ಭಾರತದ ಮೊದಲ ಕೊರೋನಾ ಸೋಂಕಿತೆಗೆ ಮತ್ತೆ ಸೋಂಕು, 2020ರಲ್ಲಿ ಚೀನಾದಿಂದ ಬಂದಿದ್ರು!

By Suvarna NewsFirst Published Jul 13, 2021, 4:11 PM IST
Highlights

* ದೇಶದಲ್ಲಿ ಕೊರೋನಾ ಎರಡನೇ ಅಲೆ ಇಳಿಕೆ, ಕೆಲ ರಾಜ್ಯಗಳಲ್ಲಿ ಸೋಂಕು ಮತ್ತೆ ಉಲ್ಭಣ

* ಭಾರತದ ಮೊದಲ ಕೊರೋನಾ ಸೋಂಕಿತೆಗೆ ಮತ್ತೆ ಸೋಂಕು

* ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ವೈದ್ಯಕೀಯ ವಿದ್ಯಾರ್ಥಿನಿ

ತಿರುವನಂತಪುರಂ(ಜು.13): ದೇಶದಲ್ಲಿ ಕೊರೋನಾ ಎರಡನೇ ಅಲೆ ಕಡಿಮೆಯಾಗುತ್ತಿದ್ದು ಪ್ರಕರಣಗಳ ಸಂಖ್ಯೆ ಇಳಿಯತೊಡಗಿದೆ. ಹೀಗಿದ್ದರೂ ಕೇರಳ ಸೇರಿ ಕೆಲ ರಾಜ್ಯಗಳಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಮತ್ತೆ ಹೆಚಚ್ಚುತ್ತಿದದ್ದು, ಆತಂಕ ಸೃಷ್ಟಿಸಿದೆ. ಸದ್ಯ ದೇಶದ ಮೊದಲ ಕೊರೋನಾ ಸೋಂಕಿತೆಗೆ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಹೌದು 2020ರ ಜನವರಿ 30ರಂದು ಚೀನಾದ ವುಹಾನ್‌ನಿಂದ ಭಾರತಕ್ಕೆ ಮರಳಿದ್ದ, ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೆ ಸೋಂಕು ಕಾಣಿಸಿಕೊಂಡಿದೆ. ತ್ರಿಶೂರ್‌ ನಿವಾಸಿಯಾಗಿರುವ ಈ ಯುವತಿಗೆ ಸದ್ಯ ಮನೆಯಲ್ಲೇ ಚಿಕಿತ್ಸೆ ನಿಡಲಾಗುತ್ತಿದೆ.

ದೈನಂದಿನ ಲಸಿಕೆ ನೀಡಿಕೆಯಲ್ಲಿ ಕುಸಿತ!

ತ್ರಿಶೂರ್‌ನ ಮೆಡಿಕಲ್ ಆಫೀಸರ್ ಡಾ. ಕೆ. ಜೆ. ರೀನಾ ಈ ಬಗ್ಗೆ ಮಾಹಿತಿ ನೀಡುತ್ತಾ 'ಈ ಮೆಡಿಕಲ್ ವಿದ್ಯಾರ್ಥಿನಿಗೆ ಮತ್ತೆ ಸೋಂಕು ತಗುಲಿದೆ. ಆಕೆಯ RT-PCR ಟೆಸ್ಟ್‌ ವರದಿ ಪಾಸಿಟಿವ್ ಬಂದಿದ್ದು, ಆಂಟಿಜನ್ ವರದಿ ನೆಗೆಟಿವ್ ಬಂದಿದೆ. ಅಲ್ಲದೇ ಈಕೆಯಲ್ಲಿ ಲಕ್ಷಣಗಳೂ ಕಂಡು ಬಂದಿಲ್ಲ. ಸದ್ಯ ಆಕೆಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ' ಎಂದಿದ್ದಾರೆ.

ಈ ಮಹಿಳೆ ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಳು ಹಾಗೂ ಸೆಮಿಸ್ಟರ್ ಮುಗಿದ ನಂತರ ರಜೆಯ ಮೇಲೆ 2020 ರ ಜನವರಿ 30 ರಂದು ಕೇರಳದಲ್ಲಿರುವ ತನ್ನ ಮನೆಗೆ ಮರಳಿದ್ದಳು. ಆಗಲೇ ಆಕೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

'ಎಚ್ಚರ.. 3ನೇ ಅಲೆ ಸನ್ನಿಹಿತ: ಪ್ರವಾಸ, ಯಾತ್ರೆ, ಧಾರ್ಮಿಕ ಉತ್ಸವ ಮುಂದೂಡಿ!'

ಅಂದು ಈ ವಿದ್ಯಾರ್ಥಿನಿ ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುಮಾರು 3 ವಾರಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಎರಡು ಬಾರಿ ನಡೆದ ಟೆಸ್ಟ್‌ನಲ್ಲಿ ಅವರ ವರದಿ ನೆಗೆಟಿವ್ ಬಂದಿತ್ತು. ಹೀಗಾಗಿ 2020 ಫೆಬ್ರವರಿ 20 ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

ಇನ್ನು ಕೇರಳದಲ್ಲಿ ಸೋಮವಾರ 7,798 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದಾಗಿ 100 ರೋಗಿಗಳು ಸಾವನ್ನಪ್ಪಿದ್ದದ್ದಾರೆ. ಈ ಮೂಲಕ ಸೋಂಕಿನ ಒಟ್ಟು ಪ್ರಕರಣಗಳು 30,73,134 ಕ್ಕೆ ಏರಿದ್ದು, ಮೃತರ ಸಂಖ್ಯೆ14,686 ಕ್ಕೆ ತಲುಪಿದೆ.

click me!