ಮುಂದಿನ ಪ್ರಧಾನಿ ಯಾರಾಗಬೇಕು? ಮೋದಿಯೇ ನಂಬರ್‌ 1 ಆಯ್ಕೆ!

Published : Aug 17, 2021, 12:52 PM IST
ಮುಂದಿನ ಪ್ರಧಾನಿ ಯಾರಾಗಬೇಕು? ಮೋದಿಯೇ ನಂಬರ್‌ 1 ಆಯ್ಕೆ!

ಸಾರಾಂಶ

* ಲೋಕಸಭಾ ಚುನಾವಣೆಗೆ ಇನ್ನೂ 3 ವರ್ಷ ಬಾಕಿ * ಇಂಡಿಯಾ ಟುಡೇ ಸಮೂಹವು ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಜನರ ಅಭಿಪ್ರಾಯ * ಮುಂದಿನ ಪ್ರಧಾನಿಯಾಗಿ ಮೋದಿಯೇ ಮೊದಲ ಆಯ್ಕೆ

ನವದೆಹಲಿ(ಆ.17): ಲೋಕಸಭಾ ಚುನಾವಣೆಗೆ ಇನ್ನೂ 3 ವರ್ಷ ಬಾಕಿ ಇರುವಾಗಲೇ ಇಂಡಿಯಾ ಟುಡೇ ಸಮೂಹವು ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ‘ಮೂಡ್ ಆಫ್ ದ ನೇಷನ್’ ಹೆಸರಲ್ಲಿ ದೇಶವ್ಯಾಪಿ ಸಮೀಕ್ಷೆ ನಡೆಸಿದೆ.

ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ.24ರಷ್ಟು ಜನರ ಬೆಂಬಲ ಪಡೆಯುವ ಮೂಲಕ ನಂ.1 ಆಗಿ ಹೊರಹೊಮ್ಮಿದ್ದಾರೆ. ಅಚ್ಚರಿ ಎಂದರೆ ಎರಡನೇ ಸ್ಥಾನದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇದ್ದಾರೆ. ಅವರಿಗೆ ಶೇ.11ರಷ್ಟು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಶೇ.10, ದೆಹಲಿ ಸಿಎಂ ಕೇಜ್ರಿವಾಲ್, ಮಮತಾ ತಲಾ ಶೇ.8, ಅಮಿತ್ ಶಾ ಶೇ.7, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾಗೆ ಶೇ.4ರಷ್ಟು ಬೆಂಬಲ ಸಿಕ್ಕಿದೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ