
ನವದೆಹಲಿ(ಮ.26): ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದ ಕುರಿತಾದ ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆ ಕೋರಿಕೆಯನ್ನು ದೇಶದ ಪ್ರಮುಖ ಮುಸ್ಲಿಂ ಮುಂದಾಳುಗಳು ವಿರೋಧಿಸಿದ್ದಾರೆ.
ಅಯೋಧ್ಯೆ ತೀರ್ಪಿನ ಮರುಪರಿಶೀಲನೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಈ ಪ್ರಮುಖರು, ಸುಪ್ರೀಂ ತೀರ್ಪಿನಲ್ಲಿ ಸೌಹಾರ್ದತೆಯ ಸಂದೇಶವಿದೆ ಎಂದು ಹೇಳಿದ್ದಾರೆ.
5 ಎಕರೆ ಭೂಮಿಯ ಭಿಕ್ಷೆ ಬೇಡ: ಇದು ಒವೈಸಿ ರಿಯಾಕ್ಷನ್!
ಚಿತ್ರ ನಟರಾದ ನಸೀರುದ್ದೀನ್ ಶಾ, ಶಬಾನಾ ಅಜ್ಮಿ, ಉರ್ದು ಕವಿ ಹಸನ್ ಕಮಾಲ್, ಪತ್ರಕರ್ತ ಜಾವೇದ್ ಆನಂದ್ ಹಾಗೂ ಫಿರೋಜ್ ಮಿತಿಬೋರ್’ವಾಲಾ ಸೇರಿದಂತೆ ಹಲವು ಪ್ರಮುಖ ಮುಸ್ಲಿಂ ಮುಂದಾಳುಗಳು ಪುನರ್ ಪರಿಶೀಲನೆ ಅರ್ಜಿ ಸಲ್ಲಿಕೆ ಪ್ರಸ್ತಾವನೆಯನ್ನು ವಿರೋಧಿಸಿದ್ದಾರೆ.
ಅಯೋಧ್ಯೆ ತೀರ್ಪು: ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಚಿಂತನೆ
ಸುಪ್ರೀಂ ತೀರ್ಪು ದಶಕಗಳ ಕಾಲದ ಹಿಂದೂ-ಮುಸ್ಲಿಂ ನಡುವಿನ ವೈಮನಸ್ಸು ತೊಡೆದು ಹಾಕಲು ಸಹಾಯಕಾರಿ ಎಂದಿರುವ ಈ ಪ್ರಮುಖರು, ಎಲ್ಲ ವೈಮನಸ್ಸನ್ನು ಮರೆತು ಸಹಬಾಳ್ವೆಯ ಭವಿಷ್ಯದತ್ತ ಮುನ್ನಡೆಯುವುದು ಅವಶ್ಯ ಎಂದು ಹೇಳಿದ್ದಾರೆ.
ದೇಶದ ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದ ಬಾಬರಿ ಮಸೀದಿ-ಅಯೋಧ್ಯೆ ಭೂವಿವಾದದ ತೀರ್ಪನ್ನು ಸುಪ್ರೀಂಕೋರ್ಟ್ ಕಳೆದ ನ.09ರಂದು ಪ್ರಕಟಿಸಿತ್ತು. ವಿವಾದಿತ ಸ್ಥಳವನ್ನು ರಾಮಲಲ್ಲಾ ಸುಪರ್ದಿಗೆ ನೀಡಿದ್ದ ಸರ್ವೋಚ್ಛ ನ್ಯಾಯಾಲಯ, ಅಯೋಧ್ಯೆ ಹೊರ ವಲಯದಲ್ಲಿ ಬಾಬರಿ ಮಸೀದಿಗಾಗಿ 5 ಎಕರೆ ನೀಡಬೇಕೆಂದು ಆದೇಶಿಸಿತ್ತು.
ಅಯೋಧ್ಯೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲ್ಲ: ಸುನ್ನಿ ವಕ್ಫ್ ಬೋರ್ಡ್ ಸ್ಪಷ್ಟನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ