ಇಸ್ರೇಲ್‌ ನೆರವಿನಿಂದ ಮೋದಿ ಎಲೆಕ್ಷನ್‌ ಗೆಲ್ತಾರೆ: ಕಾಂಗ್ರೆಸ್‌ ಆರೋಪ

Published : Feb 17, 2023, 09:27 AM ISTUpdated : Feb 17, 2023, 09:29 AM IST
ಇಸ್ರೇಲ್‌ ನೆರವಿನಿಂದ ಮೋದಿ ಎಲೆಕ್ಷನ್‌ ಗೆಲ್ತಾರೆ: ಕಾಂಗ್ರೆಸ್‌ ಆರೋಪ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ನ ಮಿಲಿಟರಿ ಏಜೆನ್ಸಿಗಳ ನೆರವಿನಿಂದ ಚುನಾವಣೆಗಳನ್ನು ಗೆಲ್ಲುತ್ತಾರೆ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ನ ಮಿಲಿಟರಿ ಏಜೆನ್ಸಿಗಳ ನೆರವಿನಿಂದ ಚುನಾವಣೆಗಳನ್ನು ಗೆಲ್ಲುತ್ತಾರೆ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ಇಸ್ರೇಲ್‌ನ ಪೆಗಾಸಸ್‌ ಗೂಢಚರ್ಯೆ ಉಪಕರಣಗಳನ್ನು ಬಳಸಿದ ಆರೋಪ ಮಾಡಿದ್ದ ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಇನ್ನೊಂದು 'ತನಿಖಾ ವರದಿ'ಯನ್ನು ಪ್ರದರ್ಶಿಸಿ ಕಾಂಗ್ರೆಸ್‌ ಈ ಆರೋಪ ಮಾಡಿದೆ.

ಗುರುವಾರ ಎಐಸಿಸಿ ಕಚೇರಿಯಲ್ಲಿ (AICC office) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರರಾದ ಪವನ್‌ ಖೇರಾ (Pawan Khera)ಹಾಗೂ ಸುಪ್ರಿಯಾ ಶ್ರೀನೇಟ್‌ (Supriya Sreeneth), ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಜೊತೆ ಆಟವಾಡುತ್ತಿದ್ದಾರೆ. ಅವರು ಇಸ್ರೇಲಿ ಏಜೆನ್ಸಿಗಳ ನೆರವು ಪಡೆದು ದೇಶದಲ್ಲಿ ನಡೆಯುವ ಚುನಾವಣೆಗಳ ಮೇಲೆ ಪ್ರಭಾವ ಬೀರಿ ಗೆಲ್ಲುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಪೋಸ್ಟರ್‌ ಮೇಲೆ 40% ಎಂದು ಬರೆದ ಕಾಂಗ್ರೆಸ್‌

ಟೀಮ್‌ ಜಾರ್ಜ್ ಜತೆ ಮೋದಿ ಕೆಲಸ:

ಪ್ರಧಾನಿಯೇ ವಿದೇಶಿ ಮಿಲಿಟರಿ ಏಜೆನ್ಸಿಗಳ ಜೊತೆ ಕೈಜೋಡಿಸಿರುವುದರಿಂದ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನಾವು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟದವರು ತನಿಖೆ ನಡೆಸಿ ಸಿದ್ಧಪಡಿಸಿದ ವರದಿ ಆಧರಿಸಿ ಈ ಆರೋಪ ಮಾಡುತ್ತಿದ್ದೇವೆ. ಮೋದಿ ಸರ್ಕಾರ ಇಸ್ರೇಲ್‌ನ ತಾಲ್‌ ಹನಾನ್‌ (Tal Hanan)ಎಂಬ 50 ವರ್ಷದ ಮಾಜಿ ಮಿಲಿಟರಿ ಅಧಿಕಾರಿ ನಡೆಸುತ್ತಿರುವ ಟೀಮ್‌ ಜಾರ್ಜ್ (Team George)ಜೊತೆ ಸೇರಿ ಕೆಲಸ ಮಾಡುತ್ತಿದೆ. ಜಾರ್ಜ್ ಎಂಬ ಸುಳ್ಳು ಹೆಸರಿನೊಂದಿಗೆ ಆತ ರಹಸ್ಯವಾಗಿ ಕೆಲಸ ಮಾಡುತ್ತಾನೆ. ಆತನ ತಂಡ ಅಮೆರಿಕ (America), ಬ್ರಿಟನ್‌, ಕೆನಡಾ, ಜರ್ಮನಿ, ಸ್ವಿಜರ್‌ಲೆಂಡ್‌, ಮೆಕ್ಸಿಕೋ(Mexico), ಸೆನೆಗಲ್‌, ಭಾರತ ಹಾಗೂ ಯುಎಇನಲ್ಲಿ ನಕಲಿ ಸೋಷಿಯಲ್‌ ಮೀಡಿಯಾ ಪ್ರಚಾರಾಂದೋಲನಗಳನ್ನು ನಡೆಸಿದೆ. 30 ದೇಶಗಳಲ್ಲಿ ಚುನಾವಣೆ ತಿರುಚಿದೆ ಎಂದು ಸುಪ್ರಿಯಾ ಹೇಳಿದರು.

ದಾನಧರ್ಮ ಮಾಡುವ ಕಾಂಗ್ರೆಸ್‌ಗೆ ಮತ ನೀಡಿ: ಡಿ.ಕೆ.ಶಿವಕುಮಾರ್‌

60% ಮೋದಿ ಫಾಲೋವರ್‌ಗಳು ನಕಲಿ:

ಟೀಮ್‌ ಜಾಜ್‌ರ್‍ ಭಾರತದಲ್ಲಿ ಬಿಜೆಪಿಯ ಐಟಿ ಘಟಕದ ರೀತಿಯಲ್ಲೇ ಫೇಸ್‌ಬುಕ್‌(Facebook), ಇನ್‌ಸ್ಟಾಗ್ರಾಂ, ಲಿಂಕ್ಡಿನ್‌, ಜಿಮೇಲ್‌ ಹಾಗೂ ಇನ್ನಿತರ ಸೋಷಿಯಲ್‌ ಮೀಡಿಯಾ ತಾಣಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ನಕಲಿ ಸುದ್ದಿ ಹಾಗೂ ದಾರಿ ತಪ್ಪಿಸುವ ಮಾಹಿತಿಗಳನ್ನು ಹರಡುತ್ತಿದೆ. ಮೋದಿ ಸರ್ಕಾರ ದೊಡ್ಡ ಪ್ರಮಾಣದ ದತ್ತಾಂಶಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಮೋದಿಯವರ ಶೇ.60ರಷ್ಟುಫಾಲೋವರ್‌ಗಳು ನಕಲಿ. ಅದೇ ರೀತಿ, ಟ್ವೀಟರ್‌ನಲ್ಲಿ ಅವರ ಫಾಲೋವರ್‌ಗಳ ಪೈಕಿ 18,000 ನಕಲಿ ಖಾತೆಗಳಿವೆ. ಅವು ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುತ್ತಿವೆ ಎಂದು ಆರೋಪಿಸಿದರು.

ಸುಳ್ಳು ಹರಡುವ ಕಾರ್ಯತಂತ್ರ:

ಇಸ್ರೇಲಿನ ಗುತ್ತಿಗೆದಾರರು ಜಗತ್ತಿನಾದ್ಯಂತ ಹಲವಾರು ಚುನಾವಣೆಗಳ ಮೇಲೆ ಪ್ರಭಾವ ಬೀರಿದ್ದಾರೆ. ಸುಳ್ಳುಗಳನ್ನು ಹರಡುವುದೇ ಅವರ ಪ್ರಮುಖ ತಂತ್ರಗಾರಿಕೆ. ಅವರು ಭಾರತದಲ್ಲೂ ಕಾರ್ಯಾಚರಣೆ ನಡೆಸಿರುವ ಬಗ್ಗೆ ಸಾಕ್ಷ್ಯಗಳು ಲಭಿಸಿವೆ. ಸರ್ಕಾರದ ಒಪ್ಪಿಗೆ ಇಲ್ಲದೆ ಅವರು ಭಾರತದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಬಿಜೆಪಿ ಐಟಿ ಘಟಕದ ರೀತಿಯಲ್ಲೇ ಅವರು ದೇಶದಲ್ಲಿ ಪ್ರೊಪಗಾಂಡಾ ಹಾಗೂ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಸುಪ್ರಿಯಾ ದೂರಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌