ನಾಳೆ ಭಾರತ ತಲುಪಲಿವೆ ಮತ್ತೆ 12 ಚೀತಾ: ಆಫ್ರಿಕಾದಿಂದ ವಿಶೇಷ ವಿಮಾನದಲ್ಲಿ ಆಗಮನ

By Kannadaprabha NewsFirst Published Feb 17, 2023, 8:53 AM IST
Highlights

ಭಾರತಕ್ಕೆ ಮತ್ತೇ ಚೀತಾಗಳನ್ನು ಪರಿಚಯಿಸುವ ಯೋಜನೆಯ ಮೊದಲ ಹಂತದ ಪ್ರಯತ್ನ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೇ 12 ಚೀತಾಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಫೆ.18 ರಂದು ಹೊಸ ಚೀತಾಗಳು ಭಾರತಕ್ಕೆ ಆಗಮಿಸಲಿವೆ. 

ನವದೆಹಲಿ: ಭಾರತಕ್ಕೆ ಮತ್ತೇ ಚೀತಾಗಳನ್ನು ಪರಿಚಯಿಸುವ ಯೋಜನೆಯ ಮೊದಲ ಹಂತದ ಪ್ರಯತ್ನ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೇ 12 ಚೀತಾಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಫೆ.18 ರಂದು ಹೊಸ ಚೀತಾಗಳು ಭಾರತಕ್ಕೆ ಆಗಮಿಸಲಿವೆ. 

ಕಳೆದ ವರ್ಷ ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ, ನಮೀಬಿಯಾದಿಂದ (Namibia) ಕರೆತಂದಿದ್ದ 8 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ಬಿಡುಗಡೆ ಮಾಡಿದ್ದರು. ಈ ಯೋಜನೆಯ ಎರಡನೇ ಹಂತವಾಗಿ ಏಳು ಗಂಡು ಮತ್ತು 5 ಹೆಣ್ಣು ಚೀತಾಗಳನ್ನು ಹೊಂದಿರುವ ಭಾರತೀಯ ವಾಯುಸೇನೆಯ ಸಿ-17 ಯುದ್ದವಿಮಾನವು ದಕ್ಷಿಣ ಆಫ್ರಿಕದಿಂದ ಫೆ.16 ರಂದು ಹೊರಟಿದ್ದು, ಫೆ.18 ರಂದು ಭಾರತವನ್ನು ತಲುಪಲಿದೆ. ಮುಂದಿನ 10 ವರ್ಷಗಳ ಕಾಲ ಪ್ರತಿ ವರ್ಷಕ್ಕೆ 12ರಂತೆ ಚೀತಾಗಳನ್ನು ಭಾರತ ಆಮದು ಮಾಡಿಕೊಂಡು ಅರಣ್ಯಕ್ಕೆ ಬಿಡಲು ಉದ್ದೇಶಿಸಿದೆ.

ಮೋದಿ ಭಾರತಕ್ಕೆ ಚೀತಾ ತಂದಿದ್ದು ಯಾಕೆ? ಕಾಂಗ್ರೆಸ್ ನಾಯಕನ ಉತ್ತರಕ್ಕೆ ಬೆಚ್ಚಿ ಬೆರಗಾದ ಭಾರತ!

ಹೊಸ ಚೀತಾಗಳಿಗಾಗಿ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 10 ಕ್ವಾರೆಂಟೈನ್‌ ಪ್ರದೇಶಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ತರಲಾದ ಚೀತಾಗಳು ಈಗಾಗಲೇ ಭಾರತದ ವಾತಾವರಣಕ್ಕೆ ಹೊಂದಿಕೊಂಡಿದ್ದು, ಅವುಗಳನ್ನು ಅರಣ್ಯದಲ್ಲಿ ಮುಕ್ತ ಜೀವನಕ್ಕೆ ಬಿಡಲಾಗಿದೆ.

ಚಿರತೆ ಹಾವಳಿ ನಡುವೆ ಪ್ರತಿ ವರ್ಷ ಭಾರತಕ್ಕೆ ಬರಲಿದೆ 12 ಚೀತಾ, ದಕ್ಷಿಣ ಆಫ್ರಿಕಾ ಜೊತೆ ಒಪ್ಪಂದ!

click me!