ಮೋಸ್ಟ್ ವಾಂಟೆಡ್ LeT ಉಗ್ರರ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು, 5 ಲಕ್ಷ ರೂ ಬಹುಮಾನ ಘೋಷಣೆ!

By Suvarna News  |  First Published Jul 3, 2022, 5:37 PM IST
  • ಜಮ್ಮು ಮತ್ತು ಕಾಶ್ಮೀರದ ರೆಸಾಯಿ ಜಿಲ್ಲೆಯಲ್ಲಿಲ ನಡೆದ ಘಟನೆ
  • ಲಷ್ಕರ್ ಇ ತೈಬಾ ಸಂಘಟನೆಯ ಇಬ್ಬರು ಉಗ್ರರು ವಶಕ್ಕೆ
  • 5 ಲಕ್ಷ ರೂ ಘೋಷಿಸಿದ ಜಮ್ಮು ಕಾಶ್ಮೀರ ಲೆ.ಗವರ್ನರ್

ಶ್ರೀನಗರ(ಜು.03): ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ತಿಂಗಳಿನಿಂದ ಉಗ್ರರ ಉಪಟಳ ಹೆಚ್ಚಾಗಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದ್ದ ಉಗ್ರರ ಮೇಲೆ ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ತೆರೆ ಮರೆಯಲ್ಲಿ ಉಗ್ರರು ಭಾರಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಇದರ ನಡುವೆ ರೆಸಾಯಿ ಜಿಲ್ಲೆಯಲ್ಲಿ ಅಡಗಿದ್ದ ಮೋಸ್ಟ್ ವಾಂಟೆಡ್ ಲಷ್ಕರ್ ಇ ತೈಬಾ ಉಗ್ರಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಇತ್ತೀಚೆಗೆ ರಜೌರಿ ಜಿಲ್ಲೆಯಲ್ಲಿ ನಡೆದ ಐಇಡಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ರೂವಾರಿಗಳಾದ ಲಷ್ಕರ್ ಇ ತೈಬಾ ಕಮಾಂಡರ್ ಉಗ್ರ ತಲಿಬ್ ಹುಸೈನ್ ಹಾಗೂ ಫೈಜಲ್ ಅಹಮ್ಮದ್ ದಾರ್ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಐಇಡಿ ಬ್ಲಾಸ್ಟ್ ಪ್ರಕರಣದ ಬಳಿಕ ಇಬ್ಬರು ತಲೆಮರೆಸಿಕೊಂಡಿದ್ದರು.

Tap to resize

Latest Videos

ಪವಿತ್ರ ಅಮರನಾಥ ಯಾತ್ರೆ ಆರಂಭ, ಹಿಮಾಲಯದಲ್ಲಿ ಬಿಗಿ ಭದ್ರತೆ

ಗೌಪ್ಯ ಸ್ಥಳದಲ್ಲಿ ಶಸ್ತ್ರಾಸ್ತ್ರ ಜಮಾವಣೆ ಮಾಡಿ ಸ್ಪೋಟಕ್ಕೆ ಸಂಚು ರೂಪಿಸುತ್ತಿದ್ದ ಇಬ್ಬರನ್ನು ಸ್ಥಳೀಯರು ಕಾರ್ಯಾಚರಣೆ ನಡೆಸಿ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಉಗ್ರರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಇವರಿಂದ ಎಕೆ47 ಗನ್, ಗುಂಡುಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. 

ಚೆನಾಬ್ ಕಣಿವೆ, ರಜೌರಿ ಹಾಗೂ ಪೂಂಚ್ ವಲಯದಲ್ಲಿ ಭಯೋತ್ಪಾದನಾ ಚಟುವಟಿಕೆಗಲ್ಲಿ ಈ ಉಗ್ರರು ಸಕ್ರೀಯರಾಗಿದ್ದರು. ಬಡ ಮುಸ್ಲಿಮ್ ಯುವಕರನ್ನು ಟಾರ್ಗೆಟ್ ಮಾಡಿ ಅವರಿಗೆ ಹಣ ಹಾಗೂ ಕುಟುಂಬಕ್ಕೆ ಹಣ ನೀಡುವ ಮೂಲಕ ಉಗ್ರ ಸಂಘಟನೆಯತ್ತ ಸೆಳೆದುಕೊಳ್ಳುತ್ತಿದ್ದರು. ಬಳಿಕ ಅವರಿಗೆ ತರಬೇತಿ ನೀಡುವ ಕಾರ್ಯಗಳು ನಡೆಯುತ್ತಿತ್ತು. ಇದೀಗ ಇಬ್ಬರ ಬಂಧನದಿಂದ ಮುಂದಾಗಬಹುದಾದ ಬಹುದೊಡ್ಡ ದುರಂತ ತಪ್ಪಿದೆ. ಗ್ರಾಮಸ್ಥರ ಧೈರ್ಯಕ್ಕೆ ಮೆಚ್ಚಿದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಕೆ ಸಿನ್ಹಾ, 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. 

ಕಾಶ್ಮೀರಕ್ಕೆ ನುಸುಳಲು 150 ಉಗ್ರರು ಸಜ್ಜು
ಜಮ್ಮು ಹಾಗೂ ಕಾಶ್ಮೀರದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ 150 ಉಗ್ರರು ಲಾಂಚ್‌ಪ್ಯಾಡ್‌ಗಳಲ್ಲಿ ಸಜ್ಜಾಗಿದ್ದಾರೆ ಎಂದು ಹಿರಿಯ ಸೇನಾಧಿಕಾರಿ ಹೇಳಿದ್ದಾರೆ. ಈ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಗಡಿಯುದ್ದಕ್ಕೂ ನೇಮಕವಾಗಿರುವ ಭದ್ರತಾ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿವೆ ಎಂದಿದ್ದಾರೆ.

ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮನ್‌ಶೇರಾ, ಕೋಟ್ಲಿ ಹಾಗೂ ಮುಜಪ್ಫರಾಬಾದ್‌ನಲ್ಲಿ 11 ತರಬೇತಿ ಶಿಬಿರಗಳಲ್ಲಿ 500 ರಿಂದ 700 ಉಗ್ರರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 150 ಉಗ್ರರು ಕಾಶ್ಮೀರದಲ್ಲಿ ನುಸುಳಲು ಲಾಂಚ್‌ಪ್ಯಾಡ್‌ಗಳಲ್ಲಿ ಸಜ್ಜಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ಕಣಿವೆ ರಾಜ್ಯದಲ್ಲೇ ಸುರಕ್ಷಿತ ಸ್ಥಳಗಳಿಗೆ ವರ್ಗಾವಣೆ ಮಾಡಿದ ಸರ್ಕಾರ!

ಉಗ್ರರು ದಕ್ಷಿಣ ಕಾಶ್ಮೀರದ ಪೀರ್‌ಪಂಜಾಲ್‌ ಮಾರ್ಗವನ್ನು ಹಾಗೂ ನೇಪಾಳದ ಹಾದಿ ಬಳಸಿ ಕಾಶ್ಮೀರಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆ, ಕಳೆದ 40-42 ದಿನಗಳಲ್ಲಿ 50ಕ್ಕೂ ಹೆಚ್ಚು ಉಗ್ರರ ಹತ್ಯೆ ಮಾಡಲಾಗಿದೆ. ಆದರೆ ಈವರೆಗೂ ಸೇನೆ ಉಗ್ರರ ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿದ್ದು, ಒಳನುಸುಳುವಿಕೆಯ ಇನ್ನಿತರ ಮಾರ್ಗಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಮತ್ತೆ 4 ಉಗ್ರರ ಹತ್ಯೆ 
ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಮಾಜಿದ್‌ ನಾಜಿರ್‌ ಸೇರಿದಂತೆ ನಾಲ್ವರು ಹತರಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನೆಸಲಾಗಿತ್ತು. ಕೆಲ ದಿನಗಳ ಹಿಂದೆ ನಡೆದ ಪೊಲೀಸ್‌ ಅಧಿಕಾರಿ ಫಾರುಖ್‌ ಹತ್ಯೆಯಲ್ಲಿ ಈತನ ಕೈವಾಡ ಇತ್ತು ಎನ್ನಲಾಗಿದೆ. 

click me!