ಪ್ರತಿ ಪಕ್ಷದ ಗದ್ದಲದಿಂದ 107 ಗಂಟೆ ಕಲಾಪದಲ್ಲಿ ನಡೆದಿದ್ದು 18 ಗಂಟೆ ಮಾತ್ರ, 133 ಕೋಟಿ ರೂ ನಷ್ಟ!

By Suvarna NewsFirst Published Jul 31, 2021, 7:09 PM IST
Highlights
  • ಸಂಸತ್ತಿನಲ್ಲಿ ಪ್ರತಿಪಕ್ಷಗಳ ಗದ್ದಲ ಪ್ರತಿಭಟನೆಗೆ ಕಲಾಪ ಬಲಿ
  • ಜುಲೈ 19 ರಿಂದ ಆರಂಭಗೊಂಡಿರುವ ಮಂಗಾರು ಅಧಿವೇಶನ
  • ಇದುವರೆಗೆ 107 ಗಂಟೆಗಳ ಕಲಾಪದಲ್ಲಿ ನಡೆದಿದ್ದು 18 ಗಂಟೆ ಮಾತ್ರ  

ನವದೆಹಲಿ(ಜು.31): ಮಹತ್ವದ ಚರ್ಚೆ, ಮಸೂದೆಗಳ ಅಂಗೀಕಾರ ಸೇರಿದಂತೆ ದೇಶದ ಸಮಸ್ಯೆಗಳಿಗೆ ಧನಿಯಾಗಬೇಕಿದ್ದ ಲೋಕಸಭೆ ಹಾಗೂ ರಾಜ್ಯಸಭೆ ಗದ್ದಲದ, ಪ್ರತಿಭಟನೆಗಳ ಗೂಡಾಗಿ ಪರಿಣಮಿಸಿದೆ. ಮುಂಗಾರು ಅಧಿವೇಶನ ಆರಂಭದಿಂದ ಇಲ್ಲೀವರೆಗೆ ಪ್ರತಿಪಕ್ಷಗಳ ನಡೆಯಲ್ಲಿ ಒಂದಿಂಚು ಬದಲಾವಣೆಯಾಗಿಲ್ಲ. ಒಂದಲ್ಲ ಒಂದು ವಿಚಾರ ಮುಂದಿಟ್ಟು ಕಲಾಪ ಮುಂದೂಡಿದ, ರದ್ದುಮಾಡಿದ ಹೆಗ್ಗಳಿಗೆ ಪ್ರತಿಪಕ್ಷಗಳಿಗೆ ಸಲ್ಲಿಲಿದೆ. ಇದರ ಪರಿಣಾಮ 107 ಗಂಟೆ ಕಲಾಪದಲ್ಲಿ 89 ಗಂಟೆಗಳ ಕಲಾಪ ವ್ಯರ್ಥವಾಗಿದೆ.

ಕಾಗದ ಹರಿದು ಸ್ಪೀಕರ್‌ ಪೀಠದತ್ತ ಎಸೆದ ಕಾಂಗ್ರೆಸ್‌ ಸಂಸದರು!

ಪೆಗಾಸಸ್ ಸ್ಪೈವೇರ್, ಕೃಷಿ ಮಸೂದೆ, ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಮುಂದಿಟ್ಟು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕಲಾಪದಲ್ಲಿ ಪ್ರತಿಭಟನೆ ನಡೆಸಿದೆ. ಎಲ್ಲಾ ವಿಚಾರಗಳ ವಿಸ್ತೃತ ಚರ್ಚೆಗೆ ಸರ್ಕಾರ ತಯಾರಿದೆ ಎಂದರೂ ಪ್ರತಿಪಕ್ಷಗಳು ತಮ್ಮ ವಾದ ಬಿಟ್ಟಿಲ್ಲ. ಹೀಗಾಗಿ ಇದುವರೆಗಿನ ಕಲಾಪ ಉಪಯೋಗಕ್ಕಿಂತ ವ್ಯರ್ಥವಾಗಿದ್ದೇ ಹೆಚ್ಚಾಗಿದೆ.

ಕೊರೋನಾ ಬಗ್ಗೆ ಚರ್ಚೆ: ಮೋದಿ ಕರೆದ ಸಭೆಗೆ ಕಾಂಗ್ರೆಸ್‌, ಅಕಾಲಿ ದಳ ಗೈರು!

ಜುಲೈ 19 ರಿಂದ ಇಲ್ಲೀವರೆಗಿನ 107 ಗಂಟೆಗಳ ಕಲಾಪದಲ್ಲಿ ನಡೆದಿದ್ದು ಕೇವಲ 18 ಗಂಟೆ ಮಾತ್ರ. ಉಳಿದ 89 ಗಂಟೆಗಳು ಪ್ರತಿಭಟನೆ, ಗದ್ದಲದ ಕಾರಣ ಮುಂದೂಡಿದ, ರದ್ದು ಮಾಡಿದ ಘಟನೆಗಳೇ ನಡೆದಿದೆ. ಲೋಕಸಭೆಯ 54 ಗಂಟೆ ಕಲಾಪದಲ್ಲಿ ನಡೆದಿದ್ದು ಕೇವಲ 7 ಗಂಟೆ ಮಾತ್ರ.

ಪೆಗಾಸಸ್‌, ಕೃಷಿ ಮಸೂದೆ ಗದ್ದಲಕ್ಕೆ ಇಡೀ ವಾರದ ಕಲಾಪ ಬಲಿ!

ರಾಜ್ಯಸಭೆಯ ಇಲ್ಲೀವರೆಗಿನ 53 ಗಂಟೆಗಳ ಕಲಾಪ ಬಳಕೆಯಾಗಿದ್ದು ಕೇವಲ 11 ಗಂಟೆ ಮಾತ್ರ. ಕಲಾಪ ವ್ಯರ್ಥವಾಗಿರುವ ಕಾರಣ ಬರೋಬ್ಬರಿ 133 ಕೋಟಿಗೂ ಅಧಿಕ ಮೊತ್ತ ನಷ್ಟವಾಗಿದೆ. 

ಕಾಂಗ್ರೆಸ್‌ ಬಣ್ಣ ಬಯಲು ಮಾಡಿ: ಬಿಜೆಪಿ ಸಂಸದರಿಗೆ ಮೋದಿ ಕರೆ!

ಇಂದು(ಜು.31) ರಾಜ್ಯಸಭೆ ಕಲಾಪನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಪ್ರತಿಭಟನೆ ಗದ್ದಲದ  ನಡುವೆ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ತಿದ್ದುಪಡಿ ಮಸೂದೆ, ಸಹಭಾಗಿತ್ವ ತಿದ್ದುಪಡಿ ಮಸೂದೆ ಸೇರಿದಂತೆ ಕೆಲ ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. 

click me!