ಮೊರ್ಬಿ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಹೆಚ್ಚುವರಿ 10 ಲಕ್ಷ ಘೋಷಿಸಿದ ಸರ್ಕಾರ!

By Suvarna NewsFirst Published Dec 12, 2022, 9:11 PM IST
Highlights

ಮೊರ್ಬಿ ಸೇತುವೆ ದುರಂದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ಘಟನೆ ದೇಶದ ಪ್ರವಾಸಿ ತಾಣಗಳಲ್ಲಿರುವ ಸೇತುವೆಗಳ ಸುರಕ್ಷತೆಯನ್ನು ಪ್ರಶ್ನಿಸಿತ್ತು. ಈ ಘಟನೆಗೆ ಗುಜರಾತ್ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಮೊರ್ಬಿ ದುರಂತದಲ್ಲಿ ಮಡಿದವರ ಪರಿಹಾರ ಮೊತ್ತ ಹೆಚ್ಚಿಸಲಾಗಿದೆ.
 

ಅಹಮ್ಮದಾಬಾದ್(ಡಿ.12): ಮೊರ್ಬಿ ತೂಗು ಸೇತುವೆ ದುರಂತ ಭಾರತವನ್ನೇ ಬೆಚ್ಚಿ ಬೀಳಿಸಿದ ಘಟನೆ. 135 ಮಂದಿ ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಕುರಿತು ಗುಜರಾತ್ ಹೈಕೋರ್ಟ್ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಗುಜರಾತ್ ಸರ್ಕಾರ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪರಿಹಾರ ಮೊತ್ತ ಹೆಚ್ಚಿಸಿದೆ. ಮಡಿದ ಪ್ರತಿ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು ಘಟನೆಯಲ್ಲಿ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ನೀಡುವುದಾಗಿ ಗುಜರಾತ್ ಸರ್ಕಾರ ಘೋಷಿಸಿದೆ. ಈ ಕುರಿತು ಗುಜರಾತ್ ಸರ್ಕಾರ ಹಾಗೂ ಮೊರ್ಬಿ ನಗರ ಪಾಲಿಕೆ ಹೈಕೋರ್ಟ್‌ಗೆ ಅಫಿದವಿತ್ ಸಲ್ಲಿಸಿದೆ. 

ಸ್ವಯಂಪ್ರೇರಿತವಾಗಿ ಮೊರ್ಬಿ ಘಟನೆ ಕುರಿತು ಗುಜರಾತ್ ಹೈಕೋರ್ಟ್ ವಿಚಾರಣೆ ನಡಿಸಿ, ಸರ್ಕಾರವನ್ನು ತರಾಟಗೆ ತೆಗೆದುಕೊಂಡಿತ್ತು. ಇಷ್ಟೇ ಅಲ್ಲ ವಾರದೊಳಗೆ ವರದಿ ನೀಡುವಂತೆ ಸೂಚಿಸಿತ್ತು. ಇದೀಗ ಗುಜರಾತ್ ಸರ್ಕಾರ ಪರಿಹಾರದ ಒಟ್ಟು ಮೊತ್ತವನ್ನು ಹೆಚ್ಚಿಸಿದೆ. ಇಷ್ಟೇ ಅಲ್ಲ ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದೆ.

ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ, ಟಿಎಂಸಿ ನಾಯಕನ ಬಂಧಿಸಿದ ಪೊಲೀಸ್!

ಮೊರ್ಬಿ ಸೇತುವೆ ದುರಂತದ ಬೆನ್ನಲ್ಲೇ ಗುಜರಾತ್ ಸರ್ಕಾರ ಮಡಿದವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಘೋಷಿಸಿತ್ತು. ಇನ್ನು ಕೇಂದ್ರ ಸರ್ಕಾರ ತಲಾ 2 ಲಕ್ಷ ರೂಪಾಯಿ ಘೋಷಿಸಿತ್ತು. ಇನ್ನು ಗಾಯಗೊಂಡವರಿಗೆ ರಾಜ್ಯ ಸರ್ಕಾರ 50,000 ರೂಪಾಯಿ ಹಾಗೂ ಕೇಂದ್ರ ಸರ್ಕಾರ 50,000 ರೂಪಾಯಿ ಘೋಷಿಸಿತ್ತು. ಇದೀಗ ಮಡಿದ ಕುಟುಂಬಕ್ಕೆ ಒಟ್ಟು 10 ರೂಪಾಯಿ ಪರಿಹಾರ ಸಿಗಲಿದೆ. ಇನ್ನು ಗಾಯಗೊಂಡವರಿ 2 ರಿಂದ 3 ಲಕ್ಷ ರೂಪಾಯಿ ಹರಿಹಾರ ಸಿಗಲಿದೆ.

ಟೆಂಡರ್‌ ಇಲ್ಲದೆ ಮೋರ್ಬಿ ಸೇತುವೆ ಗುತ್ತಿಗೆ ಹೇಗೆ: ಅಧಿಕಾರಿಗಳಿಗೆ ಕೋರ್ಚ್‌
135 ಜನರನ್ನು ಬಲಿಪಡೆದ ಇತ್ತೀಚಿನ ಗುಜರಾತ್‌ ಮೋರ್ಬಿ ಸೇತುವೆ ದುರಂತ ಪ್ರಕರಣದ ಬಗ್ಗೆ ಸ್ಥಳೀಯ ಪಾಲಿಕೆ ಅಧಿಕಾರಿಗಳನ್ನು ಗುಜರಾತ್‌ ಹೈಕೋರ್ಚ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿರುವ ಹೈಕೋರ್ಚ್‌ ‘ಸೇತುವೆ ನಿರ್ವಹಣೆಗೆ ಯಾಕೆ ಟೆಂಡರ್‌ ಕರೆದಿಲ್ಲ? ಟೆಂಡರ್‌ ಇಲ್ಲದೇ ಹೇಗೆ ಇಷ್ಟುದೊಡ್ಡ ಕೆಲಸವನ್ನು ಒಬ್ಬರಿಗೆ ನೀಡಿದ್ದೀರಿ. ಗುತ್ತಿಗೆ ಪಡೆದ ಕಂಪನಿಗೆ ಯಾವುದೇ ಷರತ್ತ ವಿಧಿಸಲಾಗಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ಇಷ್ಟುದೊಡ್ಡ ಅನಾಹುತ ಆಗಿದ್ದರೂ ಇನ್ನು ಮುನ್ಸಿಪಲ್‌ ಅನ್ನು ಏಕೆ ಸೂಪರ್‌ಸೀಡ್‌ ಮಾಡಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದೆ.

Morbi Accident: 'ಜಾಸ್ತಿ ಜಾಣತನ ತೋರಿಸ್ಬೇಡಿ..' ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ಛೀಮಾರಿ!

ಮೋರ್ಬಿ ಸೇತುವೆ ಪ್ರವೇಶಕ್ಕೆ ಮಿತಿ ಮೀರಿ 3,165 ಟಿಕೆಟ್‌ ವಿತರಣೆ: ಸರ್ಕಾರ
135 ಜನರನ್ನು ಬಲಿ ಪಡೆದಿದ್ದ ಗುಜರಾತ್‌ನ ಮೋರ್ಬಿ ಸೇತುವೆ ಘಟನೆ ನಡೆದ ದಿನದಂದು ಸೇತುವೆ ನಿರ್ಮಾಣದ ಹೊಣೆ ಹೊತ್ತಿದ್ದ ಒರೆವಾ ಕಂಪನಿ, 3,165 ಟಿಕೆಟ್‌ಗಳನ್ನು ವಿತರಿಸಿತ್ತು ಎಂದು ಸರ್ಕಾರದ ಪರ ವಕೀಲರು ಕೋರ್ಚ್‌ಗೆಹೇಳಿದ್ದಾರೆ. ‘ಸೇತುವೆ ಮರು ನಿರ್ಮಾಣದ ಗುತ್ತಿಗೆ ನೀಡಿದ್ದ ಒರೆವಾ ಕಂಪನಿ, ಸೇತುವೆಯ ಸಾಮರ್ಥ್ಯವನ್ನು ನಿರ್ಣಯಿಸಲಾಗದೆ 3 ಸಾವಿರ ಟಿಕೆಟ್‌ ವಿತರಿಸಿದೆ. ‘ಟಿಕೆಟ್‌ ನೀಡಲು ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಲಾಗಿತ್ತು. ಅವರು ಜನಸಂದಣಿ ನಿರ್ಮಿಸುವಲ್ಲಿ ಯಾವುದೇ ಅನುಭವ ಹೊಂದಿರಲಿಲ್ಲ’ ಎಂದು ಬಂಧಿತ ಒರೆವಾ ಕಂಪನಿ ಸಿಬ್ಬಂದಿಯ ವಿಚಾರಣೆ ವೇಳೆ ಸರ್ಕಾರಿ ವಕೀಲರು ಹೇಳಿದ್ದಾರೆ.

click me!