ಬಾಬ್ರಿ ಮಸೀದಿ ಗಾತ್ರದಷ್ಟೆ ದೊಡ್ಡ ಮಸೀದಿ ನಿರ್ಮಾಣ/ ಐದು ಎಕರೆ ಜಾಗದಲ್ಲಿ ಲೈಬ್ರರಿ, ಮ್ಯೂಸಿಯಂ/ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯಕ್ಕೆ ಪೂರ್ವಸಿದ್ಧತೆ
ವದೆಹಲಿ(ಸೆ. 05) ಬಾಬ್ರಿ ಮಸೀದಿಯ ಗಾತ್ರದಷ್ಟೇ ಮಸೀದಿ ಅಯೋಧ್ಯೆಯ ಧಮ್ಮಿಪುರ್ ಗ್ರಾಮದಲ್ಲಿ ನಿರ್ಮಾಣವಾಗಲಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಬೇರೆ ಮಸೀದಿ ನಿರ್ಮಾಣಕ್ಕೆ ಧಮ್ಮಿಪುರ್ನಲ್ಲಿ 5 ಎಕರೆ ಜಾಗವನ್ನು ನೀಡಲಾಗಿದೆ.
ಐದು ಎಕರೆ ಜಾಗದಲ್ಲಿ ಮಸೀದಿ, ಆಸ್ಪತ್ರೆ, ಲೈಬ್ರರಿ, ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತದೆ. ಮಸೀದಿ ನಿರ್ಮಾಣಕ್ಕಾಗಿ ರಚಿಸಲಾಗಿರುವ ಟ್ರಸ್ಟ್ನ ಪದಾಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಮ್ಯೂಸಿಯಂನ ಪ್ರಮುಖ ಕ್ಯೂರೇಟರ್ ಆಗಿ ವಿಮರ್ಶಕ ಪುಷ್ಪೇಶ್ ಪಂತ್ ಕಾರ್ಯನಿರ್ವಹಿಸಲಿದ್ದಾರೆ.
undefined
ರಾಮಭಕ್ತ ಮುಸ್ಲಿಮರಿಂದ ಮಂದಿರಕ್ಕಾಗಿ ಹೋರಾಟ
ಧಮ್ಮಿಪುರ್ನಲ್ಲಿ ನಿರ್ಮಾಣವಾಗಲಿರುವ ಮಸೀದಿಯ ಸಮುಚ್ಚಯದಲ್ಲಿ ಆಸ್ಪತ್ರೆ, ಮ್ಯೂಸಿಯಂನಂಥ ಸೌಲಭ್ಯಗಳಿರುತ್ತವೆ. ಐದು ಎಕರೆಯ ಈ ಪ್ರದೇಶದಲ್ಲಿ 15 ಸಾವಿರ ಚದರಡಿಯಲ್ಲಿ ಮಸೀದಿ ಇರಲಿದ್ದು ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯ ಕಾರ್ಯದರ್ಶಿ ಮತ್ತು ವಕ್ತಾರ ಅಥರ್ ಹುಸೇನ್ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಸ್ಥಾಪನೆ ಮಾಡಿಕೊಂಡಿದ್ದು ಮಸೀದಿ ನಿರ್ಮಾಣದ ಕೆಲಸ ನೋಡಿಕೊಳ್ಳಲಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಪ್ರೊಫೆಸರ್ ಎಸ್‌ಎಂ ಅಕ್ತರ್ ವಾಸ್ತುಶಿಲ್ಪ ನೀಡಲಿದ್ದಾರೆ ಎಂದು ಹುಸೇನ್ ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದು ಕೆಲಸ ಪ್ರಗತಿಯಲ್ಲಿದೆ. ದಶಕಗಳಿಂದ ಸುಪ್ರೀಂ ಕೋರ್ಟ್ ನಲ್ಲಿ ಇದ್ದ ಪ್ರಕರಣ ಕಳೆದ ವರ್ಷ ಇತ್ಯರ್ಥ ವಾಗಿತ್ತು.