ಕೆರೆ ನೀರಿನಲ್ಲಿದ್ದ ಮರಿ ಆನೆ ಮೇಲೆ ಅದೇ ನೀರಿನಲ್ಲಿದ್ದ ಹಿಪ್ಪೋ ದಾಳಿಗೆ ಮುಂದಾಗಿತ್ತು. ಆದರೆ ಕ್ಷಣಾರ್ಧದಲ್ಲಿ ದಾಳಿ ಅರಿತ ತಾಯಿ ಆನೆ ಒಂದೇ ಸಮನೆ ನೀರಿಗೆ ಧುಮುಕಿ ಹಿಪ್ಪೋ ಮೇಲೆ ಪ್ರತಿ ದಾಳಿ ನಡೆಸಿ, ಮರಿ ಆನೆಯನ್ನು ಸುರಕ್ಷಿತವಾಗಿ ದಡ ಸೇರಿದ ವಿಡಿಯೋ ಭಾರಿ ವೈರಲ್ ಆಗಿದೆ.
ಆನೆ ಕುಟುಂಬ ಜೀವಿ. ಅದರಲ್ಲೂ ಮರಿ ಆನೆಗಳಿದ್ದರೆ ದೊಡ್ಡ ಕುಟುಂಬ ಜೊತೆಯಾಗಿರುತ್ತದೆ. ಮರಿಗಳಿಗೆ ಝೆಡ್ ಪ್ಲಸ್ ಸೆಕ್ಯೂರಿಟಿ ಒದಗಿಸುತ್ತಿದೆ. ಆನೆ ವಿಶ್ರಾಂತಿ ವೇಳೆಯಲ್ಲಿ ಮರಿ ಆನೆ ಸುತ್ತ ತಾಯಿ ಆನೆ ಸೇರಿದಂತೆ ಇತರ ಆನೆಗಳು ವಿಶ್ರಾಂತಿ ಪಡೆಯುತ್ತಿದೆ. ಇಷ್ಟೇ ಅಲ್ಲ ವೇಳೆ ಶಿಫ್ಟ್ ರೀತಿಯಲ್ಲಿ ಆನೆಗಳು ಎಚ್ಚರದಲ್ಲಿರುತ್ತದೆ. ಅಷ್ಟರ ಮಟ್ಟಿಗ ಇತರ ಪ್ರಾಣಿಗಳ ದಾಳಿಯಿಂದ ಮರಿ ಆನೆಯನ್ನು ರಕ್ಷಿಸುತ್ತದೆ. ಇದೀಗ ಹೀಗೆ ಮರಿ ಆನೆ ಮೇಲೆ ಹಿಪ್ಪೊ ಒಂದು ದಾಳಿಗೆ ಮುಂದಾದಾಗ, ಕೆಲವೇ ಕ್ಷಣಗಳಲ್ಲಿ ಪ್ರತಿ ದಾಳಿ ನಡೆಸಿ ಮರಿ ಆನೆಯನ್ನು ಸುರಕ್ಷಿತವಾಗಿ ದಡ ಸೇರಿಸಿದ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ದಟ್ಟ ಕಾಡಿನ ಕೆರೆಯಲ್ಲಿ ತಾಯಿ ಆನೆ ಹಾಗೂ ಮರಿ ಆನೆ ನೀರಿಗೆ ಇಳಿದಿದೆ. ನೀರಿನಲ್ಲಿ ಆಡುವ ಖುಷಿಯಲ್ಲಿ ಮರಿ ಆನೆ ಕೆರೆಯ ಬದಿಯಿಂದ ಕೊಂಚ ದೂರ ಸಾಗಿದೆ. ಇತ್ತ ತಾಯಿ ಆನೆ ಮರಿ ಆನೆ ಹಾಗೂ ಸುತ್ತ ಮುತ್ತ ಹದ್ದಿನ ಕಣ್ಣಿಟ್ಟಿತು. ತಾಯಿ ಹಾಗೂ ಮರಿ ಆನೆ ನೀರಿನಲ್ಲಿತ್ತು. ಮರಿ ಆನೆಯ ತುಂಟಾಗಳು ನೀರು ಸಿಕ್ಕಿದರೆ ಕೇಳಬೇಕೆ? ನೀರಿನಲ್ಲಿ ಆಟವಾಡರು ಶುರು ಮಾಡಿದೆ.
undefined
ವಿಶ್ರಾಂತಿ ವೇಳೆ ಮರಿಯಾನೆಗೆ ಆನೆ ಕುಟುಂಬದ Z ಪ್ಲಸ್ ಭದ್ರತೆ, ಅಣ್ಣಾಮಲೈ ಅರಣ್ಯದ ವಿಡಿಯೋ ವೈರಲ್!
ತಾಯಿ ಆನೆ ಕೂಡ ಮರಿ ಆನೆ ಪಕ್ಕದಲ್ಲೇ ನಿಂತಿತ್ತು. ಆದರೆ ಹಿಂಭಾಗದಿಂದ ಅದೇ ಕೆರೆಯಲ್ಲಿದ್ದ ಹಿಪ್ಪೊ ಒಂದು ದಾಳಿಗೆ ಮುಂದಾಗಿದೆ. ಮರಿ ಆನೆ ಕೆಲವೇ ಅಂತರದಲ್ಲಿ ಕಾಣಿಸಿಕೊಂಡಿದೆ. ಇನ್ನೇನು ದಾಳಿ ಮಾಡಬೇಕು ಅನ್ನುವಷ್ಟರಲ್ಲೇ ತಾಯಿ ಆನೆ ಏಕಾಏಕಿ ಪ್ರತಿದಾಳಿ ನಡೆಸಿದೆ. ತಾಯಿ ಆನೆಯ ದಾಳಿಗೆ ಹಿಪ್ಪೋ ಕಕ್ಕಾಬಿಕ್ಕಿಯಾಗಿದೆ. ಒಂದೇ ಕ್ಷಣಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಒದ್ಗಾಡಿದೆ. ಆದರೆ ತಾಯಿ ಆನೆಯ ಆಕ್ರೋಶ, ಆತಂಕ ಕಡಿಮೆಯಾಗಿರಲಿಲ್ಲ. ಹೀಗಾಗಿ ಹಿಪ್ಪೋವನ್ನು ಸ್ಥಳದಿಂದಲೇ ಓಡಿಸಿದೆ.
Mother elephant makes quick work of hippos approaching her newborn baby in the watering hole pic.twitter.com/XzMzuUwkda
— Nature is Amazing ☘️ (@AMAZlNGNATURE)
ಬಳಿಕ ನೇರವಾಗಿ ಮರಿಆನೆ ಬಳಿ ಬಂದು ನೆರವು ನೀಡಿದೆ. ಕೆಸರು ತುಂಬಿದ ನೀರಿನಲ್ಲಿ ಮರಿ ಆನೆ ಮೇಳೆಲು ಒದ್ದಾಡುತ್ತಿತ್ತು. ತಾಯಿ ಆನೆಯ ಸಹಾಯದಿಂದ ಮರಿ ಆನೆ ದಡ ಸೇರಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಮಕ್ಕಳನ್ನು ರಕ್ಷಿಸುವಲ್ಲಿ, ಸುರಕ್ಷಿತವಾಗಿಡುವಲ್ಲಿ ತಾಯಿಗಿಂತ ಉತ್ತಮ ಯಾರಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ತಾಯಿ ಪ್ರೀತಿಗೆ ಸರಿಸಾಟಿ ಎಲ್ಲಿ, ತಾಯಿ ಪ್ರೀತಿ ದೇವರು ಕೊಟ್ಟ ವರ, ಹಿಪ್ಪೋ ಈ ರೀತಿ ಓಡಿ ಹೋಗಿದ್ದನ್ನು ಯಾವತ್ತೂ ನೋಡಿಲ್ಲ, ಪ್ರತಿ ಬಾರಿ ದಾಳಿ ಮಾಡಿದ್ದನ್ನೇ ನೋಡಿದ್ದೇನೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ತಾಯಿ ಕಳೆದುಕೊಂಡ ಮರಿ ಆನೆ ರಕ್ಷಿಸಿ ಮಗುವಿನಂತೆ ಆರೈಕೆ, ಫೋಟೋ ಹಂಚಿಕೊಂಡ IFS ಅಧಿಕಾರಿ!
ಆನೆ ಗುಂಪಾಗಿ ಜೀವಿಸುತ್ತದೆ. ಗುಂಪು ಗುಂಪಾಗಿ ಆಹಾರ ಹುಡುಕುತ್ತಾ ತೆರಳುತ್ತದೆ. ಜೊತೆಯಾಗಿ ವಿಶ್ರಾಂತಿ ಪಡೆಯುತ್ತದೆ. ಮರಿ ಆನೆಗಳಿದ್ದರೆ ಈ ಗುಂಪಿನ ಮದ್ಯದಲ್ಲಿ ಮರಿ ಆನೆಗಳಿರುತ್ತದೆ. ಪಕ್ಕದಲ್ಲಿ ತಾಯಿ ಆನೆ, ಬಳಿಕ ಗಂಡು ಆನೆಗಳು ಇರುತ್ತದೆ. ಇದರಿಂದ ಮರಿ ಆನೆಗಳಿಗೆ ಗರಿಷ್ಠ ಭದ್ರತೆ ಒದಗಿಸುತ್ತದೆ.