ಮೆಕ್ಕಾ ಅಥವಾ ಮದೀನಾ ಸಾಕು ಎಂದು ಮಾವನ ಪಟ್ಟು, ಹನಿಮೂನ್ ಇದು ಕಾಶ್ಮೀರ ಸಾಕು ಎಂದ ಅಳಿಯ. ಈ ವಿಚಾರದಲ್ಲಿ ಇಬ್ಬರಿಗೂ ಜಗಳಾಗಿದೆ. ಬಳಿಕ ನಡೆದಿದ್ದೇ ದುರಂತ. ಇದೀಗ ಮಗಳ ಪತಿ ಆಸ್ಪತ್ರೆ ದಾಖಲಾಗಿದ್ದಾನೆ.
ಥಾಣೆ(ಡಿ.19) ಮಗಳನ್ನು ಅದ್ಧೂರಿಯಾಗಿ ಮದುವೆ ಮಾಡಲಾಗಿದೆ. ಆದರೆ ಮದುವೆಯಾದ ಮರುದಿನವೇ ಮಗಳ ಪತಿ ಜೊತೆ ತಂದೆ ಬಾರಿ ಮಾತಿನ ಚಕಮಕಿ ನಡೆದಿದೆ. ಪತ್ನಿಯನ್ನು ಕರೆದುಕೊಂಡು ಹನಿಮೂನ್‌ಗೆ ಜಮ್ಮು ಮತ್ತು ಕಾಶ್ಮೀರ ಅಥವಾ ಹಿಮಾಚಲ ಪ್ರದೇಶ ಯಾವುದು ಅನ್ನೋ ಚರ್ಚೆ ನಡೆಯುತ್ತಿತ್ತು. ಇದರ ನಡುವೆ ಮಧ್ಯಪ್ರವೇಶಿಸಿದ ಮಗಳ ತಂದೆ, ಅದ್ಯಾವುದು ಬೇಡ, ಮೆಕ್ಕಾ ಅಥವಾ ಮದೀನಾ ಸಾಕು. ಮೊದಲು ಧಾರ್ಮಿಕ ಸ್ಥಳ ಸಂದರ್ಶಿಸಿ ಎಂದಿದ್ದಾರೆ. ಇದೇ ವಿಚಾರದಲ್ಲಿ ಇಬ್ಬರಿಗೂ ಜಗಳವಾಗಿದೆ. ಆದರೆ ಈ ಜಗಳ ಇಲ್ಲಿಗೆ ನಿಂತಿಲ್ಲ. ಆಕ್ರೋಶಗೊಂಡ ಮಗಳ ತಂದೆ ನೇರವಾಗಿ ಆ್ಯಸಿಡ್ ತಂದು ಮಗಳ ಪತಿ ಮೇಲೆ ಎರಚಿದ ಘಚಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
65 ವರ್ಷದ ಜಾಕಿ ಗುಲಾಮ್ ಮೊರ್ತಜಾ ಅವರನ್ನು ಮಗಳನ್ನು ಇತ್ತೀತೆಗೆ ಇಬಾದ್ ಅತೀಕ್ ಫಾಲ್ಕೆ ಮದುವೆಯಾಗಿದ್ದಾರೆ. ಮದುವೆಯಾದ ಬಳಿಕ ಪತ್ನಿ ಜೊತ ಹನಿಮೂನ್ ವಿಚಾರವಾಗಿ ಇಬಾದ್ ಅತೀಕ್ ಚರ್ಚಿಸಿದ್ದಾನೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶ ಎರಡು ಪ್ರವಾಸಿ ತಾಣಗಳಲ್ಲಿ ಒಂದನ್ನು ಅಂತಿಮಗೊಳಿಸಿ ಹನಿಮೂನ್ ತೆರಳಲು ಚರ್ಚಿಸಿದ್ದಾರೆ. ಕೊನೆಗೆ ಜಮ್ಮು ಮತ್ತು ಕಾಶ್ಮೀರ ಎಂದು ಫೈನಲ್ ಮಾಡಿದ್ದಾರೆ.
undefined
8 ವರ್ಷದ ಪ್ರೀತಿ, 15 ದಿನ ಹಿಂದಷ್ಟೇ ಮದುವೆ, ಹನಿಮೂನ್ ಮುಗಿಸಿ ಬಂದ ನವದಂಪತಿ ದುರಂತ ಅಂತ್ಯ!
ಈ ವಿಚಾರವನ್ನು ಮಗಳು ತನ್ನ ತಂದೆ ಜಾಕಿ ಗುಲಾಮ್ ಮೊರ್ತಜಾ ಬಳಿ ಹೇಳಿಕೊಂಡಿದ್ದಾಳೆ. ಇಷ್ಟೇ ನೋಡಿ. ಗುಲಾಮ್ ಮೊರ್ತಜಾ ಉರಿದುಬಿದ್ದಾರೆ. ಇದು ಸಾಧ್ಯವಿಲ್ಲ ಎಂದು ಮಗಳ ಬಳಿ ಖ್ಯಾತೆ ತೆರೆದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಗುಲಾಮ್ ಮೊರ್ತಜಾ ನೇರವಾಗಿ ಮಗಳ ಪತಿ ಜೊತೆ ಜಗಳಕ್ಕೆ ಇಳಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಹನಿಮೂನ್ ಬೇಡ, ಧಾರ್ಮಿಕ ಸ್ಥಳ ಸಾಕು. ಮೆಕ್ಕ ಮದೀನಾ ಆಯ್ಕೆ ಮಾಡಿಕೊಂಡು ತೆರಳಿ ಎಂದು ಗುಲಾಮ್ ಸೂಚಿಸಿದ್ದಾರೆ.
ಮೆಕ್ಕ ಮದೀನಾ ಧಾರ್ಮಿಕ ಸ್ಥಳ. ನಾವು ಹೋಗುತ್ತಿರುವುದು ಹನಿಮೂನ್. ಮೆಕ್ಕ ಮದೀನಾ ಮತ್ತೊಮ್ಮೆ ಹೋಗೋಣ. ಈಗ ಜಮ್ಮು ಮತ್ತು ಕಾಶ್ಮೀರ ಅಂತಿಮಗೊಳಿಸಲಾಗಿದೆ ಎಂದು ಮಾವನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾನೆ. ಆದರೆ ಈ ಮಾತಿನಿಂದ ಮತ್ತಷ್ಟು ಆಕ್ರೋಶಗೊಂಡ ಮೊರ್ತಜಾ, ತನ್ನ ಮಗಳ ಜೊತೆ ಹನಿಮೂನ್ ಏನೂ ಬೇಡ, ತೆರಳುವುದಾದರೆ ಮೆಕ್ಕ ಮದೀನಾಗೆ ತೆರಳಬೇಕು. ಧಾರ್ಮಿಕ ಸ್ಥಳ ಸಂದರ್ಶಿಸಲೇಬೇಕು ಎಂದು ತಾಕೀತು ಮಾಡಿದ್ದಾನೆ. ಈ ವಿಚಾರವಾಗಿ ಇಬ್ಬರಲ್ಲೂ ಮಾತಿನ ಚಕಮಕಿ ನಡೆದಿದೆ.
ಅಳಿಯನ ಮಾತಿನಿಂದ ಮತ್ತಷ್ಟು ಕೋಪಗೊಂಡ ಮೊರ್ತಜಾ ರಾತ್ರಿಯಾಗಲು ಕಾದು ಕುಳಿತಿದ್ದಾನೆ. ಮನೆಯಿಂದ ಹೊರಹೋಗಿದ್ದ ಇಬಾದ್ ಅತೀಕ್ ಮರಳಲು ಕಾಯುತ್ತಿದ್ದ. ಮನೆಯ ಹೊರಭಾಗದಲ್ಲಿ ಕಾಯುತ್ತಿದ್ದ ಮೊರ್ತಜಾ, ಅಳಿಯ ವಾಹನ ಪಾರ್ಕ್ ಮಾಡುತ್ತಿದ್ದಂತೆ ಕೈಯಲ್ಲಿ ಹಿಡಿದಿದ್ದ ಆ್ಯಸಿಡ್ ಎರಚಿದ್ದಾನೆ. ಮುಖದ ಮೇಲೆ ಎರಿಚಿದ ಆ್ಯಸಿಡ್‌ನಿಂದ ಮುಖ ಹಾಗೂ ಎದೆ ಭಾಗ ಸುಟ್ಟು ಹೋಗಿದೆ. ತಕ್ಷಣವೇ ಚೀರಾಡಿದ ಇಬಾದ್‌ನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಆ್ಯಸಿಡ್ ಎರಚಿದ ಮೊರ್ತಜಾ ಪರಾರಿಯಾಗಿದ್ದಾರೆ. ಇದೀಗ ಇಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಾವ ನಾಪತ್ತೆಯಾಗಿದ್ದಾರೆ.
ರೋಮ್ಯಾಂಟಿಕ್ ಹನಿಮೂನ್ ಗೆ ಲಕ್ಷದ್ವೀಪದ ಈ ರೆಸಾರ್ಟ್‌ಗಳನ್ನು ಬುಕ್ ಮಾಡಿ
ಮಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಂದೆ ಈ ಮದುವೆ ಸಂಬಂಧ ಬೇಡ ಎಂದು ಒತ್ತಾಯಿಸಿದ್ದಾರೆ. ನನ್ನ ಮಾತು ಧಿಕ್ಕರಿಸುವ ಪತಿ ನಿನಗೆ ಬೇಡ. ಬೇರೆ ಮದುವೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಪತಿ ಒಪ್ಪದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.