
ನವದೆಹಲಿ[ಮಾ.12]: ತನ್ನ ಮಕ್ಕಳನ್ನು ಕಾಪಾಡುವ ಸಲುವಾಗಿ ನಾಗರ ಹಾವನ್ನೇ ಎದುರಾಕ್ಕೊಂಡ ಅಳಿಲಿನ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದವರೂ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋವನ್ನು IFS ಆಫೀಸರ್ ಸುಶಾಂತ್ ನಂದಾ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 39 ಸೆಕೆಂಡ್ ನ ಈ ವಿಡಿಯೋದಲ್ಲಿ ತಾಯಿ ಅಳಿಲು ತನ್ನ ಮಕ್ಕಳನ್ನು ರಕ್ಷಿಸಲು ಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ.
IFS ಅಧಿಕಾರಿ ಅನ್ವಯ ಪ್ರಾಣಿಗಳು ತಮ್ಮ ಮರಿಗಳ ರಕ್ಷಣೆಗೆ ಮುಂದಾಗಿದೆ ಎಂದಿದ್ದಾರೆ. ವಿಡಿಯೋ ಕುರಿತು ಬರೆದುಕೊಂಡಿರುವ ನಂದಾ 'ತಾಯಿಯ ಮಮತೆಗೆ ಸಾಟಿ ಇಲ್ಲ. ಉಸಿರಿರೋ ಕೊನೆಯ ಕ್ಷಣದವರೆಗೂ ಆಕೆಯ ಪ್ರೀತಿ ಕರಗುವುದಿಲ್ಲ. ಈ ವಿಡಿಯೋ ತನ್ನ ಮಕ್ಕಳ ರಕ್ಷಣೆಗಾಗಿ ಶಕ್ತಿಶಾಲಿ ನಾಗರಹಾವಿನೊಂದಿಗೆ ಕಾದಾಡುವ ತಾಯಿ ಅಳಿಲಿನ ಶಕ್ತಿ ಏನೆಂದು ತೋರಿಸುತ್ತದೆ.' ಎಂದು ಬರೆದಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ