ಗುಜರಾತ್‌ನ ಗಿರ್ ಅರಣ್ಯ ವ್ಯಾಪ್ತಿಯಲ್ಲಿ ಬರುವ ಸೋಮನಾಥ್ ಜಿಲ್ಲೆಯಲ್ಲಿ ಸಿಂಹವೊಂದು ಹಸುವಿನ ಮೇಲೆ ದಾಳಿ ಮಾಡಿದ್ದು, ಪ್ರಾಣ ಉಳಿಸಿಕೊಳ್ಳಲು ಹಸು ಸಿಂಹದೊಂದಿಗೆ ಸೆಣೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಿರ್: ಗುಜರಾತ್‌ನ ಗಿರ್ ಅರಣ್ಯ ವ್ಯಾಪ್ತಿಯಲ್ಲಿ ಬರುವ ಸೋಮನಾಥ್ ಜಿಲ್ಲೆಯಲ್ಲಿ ಸಿಂಹವೊಂದು ಹಸುವಿನ ಮೇಲೆ ದಾಳಿ ಮಾಡಿದ್ದು, ಪ್ರಾಣ ಉಳಿಸಿಕೊಳ್ಳಲು ಹಸು ಸಿಂಹದೊಂದಿಗೆ ಸೆಣೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಕಾಡಂಚಿನ ಗ್ರಾಮಗಳಿಗೆ ಕಾಡುಪ್ರಾಣಿಗಳಾದ ಚಿರತೆ ಹುಲಿ, ಸಿಂಹಗಳು ದಾಳಿ ಮಾಡಿ ಗ್ರಾಮದ ಜನರ ಸಾಕುಪ್ರಾಣಿಗಳನ್ನು ಹೊತ್ತೊಯ್ದ ಸುದ್ದಿಯನ್ನು ನೀವು ಆಗಾಗ ಕೇಳಿರುತ್ತೀರಿ. ಆದರೆ ಇಲ್ಲಿ ಹೊಲದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ರೈತ ಜೊತೆಗಿರುವಾಗಲೇ ಸಿಂಹ ದಾಳಿ ಮಾಡಿದೆ. ಈ ವೇಳೆ ರೈತ ಸಿಂಹವನ್ನು ಓಡಿಸಿ ತನ್ನ ಹಸುವನ್ನು ರಕ್ಷಿಸಿಕೊಳ್ಳಲು ಏಕಾಂಗಿಯಾಗಿ ಪ್ರಯತ್ನಿಸುತ್ತಿದ್ದಾನೆ. ಕೊನೆಗೂ ರೈತ ದೊಣ್ಣೆಯೊಂದನ್ನು ಹಿಡಿದು ಬಂದಾಗ ಸಿಂಹ ಅಲ್ಲಿಂದ ಎಸ್ಕೇಪ್ ಆಗಿದ್ದು, ಹಸುವಿಗೆ ಗಾಯಗಳಾಗಿದೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಈ ವೀಡಿಯೋವನ್ನು ಗುಜರಾತ್‌ನ (Gujarat) ಜುನಾಗಢ್‌ನ (Junagarh) ಕೆಶೋಡ್‌ನ ಕಾರ್ಪೊರೇಟರ್ ವಿವೇಕ್ ಕೊಟಾಡಿಯಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿವರು ವಿವರದಂತೆ ಈ ಘಟನೆ ಗಿರ್ ಸೋಮನಾಥ್ ಜಿಲ್ಲೆಯ ಅಲಿದರ್ (Alidar) ಗ್ರಾಮದಲ್ಲಿ ನಡೆದಿದ್ದು, ಕಿರಿತ್ ಸಿಂಗ್ ಚೌಹಾಣ್ ಎಂಬ ರೈತ, ಸಿಂಹದ ಬಾಯಯಿಂದ ಹಸುವನ್ನು ಬಿಡಿಸಿ ಸಿಂಹವನ್ನು ದೂರ ಓಡಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆ ರೈತನಿಗೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ಘಟನೆ ನಡೆದ ಸ್ಥಳದಲ್ಲೇ ಸಾಗುತ್ತಿದ್ದ ವಾಹನ ಸವಾರರೊಬ್ಬರು ವಾಹನದೊಳಗಿನಿಂದ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಸಿಂಹದ ದಾಳಿಯಿಂದ ಕಂದನ ರಕ್ಷಿಸಿದ ಎಮ್ಮೆ... ವಿಡಿಯೋ ವೈರಲ್
ಸಿಂಹ (Lion) ತನ್ನ ಹಸುವಿನ ಮೇಲೆರಗಿದ್ದನ್ನು ಗಮನಿಸಿದ ರೈತ (Farmer) ಕೋಲಿಗಾಗಿ ಹುಡುಕಾಡಿದ್ದು, ಕೋಲು ಕೈಗೆ ಸಿಗುತ್ತಿದ್ದಂತೆ ಸೀದಾ ಹೋಗಿ ಸಿಂಹವನ್ನು ದೂರ ಓಡಿಸಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಹಸುವಿನ ಕುತ್ತಿಗೆಯಲ್ಲಿ ಕಚ್ಚಿ ಹಿಡಿದು ಸಿಂಹ ನೇತಾಡುತ್ತಿದ್ದರೆ, ಹಸು ಸಿಂಹದ ಬಾಯಿಯಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿದೆ. ಹೀಗೆ ಎರಡು ಸೆಣೆಸಾಡುತ್ತಾ ರಸ್ತೆಯ ಅಂಚಿಗೆ ಬಂದಿದ್ದು, ಈ ವೇಳೆ ಅದೇ ರಸ್ತೆಯಲ್ಲಿ ಬಂದ ವಾಹನ ಸವಾರರೊಬ್ಬರು ಈ ವೀಡಿಯೋ ಸೆರೆ ಹಿಡಿದಿದ್ದಾರೆ.
ಗಿರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಿಂಹಗಳು (Lions) ವ್ಯಾಪಕವಾಗಿದ್ದು, ರೈತರ ಹೊಲ ಗದ್ದೆಗಳಲ್ಲಿ ಇವು ವಿಶ್ರಾಂತಿ ಪಡೆಯುತ್ತಾ ಮಲಗಿರುವ ವೀಡಿಯೋಗಳು ಈ ಹಿಂದೆಯೂ ಸಾಕಷ್ಟು ವೈರಲ್ ಆಗಿದ್ದವು, ಇಲ್ಲಿ ಸಿಂಹಗಳು ಸಾಮಾನ್ಯವಾಗಿರುವುದರಿಂದ ಇಲ್ಲಿನ ಜನರು ಕೂಡ ಸಿಂಹಗಳ ಬಗ್ಗೆ ಸಾಮಾನ್ಯ ಎಂಬಂತೆ ವರ್ತಿಸುತ್ತಾರೆ. ಕೆಲ ದಿನಗಳ ಹಿಂದೆ ಗಿರ್ ಅರಣ್ಯ ವ್ಯಾಪ್ತಿಯಲ್ಲಿ ಬರುವ ಹೊಲದಲ್ಲಿ ಸಿಂಹಗಳೆರಡು ಇರುವಾಗಲೇ ರೈತನೋರ್ವ ಮೊಬೈಲ್ ಒತ್ತಿಕೊಂಡು ಕುಳಿತಿರುವ ವೀಡಿಯೋ ವೈರಲ್ ಆಗಿತ್ತು. ಮೊಬೈಲ್ ಒಳಗೆ ನುಗ್ಗಿದರೆ ಸಿಂಹ ಬಂದರೂ ಗೊತ್ತಿಲ್ಲ ಎಂದು ಕೆಲವರು ಈ ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದರು. ಆದರೆ ಈ ಇದು ಅಲ್ಲಿ ಸಾಮಾನ್ಯ. ಸಿಂಹಗಳು ಸ್ಥಳೀಯರಿಗೆ ಏನು ಮಾಡುವುದಿಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದರು.
ಅಯ್ಯೋ ಕಾಪಾಡಿ... ಪಾರ್ಟಿಗೆ ಬಂದ ಸಿಂಹಿಣಿ: ಮರವೇರಿದ ಅತಿಥಿ video viral
ગીર સોમનાથ જિલ્લાના આલીદર ગામે સિંહણ દ્વારા ગાય ઉપર હુમલો કરેલ ત્યારે ખેડૂતે કિરીટસિંહ ચૌહાણ પોતાની ગાયને એક ખમીરવંતો પ્રયાસ કરેલ અને સફળતા મળેલ.
ખુબ ખુબ સલામ pic.twitter.com/lDYGub9bfZ