ರೈಲ್ವೆ ನಿಲ್ದಾಣದಲ್ಲಿ ತಾಯಿಯೊಬ್ಬರು ತಮ್ಮ ಮಗನಿಗೆ ಕೈತುತ್ತು ತಿನ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.
ನವದೆಹಲಿ: ಮಕ್ಕಳು ಎಷ್ಟೇ ದೊಡ್ಡವರಾದ್ರೂ ತಾಯಿಗೆ ಇನ್ನು ಚಿಕ್ಕ ಮಕ್ಕಳೇ.. ಮಕ್ಕಳು ಮದುವೆ ವಯಸ್ಸಿಗೂ ಬಂದರೂ ಕೆಲ ತಾಯಂದಿರು ಕೈ ತುತ್ತು ತಿನ್ನಿಸಿರುತ್ತಾರೆ. ಇಂತಹ ದೃಶ್ಯಗಳು ಸಹ ಕನ್ನಡ ಸಿನಿಮಾಗಳಲ್ಲಿ ನೋಡಿರುತ್ತೇವೆ. ಮನೆಯಲ್ಲಿ ನೆಂಟರಿಷ್ಟರು ಸೇರಿದಂತೆ ಎಲ್ಲರೂ ಸೇರಿದಾಗ ಹಿರಿಯರೊಬ್ಬರು ಕೈ ತುತ್ತು ನೀಡುತ್ತಿರುತ್ತಾರೆ. ಆದರೆ ಎಲ್ಲರ ಮನೆಯಲ್ಲಿಯೂ ಈ ರೀತಿಯ ಸನ್ನಿವೇಶಗಳು ಇರಲ್ಲ. ಎಲ್ಲ ಅಮ್ಮಂದಿರ ಪ್ರೀತಿ ತುಂಬಾ ವಿಭಿನ್ನವಾಗಿರುತ್ತದೆ. ಕೆಲ ತಾಯಂದಿರು ಮಕ್ಕಳಿಗೆ ಬೈಯ್ಯುವ ಮೂಲಕ ತಮ್ಮ ಪ್ರೀತಿ -ಕಾಳಜಿಯನ್ನು ತೋರಿಸುತ್ತಾರೆ. ಅಮ್ಮಂದಿರು ಮಕ್ಕಳಿಗೆ ಕೈ ತುತ್ತುವ ಸನ್ನಿವೇಶಗಳನ್ನು ಸಿನಿಮಾಗಳಲ್ಲಿ ನೋಡಿದಾಗ ರೋಮಾಂಚನವಾಗುತ್ತಿರುತ್ತದೆ. ಇದೀಗ ಅಂತಹುವುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಮುದ್ದಾದ ಪ್ರೀತಿ ತುಂಬಿದ ವಿಡಿಯೋ ನೋಡಿದ ನೆಟ್ಟಿಗರು, ತಮ್ಮ ತಾಯಿಯನ್ನು ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ. ಎಷ್ಟೋ ಜನರು ತಮ್ಮ ತಾಯಿ ನಮಗೆ ಹೀಗೆ ತುತ್ತು ನೀಡುತ್ತಿದ್ದರು ಎಂದು ನೆನಪು ಮಾಡಿಕೊಂಡು ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು @wordsofabhay ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ.
undefined
ವಿಡಿಯೋದಲ್ಲಿ ಏನಿದೆ?
ರೈಲಿನಲ್ಲಿ ಕುಳಿತ ಪ್ರಯಾಣಿಕರೊಬ್ಬರು ಈ ಸುಂದರ ಕ್ಷಣಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಪ್ಲಾಟ್‌ಫಾರಂ ಮೇಲೆ ತಾಯಿ ಮತ್ತು ಮಗ ಕುಳಿತಿರೋದನ್ನು ಕಾಣಬಹುದು. ವಿಡಿಯೋದಲ್ಲಿ ಮಗನಿಗೆ ವಯಸ್ಸು 17 ರಿಂದ 18 ಆಗಿರಬಹುದು. ತಾಯಿ ಪಕ್ಕದಲ್ಲಿಯೇ ಕುಳಿತಿರುವ ಮಗನಿಗೆ ಅನ್ನ-ಸಾಂಬಾರ್ ಸೇರಿಸಿ ಕೈ ತುತ್ತು ತಿನ್ನಿಸುತ್ತಾರೆ. ನಂತರ ತಾಯಿ ಸಹ ಒಂದು ತುತ್ತು ತಿನ್ನತ್ತಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ವ್ಯಕ್ತಿ, ತಾಯಿಯೊಬ್ಬಳು ಮೊದಲು ತನ್ನ ಮಕ್ಕಳ ಬಗ್ಗೆ ಯೋಚಿಸುತ್ತಾಳೆ. ಆನಂತರ ತನ್ನ ಬಗ್ಗೆ ನೋಡಿಕೊಳ್ಳುತ್ತಾಳೆ. ಮೊದಲ ತುತ್ತು ಮಗನಿಗೆ ತಿನ್ನಿಸಿದ ನಂತವರೇ ತಾಯಿ ತಿನ್ನುತ್ತಾಳೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 8 ಲಕ್ಷ ಖರ್ಚು, 3 ವರ್ಷ ಶ್ರಮ, 250ಕ್ಕೂ ಅಧಿಕ ವಿಡಿಯೋ; ದಿಢೀರ್ YouTube ಅಕೌಂಟ್ ಡಿಲೀಟ್ ಮಾಡಿ ಕಣ್ಣೀರಿಟ್ಟ ಯುವತಿ
ಈ ವಿಡಿಯೋ ಹಳೆಯದ್ದಾಗಿದ್ದರೂ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಭಾವುಕರಾಗಿರುವ ನೆಟ್ಟಿಗರು, ಈ ರೀತಿ ತಾಯಿ ಅಲ್ಲದೇ ಬೇರೆ ಯಾರೂ ಪ್ರೀತಿಸಲು ಸಾಧ್ಯವಿಲ್ಲ. ತಾಯಿಯನ್ನು ಗೌರವಿಸಿ. ತಾಯಿಗೆ ಆಕೆಯ ಮಕ್ಕಳ ಜೀವನ. ಮಕ್ಕಳಿಗಾಗಿಯೇ ಅಕೆಯ ಜೀವ ಮಿಡಿಯುತ್ತಿರುತ್ತದೆ. ಪ್ರೀತಿಯಲ್ಲಿ ತಾಯಿಯನ್ನು ಯಾರೂ ಹಿಂದೆ ಹಾಕಲು ಸಾಧ್ಯವಿಲ್ಲ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ತಾಯಿ ಮತ್ತು ಮಗುವಿನ ನಡುವಿನ ಪ್ರೀತಿಯನ್ನು ಬಿಂಬಿಸುವ ಅನೇಕ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುತ್ತವೆ.
ಇದನ್ನೂ ಓದಿ: ಕ್ರಿಸ್ಮಸ್, ನ್ಯೂ ಇಯರ್‌ಗೆ ಶುರುವಾಗಿದೆ ಬೋಲ್ಡ್ ಟ್ರೆಂಡ್; ಆದ್ರೆ ಇದು ನೀವು ಯೋಚಿಸುತ್ತಿರೋದು ಮಾತ್ರ ಅಲ್ಲ!