ಒಂದು ಕಾಲದ ನಕ್ಸಲ್ ಪ್ರತಿಪಾದಕ ಕ್ರಾಂತಿ ಕವಿ ಗದ್ದರ್‌ ಅನಾರೋಗ್ಯದಿಂದ ನಿಧನ

By Kannadaprabha NewsFirst Published Aug 7, 2023, 6:31 AM IST
Highlights

80ರ ದಶಕದಲ್ಲಿ ತಮ್ಮ ಕ್ರಾಂತಿಕಾರಿ ಪದ್ಯ, ಗಾಯನದ ಮೂಲಕ ಭಾರೀ ಸುದ್ದಿ ಮಾಡಿದ್ದ, ಬಳಿಕ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಪರವೂ ಹೋರಾಡಿದ್ದ ಗುಮ್ಮಡಿ ವಿಠ್ಠಲ್‌ ರಾವ್‌ ಅಲಿಯಾಸ್‌ ಗದ್ದರ್‌ (77) ಅನಾರೋಗ್ಯದಿಂದ ಭಾನುವಾರ ನಿಧನರಾದರು.

ಹೈದರಾಬಾದ್‌: 80ರ ದಶಕದಲ್ಲಿ ತಮ್ಮ ಕ್ರಾಂತಿಕಾರಿ ಪದ್ಯ, ಗಾಯನದ ಮೂಲಕ ಭಾರೀ ಸುದ್ದಿ ಮಾಡಿದ್ದ, ಬಳಿಕ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಪರವೂ ಹೋರಾಡಿದ್ದ ಗುಮ್ಮಡಿ ವಿಠ್ಠಲ್‌ ರಾವ್‌ ಅಲಿಯಾಸ್‌ ಗದ್ದರ್‌ (77) ಅನಾರೋಗ್ಯದಿಂದ ಭಾನುವಾರ ನಿಧನರಾದರು.

ಗದ್ದರ್‌ ಎಂದೇ ಕರೆಯಲ್ಪಡುತ್ತಿದ್ದ ಗಾಯಕ ವಿಠ್ಠಲ್‌ ರಾವ್‌ ವಯೋಸಹಜ ಶ್ವಾಸಕೋಶ ಮತ್ತು ಮೂತ್ರ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನಡುವೆ ತೀವ್ರ ಹೃದ್ರೋಗ ಸಮಸ್ಯೆಗೆ ತುತ್ತಾಗಿ ಜು.20ರಂದು ಇಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆ.3ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರ ಆರೋಗ್ಯ ಸಮಸ್ಯೆ ಮತ್ತೆ ಉಲ್ಬಣಗೊಂಡು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಗದ್ದರ್‌ ಸಾವಿಗೆ ಚಂದ್ರಬಾಬು ನಾಯ್ಡು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸಚಿವ ಕಿಶನ್‌ ರೆಡ್ಡಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Latest Videos

1949ರಲ್ಲಿ ಮೆದಕ್‌ ಜಿಲ್ಲೆಯ ತೂಪ್ರಾನ್‌ ಎಂಬಲ್ಲಿ ಜನಿಸಿದ್ದ ವಿಠ್ಠಲ್‌ ರಾವ್‌, 80ರ ದಶಕದಲ್ಲಿ ಸಿಪಿಐ (ಎಂ-ಎಲ್‌)ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಸಂಘಟನೆಯಲ್ಲಿ ಸಾಂಸ್ಕೃತಿಕ ವಿಭಾಗದ ಹೊಣೆ ಹೊತ್ತು ಭೂಗತರಾಗಿಯೇ ಕಾರ್ಯನಿರ್ವಹಿಸುತ್ತಿದ್ದರು. ವಿವಿಧ ಸೂಕ್ಷ್ಮ ಮತ್ತು ಬಂಡಾಯದ ವಿಷಯಗಳನ್ನು ಜಾನಪದ ಹಾಡುಗಳ ಮೂಲಕ ಹಾಡುತ್ತಿದ್ದ ಗದ್ದರ್‌ ತೆಲಂಗಾಣದಲ್ಲಿ ಕ್ರಾಂತಿಕಾರಿ ಅಲೆಯನ್ನು ಮೂಡಿಸಿದ್ದರು. ಅಲ್ಲದೇ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಹೋರಾಟಗಾರರನ್ನು ಬಡಿದೆಬ್ಬಿಸಿದ್ದರು.

ನಕ್ಸ'ಲ್ ಪ್ರತಿಪಾದಕ ಗದ್ದರ್ ರಾಜಕೀಯಕ್ಕೆ !

ಗದ್ದರ್‌ ಹೆಸರಿನ ಹಿನ್ನೆಲೆ:

ಸ್ವಾತಂತ್ರ್ಯ ಪೂರ್ವದಲ್ಲಿ ಪಂಜಾಬ್‌ನಲ್ಲಿ ಅಸ್ತಿತ್ವದಲ್ಲಿದ್ದ ಗದ್ದರ್‌ ಪಕ್ಷ, ಪಂಜಾಬ್‌ ಮೇಲೆ ಬ್ರಿಟಿಷ್‌ ಆಡಳಿತವನ್ನು ಬಲವಾಗಿ ವಿರೋಧಿಸಿತ್ತು. ಆ ಪಕ್ಷದ ಮೇಲಿನ ಗೌರವದಿಂದಾಗಿ ವಿಠ್ಠಲ್‌ ರಾವ್‌ ತಮ್ಮ ಹೆಸರನ್ನು ಗದ್ದರ್‌ ಎಂದು ಬದಲಿಸಿಕೊಂಡಿದ್ದರು.

ಬಸವ ಶ್ರೀ ಪ್ರಶಸ್ತಿ:

2003ನೇ ಸಾಲಿನಲ್ಲಿ ಚಿತ್ರದುರ್ಗದ ಮುರುಘಾಮಠವು ಬಸವ ಶ್ರೀ ಪ್ರಶಸ್ತಿಯನ್ನು ಗದ್ದರ್‌ಗೆ ನೀಡಿ ಗೌರವಿಸಿತ್ತು.

click me!