ರಾಹುಲ್‌ಗೆ ಮರಳಿ ಸಂಸತ್‌ ಸದಸ್ಯತ್ವ: ಇಂದು ನಿರ್ಧಾರ, ತಪ್ಪಿದಲ್ಲಿ ಕಾಂಗ್ರೆಸ್‌ ಸುಪ್ರೀಂಗೆ ಮೊರೆ?

Published : Aug 07, 2023, 07:10 AM IST
ರಾಹುಲ್‌ಗೆ ಮರಳಿ ಸಂಸತ್‌ ಸದಸ್ಯತ್ವ: ಇಂದು ನಿರ್ಧಾರ, ತಪ್ಪಿದಲ್ಲಿ  ಕಾಂಗ್ರೆಸ್‌ ಸುಪ್ರೀಂಗೆ ಮೊರೆ?

ಸಾರಾಂಶ

ಮೋದಿ ಉಪನಾಮ ಅವಹೇಳನ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಅವರ ಲೋಕಸಭೆ ಸದಸ್ಯತ್ವವನ್ನು ಮರುಸ್ಥಾಪಿಸುವ ಆದೇಶ ಇಂದೇ ಹೊರಬೀಳುತ್ತದೆಯೇ ಎಂಬ ಕುತೂಹಲ ಮನೆ ಮಾಡಿದೆ.

  • ನಿರ್ಧಾರ ಇನ್ನಷ್ಟು ವಿಳಂಬವಾಗುವುದೇಕೆ?
  •  ಸದಸ್ಯತ್ವ ಮರಳಿಸುವ ಬಗ್ಗೆ ಲೋಕಸಭೆಯ ಸ್ಪೀಕರ್‌ ನಿರ್ಧರಿಸಲು ಕಾಲಮಿತಿ ಇಲ್ಲ
  • ಈ ಹಿಂದೆ ಲಕ್ಷದ್ವೀಪದ ಅನರ್ಹ ಸಂಸದ ಫೈಜಲ್‌ ಕೂಡ ಸದಸ್ಯತ್ವ ಮರಳಿ ಕೇಳಿದ್ದರು
  • ಫೈಜಲ್‌ ಅರ್ಜಿ ಸಲ್ಲಿಸಿದ 2 ತಿಂಗಳ ಬಳಿಕ ಅವರಿಗೆ ಸದಸ್ಯತ್ವ ಮರಳಿ ನೀಡಲಾಗಿತ್ತು
  • ವಿಳಂಬ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋದ ಹಿನ್ನೆಲೆಯಲ್ಲಿ ಸದಸ್ಯತ್ವ ಮರಳಿಸಲಾಗಿತ್ತು
  • ರಾಹುಲ್‌ರ ಸದಸ್ಯತ್ವ ಮರಳಿಸುವ ಬಗ್ಗೆ ನಿರ್ಧಾರ ತ್ವರಿತವಾಗಿ ಕೈಗೊಳ್ಳಲಾಗುವುದೇ?
  • ಅಥವಾ ವಿಳಂಬ ಮಾಡಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ದೊರೆತಿಲ್ಲ


ನವದೆಹಲಿ: ಮೋದಿ ಉಪನಾಮ ಅವಹೇಳನ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಅವರ ಲೋಕಸಭೆ ಸದಸ್ಯತ್ವವನ್ನು ಮರುಸ್ಥಾಪಿಸುವ ಆದೇಶ ಇಂದೇ ಹೊರಬೀಳುತ್ತದೆಯೇ ಎಂಬ ಕುತೂಹಲ ಮನೆ ಮಾಡಿದೆ.

ರಾಹುಲ್‌ ದೋಷಿ ಎಂದು ಸೂರತ್‌ ನ್ಯಾಯಾಲಯ (Surat Court) ತೀರ್ಪು ನೀಡಿದ ಮಾರನೇ ದಿನವೇ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರು ರಾಹುಲ್‌ ಗಾಂಧಿಯ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇದೀಗ ಶಿಕ್ಷೆಗೆ ತಡೆ ನೀಡಿರುವ ಹಿನ್ನೆಲೆಯಲ್ಲಿ ಅನರ್ಹಗೊಳಿಸಿದ ವೇಗದಲ್ಲೇ ಅದನ್ನು ರದ್ದು ಮಾಡಬೇಕು ಎಂದು ಶನಿವಾರವೇ ಕಾಂಗ್ರೆಸ್‌ ಪಕ್ಷ ಒತ್ತಾಯಿಸಿತ್ತು. ಭಾನುವಾರ ಕಲಾಪಕ್ಕೆ ರಜೆ ಇದ್ದ ಕಾರಣ ಯಾವುದೇ ಬೆಳವಣಿಗೆ ನಡೆದಿರಲಿಲ್ಲ. ಸೋಮವಾರ ಪುನಃ ಸಂಸತ್‌ ಕಲಾಪ ಆರಂಭವಾಗಲಿದ್ದು, ಈ ವೇಳೆ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ (Vayanad constituency)ರಾಹುಲ್‌ರನ್ನು ಅನರ್ಹಗೊಳಿಸಿದ ಆದೇಶವನ್ನು ರದ್ದುಪಡಿಸಿದ ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅನರ್ಹತೆ ರದ್ದಾಗಿ ಶೀಘ್ರ ಮತ್ತೆ ರಾಹುಲ್‌ಗೆ ಸಂಸತ್‌ ಸದಸ್ಯತ್ವ

ಆದರೆ, ಈ ಹಿಂದೆ ಲಕ್ಷದ್ವೀಪದ ಸಂಸದ ಪಿ.ಪಿ.ಮಹಮ್ಮದ್‌ ಫೈಜಲ್‌ ಅವರ ಶಿಕ್ಷೆಗೆ ಕೋರ್ಟ್ ತಡೆ ನೀಡಿದ 2 ತಿಂಗಳ ಬಳಿಕ ಅವರ ಅನರ್ಹತೆಯನ್ನು ರದ್ದುಗೊಳಿಸಲಾಗಿತ್ತು. ಅದೂ ಫೈಜಲ್‌ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಅದು ವಿಚಾರಣೆಗೆ ಬರುವ ಮುನ್ನ ಅವರ ಅನರ್ಹತೆ ರದ್ದುಗೊಳಿಸಲಾಗಿತ್ತು. ಹೀಗಾಗಿ ರಾಹುಲ್‌ ವಿಷಯದಲ್ಲೂ ಅಂಥ ವಿಳಂಬವಾಗುವ ಸುಳಿವು ಸಿಕ್ಕರೆ ಸೋಮವಾರವೇ ಮತ್ತೆ ಸುಪ್ರೀಂಕೋರ್ಟ್ (Supreme court) ಮೆಟ್ಟಿಲೇರಲು ಕಾಂಗ್ರೆಸ್‌ ನಾಯಕರು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಮಂಗಳವಾರದಿಂದ ಲೋಕಸಭೆಯಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ವಿರುದ್ಧ ಚರ್ಚೆ ಆರಂಭವಾಗಲಿದ್ದು, ಆ.10ರಂದು ಮೋದಿ ಉತ್ತರ ನೀಡಲಿದ್ದಾರೆ. ಹೀಗಾಗಿ ಅಲ್ಲಿಯವರೆಗೂ ರಾಹುಲ್‌ ಅನರ್ಹತೆ (Rahul disqualification) ವಿಷಯವನ್ನು ಮುಂದೂಡಲಾಗುವುದೋ ಅಥವಾ ಸೋಮವಾರವೇ ಈ ಕುರಿತು ಆದೇಶ ಹೊರಡಿಸಲಾಗುವುದೋ ಎಂಬ ಕುತೂಹಲ ಇದೀಗ ಕಾಡಿದೆ.

Breaking: ಮೋದಿ ಸರ್‌ನೇಮ್‌ ಕೇಸ್‌: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌; ಜೈಲು ಶಿಕ್ಷೆ, ಅನರ್ಹತೆಗೆ ಸುಪ್ರೀಂಕೋರ್ಟ್‌ ತಡೆ

ಸಂಸದ ಸ್ಥಾನದಿಂದ ಅನರ್ಹ ಆಗಿದ್ದೇಕೆ?

2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್‌ ಗಾಂಧಿ ಕೋಲಾರದಲ್ಲಿ (Rahul Kolar Speech) ಭಾಷಣ ಮಾಡುವಾಗ ಮೋದಿ ಎಂಬ ಸರ್‌ನೇಮ್‌ ಇರುವವರೆಲ್ಲ ಕಳ್ಳರೇ ಏಕಾಗಿರುತ್ತಾರೆ ಎಂದು ಪ್ರಶ್ನಿಸಿದ್ದರು. ಅದರ ವಿರುದ್ಧ ಗುಜರಾತ್‌ನ ಮಾಜಿ ಶಾಸಕ ಪೂರ್ಣೇಶ್‌ ಮೋದಿ ಮಾನನಷ್ಟ ಕೇಸು ಹೂಡಿದ್ದರು. ಆ ಪ್ರಕರಣದಲ್ಲಿ ರಾಹುಲ್‌ಗೆ 2 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಸಂಸತ್‌ ಸದಸ್ಯತ್ವ ರದ್ದುಗೊಂಡಿದೆ.

2 ವರ್ಷಗಳ ಜೈಲು ಶಿಕ್ಷೆ:

ಮೋದಿ ಎಂಬ ಸರ್‌ನೇಮ್‌ (Modi surname) ಹೊಂದಿರುವವರೆಲ್ಲ ಕಳ್ಳರೇ ಯಾಕಾಗಿರುತ್ತಾರೆ’ ಎಂದು 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ರಾರ‍ಯಲಿ ವೇಳೆ ರಾಹುಲ್‌ ಪ್ರಶ್ನಿಸಿದ್ದರು. ಇದು ಮೋದಿ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಗುಜರಾತ್‌ನ ಮಾಜಿ ಶಾಸಕ, ಬಿಜೆಪಿಯ ಪೂರ್ಣೇಶ್‌ ಮೋದಿ ಕ್ರಿಮಿನಲ್‌ ಮಾನನಷ್ಟ ಕೇಸು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಕಳೆದ ಮಾ.23ರಂದು ರಾಹುಲ್‌ರನ್ನು ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ಶಿಕ್ಷೆ ಜಾರಿಗೆ ತಡೆ ನೀಡಿತ್ತು.

ಬಳಿಕ ರಾಹುಲ್‌ ಗಾಂಧಿ ಅವರು ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ ಅಲ್ಲಿ ಸೋಲಾಗಿತ್ತು. ಬಳಿಕ ರಾಹುಲ್‌ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿಗೆ ಗರಿಷ್ಠ ಶಿಕ್ಷೆಯನ್ನೇ ಏಕೆ ವಿಧಿಸಲಾಗಿದೆ ಎಂಬುದಕ್ಕೆ ವಿಚಾರಣಾ ಕೋರ್ಟ್‌ನ ಜಡ್ಜ್‌ ಕಾರಣ ನೀಡಿಲ್ಲ ಎಂದು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಶಿಕ್ಷೆಗೆ ತಡೆ ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ