗ್ರೆಸ್‌ ಅವಧಿಯಲ್ಲಿ ಗೀತೆಗೆ ಅವಮಾನ ಎಂದು ಪ್ರಧಾನಿ ವಾಗ್ದಾಳಿ

ಈಗ ಸ್ವಾತಂತ್ರ್ಯ ಚಳವಳಿಗೆ ಸ್ಪೂರ್ತಿ ತುಂಬಿದ ಗೀತೆ ಸ್ಥಾನಮಾನ ಹೆಚ್ಚಳಕ್ಕೆ ಚಿಂತನೆ

ಈ ಕುರಿತು ಉನ್ನತ ಮಟ್ಟದ ಸಭೆ. ವಿವಿಧ ವಿಷಯ ಚರ್ಚೆ. ಶೀಘ್ರ ಹೊಸ ಸ್ಥಾನಮಾನ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ಭಾರತ- ಇಯು ನಡುವೆ ‘ಮದರ್ ಆಫ್ ಆಲ್‌ ಡೀಲ್ಸ್’?
'ಮೊದಲ ಸಾಲಿನಲ್ಲಿ ಯಾಕೆ ಕೂರಿಸಿಲ್ಲ?' ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಹುಲ್ ಗಾಂಧಿಗೆ 3ನೇ ಸಾಲಿನ ಆಸನ, ಕಾಂಗ್ರೆಸ್ ಕಿಡಿ