UP Elections: ಮೋದಿ ಹಿಂದುಳಿದ ಜನಾಂಗದವರೆಂದು ಬಿಜೆಪಿ ಕಡೆ ವಾಲಿದ ಮತದಾರರು

Published : Jan 17, 2022, 02:04 PM ISTUpdated : Jan 19, 2022, 08:50 PM IST
UP Elections: ಮೋದಿ ಹಿಂದುಳಿದ ಜನಾಂಗದವರೆಂದು ಬಿಜೆಪಿ ಕಡೆ ವಾಲಿದ ಮತದಾರರು

ಸಾರಾಂಶ

* ಉತ್ತರ ಪ್ರದೇಶದಲ್ಲಿ ರಾಜಕೀಯದಾಟ * ಮತದಾರರ ಗಮನ ಸೆಳೆಯಲು ಪಕ್ಷಗಳ ಪೈಪೋಟಿ * ಯುಪಿಯಲ್ಲಿ ಅತೀ ಹಿಂದುಳಿದ ಜಾತಿಗಳೇ ನಿರ್ಣಾಯಕ 

 ಪ್ರಶಾಂತ್ ನಾತು, ಇಂಡಿಯಾ ಗೇಟ್

ಲಕ್ನೋ(ಜ.17): 2014 ರಲ್ಲಿ ನರೇಂದ್ರ ಮೋದಿ ಕಾರಣದಿಂದ ಬಿಜೆಪಿ ಉಚ್ಚಾಯ ಶುರು ಆದ ಮೇಲೆ ಗಮನಿಸಬೇಕಾದ ಒಂದು ಅಂಶ ಎಂದರೆ ಕರ್ನಾಟಕ, ಯುಪಿ ಸೇರಿದಂತೆ ಪೂರ್ತಿ ದೇಶದಲ್ಲಿ  ಅತೀ ಹಿಂದುಳಿದ ಸಮುದಾಯಗಳು ಹಿಂದುತ್ವದ ಅಡಿಯಲ್ಲಿ ಬಿಜೆಪಿ ಜೊತೆ ಬಂದಿದ್ದು.ಯುಪಿ ಯಲ್ಲಿ ಕೂಡ ಆಗಿದ್ದು ಅದೇ. 90 ರ ದಶಕದಲ್ಲಿ ಒಂದು ಕಡೆ ಅಯೋಧ್ಯೆಯ ಮಂದಿರ ಆಂದೋಲನ ದಿಂದ ಯುಪಿ ಯಲ್ಲಿ ಮಜಬೂತ ಆದರೆ ಮಂಡಲ್ ವರದಿ ಹೋರಾಟದ ಫಲಾನುಭವಿ ಎಂದರೆ ಮುಲಾಯಂ ಸಿಂಗ್ ಯಾದವ.ಆದರೆ ಮುಲಾಯಂ ಆಡಳಿತದಲ್ಲಿ ಪ್ರಾತಿನಿಧ್ಯ ಮತ್ತು ಅಧಿಕಾರ ಎರಡು ಕೂಡ ಯಾದವರಿಗೆ ದಂಡಿ ಯಾಗಿ ಸಿಕ್ಕಿದ್ದರಿಂದ ಮುನಿಸಿಕೊಂಡಿದ್ದ ಯಾದವೇತರ ಹಿಂದುಳಿದ ವರ್ಗಗಳು ಮೋದಿ ಕೂಡ ಹಿಂದುಳಿದ ಸಮುದಾಯ ದವರು ಎಂಬ ಕಾರಣಕ್ಕೆ ಬಿಜೆಪಿ ಕಡೆ ವಾಲಿದ್ದವು.

UP Elections: ಮತದಾರರ ಒಲವು ಯಾರ ಕಡೆ? ಹೀಗಿದೆ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ

 ಒಂದು ಅಂದಾಜಿನ ಪ್ರಕಾರ  ಯು ಪಿ ಯಲ್ಲಿ ಲೋಧ್ ನಿಶಾದ ಕುರ್ಮಿ ಸೈನಿ ಚೌಹಾಣ್ ರಾಜಭರ್ ಮೌರ್ಯ ಕುಶ್ವಾಹ್ ಹೀಗೆ ನೂರಾರು ಸಣ್ಣ  ಜಾತಿಗಳು ಸೇರಿ ಸುಮಾರು 35 ಪ್ರತಿಶತದಷ್ಟು ಇದ್ದಾರೆ. 5 ವರ್ಷ ಬಿಜೆಪಿ ಜೊತೆಗಿದ್ದ ಈ ಸಣ್ಣ ಸಮುದಾಯ ಗಳ ನಾಯಕರು ಹೊಯ್ದಾಡುತ್ತಿರುವುದು ಯು ಪಿ ಚುನಾವಣೆಯನ್ನು ಇನ್ನಷ್ಟು ಕುತೂಹಲಕ್ಕೆ ದೂಡಿದೆ.

 ಒಂದು ಅಂದಾಜಿನ ಪ್ರಕಾರ ಯು ಪಿ ಯಲ್ಲಿ ಬ್ರಾಹ್ಮಣ ರು ಸೇರಿದಂತೆ 20 ಪ್ರತಿಶತ ಮೇಲ್ಜಾತಿ ಗಳಿದ್ದು ಅವರು ಹೆಚ್ಚಾಗಿ ಬಿಜೆಪಿ ಜೊತೆಗಿದ್ದಾರೆ. ಹೆಚ್ಚು ಕಡಿಮೆ ಜೊತೆಗೂಡಿದರೆ  25 ಪ್ರತಿಶತ ಇರುವ ಯಾದವ ಮತ್ತು ಮುಸ್ಲಿಮರು ಕಟ್ಟಾ ಅಖಿಲೇಶ್ ಯಾದವ್ ಮತದಾರರು ಸುಮಾರು 14 ಪ್ರತಿಶತ ಇರುವ ದಲಿತ ಜಾಟವರು ಪಕ್ಕಾ ಮಾಯಾವತಿ ಮತದಾರರು ಆದರೆ  ಕಾಂಗ್ರೆಸ್ ಗೆ ಮಾತ್ರ  ಪಕ್ಕಾ ವೋಟ್ ಬ್ಯಾಂಕ್ ಕಾಣುತ್ತಿಲ್ಲ ಒಂದು ಕಾಲದಲ್ಲಿ ಕಾಂಗ್ರೆಸ್ ಜೊತೆಗಿದ್ದ  ಮುಸ್ಲಿಮರು ಅಖಿಲೇಶ್ ಕಡೆ ಬ್ರಾಹ್ಮಣರು ಬಿಜೆಪಿ ಕಡೆ ವಾಲಿದ್ದಾರೆ

Uttar Pradesh: 7 ಹಂತದ ಚುನಾವಣೆಯಿಂದ ಅದೃಷ್ಟ!

ಹೀಗಾಗಿ ಯು ಪಿ ರಾಜಕೀಯ ಭವಿಷ್ಯವನ್ನು ನಿರ್ಧರಿಸುವವರು ಉಳಿದ 35 ಪ್ರತಿಶತ ಇರುವ ಇದೇ ಅತೀ ಹಿಂದುಳಿದ ಮತದಾರರು.ಕಳೆದ ಬಾರಿ ಬಿಜೆಪಿ ಕಡೆ ವಾಲಿದ್ದ ಅತೀ ಹಿಂದುಳಿದ ಮತದಾರರನ್ನು ಸೆಳೆಯಲು ಅಖಿಲೇಶ್ ಒಬ್ಬೊಬ್ಬರೇ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.ಸ್ವಾಮಿಪ್ರಸಾದ ಮೌರ್ಯ ದಾರಾ ಸಿಂಗ್ ಚೌಹಾನ ಮುಖೇಶ್ ಸೈನಿ ಹೀಗೆ ಯೋಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು