ಪ್ರತಿ ವರ್ಷ ಪ್ರತಿ ರೈತನಿಗೆ 50 ಸಾವಿರ, ಇದುವೇ ಮೋದಿ ಗ್ಯಾರಂಟಿ: ಕಾಂಗ್ರೆಸ್‌ ಗ್ಯಾರಂಟಿಗೆ ಪ್ರಧಾನಿ ಮೋದಿ ಟಾಂಗ್‌

By Kannadaprabha News  |  First Published Jul 2, 2023, 1:34 PM IST

2014ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಪಿಎಂ ಕಿಸಾನ್‌ ಯೋಜನೆ, ಎಂಎಸ್‌ಪಿ, ರಸಗೊಬ್ಬರ ಸಬ್ಸಿಡಿಯಂತಹ ರೈತಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಪ್ರತಿವರ್ಷ ರೈತರ ಕಲ್ಯಾಣ ಮತ್ತು ಕೃಷಿಗಾಗಿ 6.5 ಲಕ್ಷ ರೂ. ವ್ಯಯಿಸಲಾಗುತ್ತಿದ್ದು, ಯಾವುದಾದರೊಂದು ರೂಪದಲ್ಲಿ ರೈತನಿಗೆ ಪ್ರತಿವರ್ಷ 50 ಸಾವಿರ ರೂ ನೀಡಲಾಗುತ್ತಿದೆ. ಇದು ಮೋದಿ ಗ್ಯಾರಂಟಿ ಎಂದು ಉಚಿತ ಗ್ಯಾರಂಟಿ ಅಸ್ತ್ರ ಪ್ರಯೋಗಿಸುತ್ತಿರುವ ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.


ನವದೆಹಲಿ (ಜುಲೈ 2, 2023): ಕೇಂದ್ರ ಸರ್ಕಾರವು ರೈತರ ಕಲ್ಯಾಣ ಮತ್ತು ಕೃಷಿ ಕ್ಷೇತ್ರಕ್ಕಾಗಿ ಪ್ರತಿವರ್ಷ 6.5 ಲಕ್ಷ ಕೋಟಿ ರೂಗಳನ್ನು ಖರ್ಚು ಮಾಡುತ್ತಿದೆ. ಅಂದರೆ ಪ್ರತಿ ವರ್ಷ ಯಾವುದಾದರೂ ವಿವಿಧ ಯೋಜನೆಗಳ ಮೂಲಕ ಪ್ರತಿ ರೈತನಿಗೆ ಬಿಜೆಪಿ ಸರ್ಕಾರದಿಂದ 50 ಸಾವಿರ ರೂ. ನೀಡಲಾಗುತ್ತಿದೆ. ಇದುವೇ ಮೋದಿ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿ ನಡೆದ ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ರಸಗೊಬ್ಬರ ಸಬ್ಸಿಡಿಗಾಗಿ 10 ಲಕ್ಷ ಕೋಟಿ ರೂ. ವಿನಿಯೋಗಿಸಲಾಗಿದೆ. ಎಂಎಸ್‌ಪಿಯಲ್ಲಿ ಕಳೆದ 9 ವರ್ಷಗಳಲ್ಲಿ 15 ಲಕ್ಷ ಕೋಟಿ ರೂ. ನೀಡಿ ರೈತರ ಉತ್ಪನ್ನಗಳನ್ನು ಖರೀದಿಸಲಾಗಿದೆ.

Tap to resize

Latest Videos

ಇದನ್ನು ಓದಿ: ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ

2014ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಪಿಎಂ ಕಿಸಾನ್‌ ಯೋಜನೆ, ಎಂಎಸ್‌ಪಿ, ರಸಗೊಬ್ಬರ ಸಬ್ಸಿಡಿಯಂತಹ ರೈತಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಮೂಲಕ ಪ್ರತಿವರ್ಷ ರೈತರ ಕಲ್ಯಾಣ ಮತ್ತು ಕೃಷಿಗಾಗಿ 6.5 ಲಕ್ಷ ರೂ. ವ್ಯಯಿಸಲಾಗುತ್ತಿದ್ದು, ಯಾವುದಾದರೊಂದು ರೂಪದಲ್ಲಿ ರೈತನಿಗೆ ಪ್ರತಿವರ್ಷ 50 ಸಾವಿರ ರೂ ನೀಡಲಾಗುತ್ತಿದೆ. ಇದು ಮೋದಿ ಗ್ಯಾರಂಟಿ’ ಎಂದು ಉಚಿತ ಗ್ಯಾರಂಟಿ ಅಸ್ತ್ರ ಪ್ರಯೋಗಿಸುತ್ತಿರುವ ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು. ಅಲ್ಲದೇ ‘ಕಳೆದ 4 ವರ್ಷಗಳಲ್ಲಿ ಪಿಎಂ ಕಿಸಾನ್‌ ಯೋಜನೆಯಡಿ ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ 2.5 ಲಕ್ಷ ಕೋಟಿ ರೂ. ಜಮೆ ಮಾಡಲಾಗಿದೆ’ ಎಂದರು.

ಬ್ಯಾಂಕ್‌ಗಳಿಗೆ 1 ಲಕ್ಷ ಕೋಟಿ ಲಾಭ; 10 ವರ್ಷಗಳಲ್ಲಿ 3 ಪಟ್ಟು ಏರಿಕೆ: ಸಚಿವೆ ನಿರ್ಮಲಾ
ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಸರ್ಕಾರಿ ಬ್ಯಾಂಕುಗಳ ಲಾಭವು ತ್ರಿಗುಣಗೊಂಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ. ಸರ್ಕಾರಿ ಬ್ಯಾಂಕುಗಳ ಲಾಭವು 2014ರಲ್ಲಿ 36,270 ಕೋಟಿ ದಾಖಲಾಗಿತ್ತು. ಅದೇ ಲಾಭಾಂಶವು 2023ರಲ್ಲಿ 1.04 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಅವರು ಹೇಳಿದರು. 

ಇದನ್ನೂ ಓದಿ: 2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್‌

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘2014ರಿಂದಾಚೆಗೆ ಸಮಸ್ಯೆಗಳ ಆಗರವಾಗಿದ್ದ ಬ್ಯಾಂಕುಗಳು, ನರೇಂದ್ರ ಮೋದಿ ಅವರ 4 ಆರ್‌ (ಸಮಸ್ಯೆ ಪತ್ತೆ, ಆಸರೆ, ಪರಿಹಾರ, ಪುನರಚನೆ) ಕ್ರಮಗಳಿಂದಾಗಿ ಲಾಭದ ಮೇಲ್ಮೆಟ್ಟಿಲು ಹತ್ತಿದೆ’ ಎಂದು ಹೇಳಿದರು.

ಇದನ್ನೂ ಓದಿ: ಭಾರತಕ್ಕೆ ವಾಪಸಾದ ಪ್ರಧಾನಿ ಮೋದಿ: ಈಜಿಪ್ಟ್‌ ಪ್ರವಾಸದಲ್ಲಿ 4 ಪ್ರಮುಖ ಒಪ್ಪಂದಗಳಿಗೆ ಸಹಿ; ಹೈಲೈಟ್ಸ್‌ ಹೀಗಿದೆ..

click me!