ಕುತಂತ್ರಿ ಪಾಕ್‌ ಉದ್ಧಟತನ; ದೇಶಕ್ಕಾಗಿ ಪ್ರಾಣಕೊಟ್ಟ ಇಬ್ಬರು ಯೋಧರು

By Suvarna News  |  First Published Sep 5, 2020, 9:05 PM IST

ಪಾಕಿಸ್ತಾನದ ದಿಂದ ಕದನ ವಿರಾಮ ಉಲ್ಲಂಘನೆ/  ಗಡಿಯಲ್ಲಿ ಗುಂಡಿನ ಚಕಮಕಿ/  ಇಬ್ಬರು ಯೋಧರು ಹುತಾತ್ಮ/  ಉತ್ತರ ಕಾಶ್ಮೀರದ ನೌಗಮ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ದಿಂದ ಕದನ ವಿರಾಮ ಉಲ್ಲಂಘನೆ/


ಶ್ರೀನಗರ(ಸೆ. 05) ಕುತಂತ್ರಿ ಪಾಕಿಸ್ತಾನಕ್ಕೆ ಮಾತ್ರ ಬುದ್ಧಿ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕಿಸ್ತಾನ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿದೆ.

ಪಾಕ್ ನೊಂದಿಗಿನ ಸೆಣೆಸಾಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.  ಕಾಶ್ಮೀರದ ನೌಗಮ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು ಇಬ್ಬರು ಯೋಧರಿಗೆ ಗಾಯವಾಗಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

Tap to resize

Latest Videos

undefined

ಇದು ಭಾರತ, ದಾರಿತಪ್ಪಿ ಅಂಡಲೆಯುತ್ತಿದ್ದ ಚೀನಾ ಪ್ರಜೆಗಳ ರಕ್ಷಣೆ ಮಾಡಿದ ಸೇನೆ

ಪೂಂಚ್ ಜಿಲ್ಲೆಯ ಶಹ್ ಪುರ್, ಕಿರ್ನಿ ಮತ್ತು ದೆಗ್ವಾರ್ ವಲಯಗಳಲ್ಲಿ ಗುಂಡಿನ ಮತ್ತು ಶೂಟಿಂಗ್ ದಾಳಿ ಶನಿವಾರ ಬೆಳಗ್ಗೆ ಕಾಲು ಕೆದರಿಕೊಂಡು ಬಂದ ಪಾಕಿಸ್ತಾನ ಕಾರಣವಿಲ್ಲದೆ ಗುಂಡಿನ ದಾಳಿ ನಡೆಸಿದ್ದು ವರದಿಯಾಗಿತ್ತು.

ಇತ್ತ ಲಡಾಕ್ ಗಡಿಯಲ್ಲಿ ಚೀನಾ ತಂಟೆ ಮಾಡುತ್ತಿದ್ದರೆ ಅತ್ತ ಪಾಕಿಸ್ತಾನ ಮತ್ತೆ ಮತ್ತೆ ಕುತಂತ್ರಿ ಬುದ್ಧಿಯ ಪ್ರದರ್ಶನ ಮಾಡುತ್ತಿದೆ. ಭಾರತೀಯ ಸೇನೆ ಸೆಣೆಸಾಟಕ್ಕೆ ಸರ್ವಸನ್ನದ್ಧವಾಗಿದೆ ಎಂದು ರಕ್ಷಣಾ ಇಲಾಖೆ ಈ ಹಿಂದೆಯೇ  ಹೇಳಿತ್ತು. 

 

click me!