ಬಿಸಿಲಿನ ತಾಪಕ್ಕೆ ಬಳಲಿದ್ದ ರಾಷ್ಟ್ರ ರಾಜಧಾನಿಯಲ್ಲಿ ತಂಪೆರದ ಮಳೆರಾಯ!

By Suvarna NewsFirst Published Jul 13, 2021, 5:20 PM IST
Highlights

ದೀರ್ಘ ವಿಳಂಬದ ಬಳಿಕ ದೇಶದ ರಾಜಧಾನಿಗೆ ಕೊನೆಗೂ ಮುಂಗಾರು ಮಳೆ

ದೆಹಲಿಯ ಹಲವೆಡೆ ಬೆಳಿಗ್ಗೆಯಿಂದ ಗುಡುಗು, ಸಿಡಿಲು ಸಹಿತ ಭಾರಿ ಮಳೆ 

ಗುರುಗ್ರಾಮ ಮತ್ತು ಫರಿದಾಬಾದ್‌ನಲ್ಲಿಯೂ ಮಳೆ

ನವದೆಹಲಿ(ಜು.13): ಕಾದ ಕಾವಲಿಯಂತಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಗೆ ಮಳೆರಾಯ ತಂಪೆರೆದಿದ್ದಾನೆ. ಬೆಳಗ್ಗೆ ಹೆಚ್ಚು ಕಡಿಮೆ ಒಂದು ಗಂಟೆ ದೆಹಲಿಯ ಅಕ್ಕಪಕ್ಕದ ಪ್ರದೇಶಗಳಲ್ಲೂ ಮಳೆ ಸುರಿಯಿತು. ಕಳೆದ ಒಂದೂವರೆ ಎರಡು ತಿಂಗಳಿಂದ ಬಿಸಿಲಿನ ತಾಪಮಾನಕ್ಕೆ ದೆಹಲಿಗರು ಹೈರಾಣಾಗಿದ್ದರು. ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟುವ ಜೊತೆಗೆ ಧಗೆ ಕೂಡ ಜಾಸ್ತಿಯಾಗಿತ್ತು. 

ರಾಜ್ಯದ 8 ಜಿಲ್ಲೆಗಳಲ್ಲಿ ವರುಣನ ಆರ್ಭಟ

19 ವರ್ಷಗಳ ಹಿಂದೆ..! 

ಕೊನೆಗೂ ಮುಂಗಾರು ಮಳೆ ದೆಹಲಿ ಪ್ರವೇಶ ಮಾಡಿದೆ. ಈ ಭಾರಿ 16 ದಿನಗಳು ತಡವಾಗಿ ದೆಹಲಿ ಪ್ರವೇಶವಾಗಿದೆ. 19 ವರ್ಷಗಳ ಹಿಂದೆ ಇದೇ ರೀತಿ ತಡವಾಗಿ ಬಂದಿತ್ತು.  ಮುಂಗಾರು ಪ್ರವೇಶ ತಡವಾದರೆ‌ ದೆಹಲಿ ಬಿಸಿಲಿನ ಆಟಾಟೋಪ ಸಹಿಸಿಕೊಳ್ಳುವುದು ಕಷ್ಟ. ಬಿಸಿಲಿನ ಪರಿಣಾಮಗಳು ಊಹಿಸುವುದಕ್ಕೂ ಕಷ್ಟ. ಬಿಸಿಲಿನ ಝಳಕ್ಕೆ ಎಸಿಗಳು ಆರ್ಭಟವೂ ಹೆಚ್ಚು. ಇದರಿಂದ ಪ್ರತಿನಿತ್ಯ ಏಳು ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಕಾಗುತ್ತದೆ.

ತುಂಗಭದ್ರಾ ಜಲಾಶಯಕ್ಕೆ ತಗ್ಗಿದ ಒಳಹರಿವು, ಹೆಚ್ಚಿದ ರೈತರ ಆತಂಕ..!

ಈ ಮಧ್ಯೆ, ಹವಾಮಾನ ಇಲಾಖೆಯ ಕಳಪೆ ಮುನ್ಸೂಚನೆ ಬಗ್ಗೆ ಭಾರೀ ಟೀಕೆ ಕೇಳಿಬಂದಿದೆ. ಅಂತಿಮವಾಗಿ, ದೆಹಲಿಯಲ್ಲಿ ವರುಣನ ಸಿಂಚನವಾದ ಬಳಿಕ ಮುಂಗಾರಿನ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ.

click me!