ನಿರ್ಭಯಾ ರೇಪಿಸ್ಟ್‌ಗಳ ಸಂದರ್ಶನಕ್ಕೆ ಅವಕಾಶ?

Published : Mar 12, 2020, 09:42 AM IST
ನಿರ್ಭಯಾ ರೇಪಿಸ್ಟ್‌ಗಳ ಸಂದರ್ಶನಕ್ಕೆ ಅವಕಾಶ?

ಸಾರಾಂಶ

ನಿರ್ಭಯಾ ರೇಪಿಸ್ಟ್‌ಗಳ ಸಂದರ್ಶನಕ್ಕೆ ಅವಕಾಶ?| ಸಂದರ್ಶನ ಕೋರಿದ್ದ ಮಾಧ್ಯಮದ ಅರ್ಜಿ ಪರಿಗಣಿಸಿ| ತಿಹಾರ್‌ ಜೈಲಧಿಕಾರಿಗಳಿಗೆ ದಿಲ್ಲಿ ಹೈಕೋರ್ಟ್‌ ಸೂಚನೆ

ನವದೆಹಲಿ[ಮಾ.12]: ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ನಾಲ್ವರೂ ದೋಷಿಗಳ ಸಂದರ್ಶನ ಬಯಸಿ ಮಾಧ್ಯಮ ಸಂಸ್ಥೆಯೊಂದು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸುವಂತೆ ದಿಲ್ಲಿ ಹೈಕೋರ್ಟು, ತಿಹಾರ್‌ ಜೈಲಧಿಕಾರಿಗಳಿಗೆ ಸೂಚಿಸಿದೆ.

ಗುರುವಾರ ನಿರ್ಣಯವನ್ನು ತನಗೆ ತಿಳಿಸುವಂತೆ ಕೂಡ ಜೈಲಧಿಕಾರಿಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ. ಡೆತ್‌ ವಾರಂಟ್‌ ಹೊರಡಿಸಿದ ಬಳಿಕ ದೋಷಿಗಳಿಗೆ ವಕೀಲರ ಭೇಟಿಗೆ ಅವಕಾಶ ಕೊಡಬಾರದು ಎಂಬ ನಿಯಮವನ್ನು ಈಗಾಗಲೇ ಜೈಲಧಿಕಾರಿಗಳು ಮುರಿದಿದ್ದಾರೆ. ಹೀಗಾಗಿ ಸಂದರ್ಶನಕ್ಕೆ ಅವಕಾಶ ಕೊಡುವ ಬಗ್ಗೆಯೂ ಪರಿಶೀಲಿಸಿ ಎಂದು ಜೈಲಧಿಕಾರಿಗಳಿಗೆ ಕೊರ್ಟ್‌ ಸೂಚಿಸಿದೆ.

ಇದೇ ವೇಳೆ ದೋಷಿ ಪವನ್‌ ಗುಪ್ತಾ ದಿಲ್ಲಿ ಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾನೆ. ತನ್ನ ಮೇಲೆ ದೌರ್ಜನ್ಯ ಎಸಗಿದ ಇಬ್ಬರು ಪೊಲೀಸರ ವಿರುದ್ಧ ಕ್ರಮಕ್ಕೆ ಆತ ಕೋರಿದ್ದಾನೆ. ಗುರುವಾರ ಇದರ ವಿಚಾರಣೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!