ಕೌಟುಂಬಿಕ ಕಲಹದ ನಂತರ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಕೆರೆಗೆ ಹಾರಿದ 25ರ ಹರೆಯದ ತಾಯಿ

Published : Apr 21, 2026, 06:21 PM ISTUpdated : Apr 21, 2026, 06:22 PM IST
mother with 2 kids jumped to well

ಸಾರಾಂಶ

ಮಹಾರಾಷ್ಟ್ರದ ಲಾತೂರ್‌ನಲ್ಲಿ, ಕೌಟುಂಬಿಕ ಕಲಹದಿಂದ ಬೇಸತ್ತ 25 ವರ್ಷದ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಈ ದುರಂತ ಘಟನೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಅವರ ಮೃತದೇಹಗಳು ಸೋಮವಾರ ಪತ್ತೆಯಾಗಿವೆ.

ದಿನವೂ ಕೌಟುಂಬಿಕ ಕಲಹ: ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ

25ರ ಹರೆಯದ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತು ಮನನೊಂದ ಯುವ ತಾಯಿ ಈ ಕೃತ್ಯವೆಸಗಿದ್ದಾಳೆ. ಮಹಾರಾಷ್ಟ್ರದ ಲಾತೂರ್‌ನಲ್ಲಿ ಘಟನೆ ನಡೆದಿದೆ.

ವರದಿಗಳ ಪ್ರಕಾರ ನಿರಂತರವಾದ ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ಭಾನುವಾರ ರಾತ್ರಿ ಈ ಆಘಾತಕಾರಿ ನಿರ್ಧಾರ ಮಾಡಿದ್ದಾಳೆ. ಸೋಮವಾರ ಮಧ್ಯಾಹ್ನದ ನಂತರ ಈ ತಾಯಿ ಮಕ್ಕಳ ಶವ ಕೆರೆಯಲ್ಲಿ ಪತ್ತೆಯಾಗಿದೆ. ಮೃತ ತಾಯಿಯನ್ನು 25 ವರ್ಷದ ನಿಕಿತಾ ಅಮರ್ದೀಪ್ ಭುರೆ ಎಂದು ಗುರುತಿಸಲಾಗಿದೆ. ಹಲವು ದಿನಗಳಿಂದ ಮಹಿಳೆ ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಭಾನುವಾರ ಸಂಜೆ ನಿಕಿತಾ ಹಾಗೂ ಆಕೆಯ ಪತಿ ಅಮರ್ದೀಪ್ ಮಧ್ಯೆ ಆರಂಭವಾದ ಕಲಹ ತಡರಾತ್ರಿಯವರೆಗೆ ಮುಂದುವರೆದು ವಿಕೋಪಕ್ಕೆ ತಿರುಗಿದ್ದು, ಬಳಿಕ ಮಹಿಳೆ ಈ ಆಘಾತಕಾರಿ ನಿರ್ಧಾರ ಮಾಡಿದ್ದಾರೆ.

ಮಧ್ಯರಾತ್ರಿ ಮಕ್ಕಳೊಂದಿಗೆ ಮನೆಬಿಟ್ಟು ಹೋದವರು ಸಿಕ್ಕಿದ್ದು ಶವವಾಗಿ:

ಪತಿಯೊಂದಿಗಿನ ಕಿತ್ತಾಟದ ಬಳಿಕ ರಾತ್ರಿ 1.30ರ ಸುಮಾರಿಗೆ ನಿಕಿತಾ ತನ್ನಿಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ತನ್ನ 5 ವರ್ಷದ ಮಗಳು ಶಿವಾನಿ ಹಾಗೂ 3 ವರ್ಷದ ಶಿವಾಂಶ್ ಜೊತೆ ಮನೆಬಿಟ್ಟು ಹೊರಟ ತಾಯಿ ಸಮೀಪದ ಕೆರೆಗೆ ಮಕ್ಕಳ ಜೊತೆಗೆ ಹಾರಿದ್ದಾಳೆ.

ಇತ್ತ ನಿಕಿತಾ ಹಾಗೂ ಮಕ್ಕಳು ಮನೆಯಲ್ಲಿ ಕಾಣದೇ ಹೋದಾಗ ಕುಟುಂಬದವರು ಹುಡುಕಲು ಆರಂಭಿಸಿದ್ದಾರೆ. ಸೋಮವಾರ ಬೆಳಗ್ಗಿನಿಂದ ಹುಡುಕಾಟ ಆರಂಭಿಸಿದ್ದು, ಮಧ್ಯಾಹ್ನದ ನಂತರ ಅವರ ಮೃತದೇಹಗಳು ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿವೆ. ಬಾವಿಯಲ್ಲಿ ತಾಯಿ ಮಕ್ಕಳ ಶವ ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಹಾಯದಿಂದ ಮೃತದೇಹ ಮೇಲೆತ್ತಿದ್ದಾರೆ.

ಇದನ್ನೂ ಓದಿ: ಪ್ರೇಮ ನಿರಾಕರಿಸಿದ ಮಹಿಳೆಯ ಮೇಲೆ ಸೇಡು: 11 ವರ್ಷದ ಮಗುವಿನ ಬರ್ಬರ ಹತ್ಯೆ: ನೀಲಿ ಡ್ರಮ್‌ನಲ್ಲಿ ಶವ ಪತ್ತೆ

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

EPF ಹಣ ಸಕಾಲಕ್ಕೆ ಪಾವತಿಸದಿದ್ದರೆ ಕ್ರಿಮಿನಲ್ ಕೇಸ್: ನಂತರ ಹಣ ಕಟ್ಟಿದರೂ ಶಿಕ್ಷೆ ತಪ್ಪಿದ್ದಲ್ಲ ಎಂದ ಹೈಕೋರ್ಟ್!
ಹಿಂದೂಗಳಿಗೆ ತಿಲಕ, ಪಾಕ್​ನಲ್ಲಿ ಉರಿ: ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಿಯೇ ತೀರುತ್ತೇವೆ: ಓಪನ್​ ಚಾಲೆಂಜ್ ಕೇಳಿ​