ಮೋದಿ ಪ್ರಧಾನಿಯಾದ ಮೊದಲ ದಿನವೇ ರೈತರ ಖಾತೆಗೆ 20,000 ಕೋಟಿ ರೂ ಹಣ ಜಮೆ!

By Chethan KumarFirst Published Jun 10, 2024, 12:01 PM IST
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯಾರಂಭಗೊಂಡಿದೆ. 3ನೇ ಬಾರಿಗೆ ಪ್ರಧಾನಿಯಾಗಿ ಕಚೇರಿಗೆ ಆಗಮಿಸಿ ಮೊದಲ ನಿರ್ಧಾರದಲ್ಲೇ ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. 
 

ನವದೆಹಲಿ(ಜೂ.10) ಪ್ರಧಾನಿ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಕೆಲಸ ಆರಂಭಿಸಿದ್ದಾರೆ. ಭಾನುವಾರ(ಜೂ.09) ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಇಂದು ಪ್ರಧಾನಿ ಕಚೇರಿಗೆ ಆಗಮಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. 3ನೇ ಬಾರಿಗೆ ಪ್ರಧಾನಿಯಾಗಿ ಕಚೇರಿಗೆ ಆಗಮಿಸಿದ ಬೆನ್ನಲ್ಲೇ ಮೋದಿ ರೈತರ ಖಾತೆಗೆ ಬರೋಬ್ಬರಿ 20,000 ಕೋಟಿ ರೂಪಾಯಿ ಜಮೆ ಮಾಡಿದೆ. ಕಿಸಾನ್ ನಿಧಿ ಸಮ್ಮಾನ್ 17ನೇ ಕಂತನ್ನು ಮೋದಿ ಬಿಡುಗಡೆ ಮಾಡಿದ್ದಾರೆ. ಬರೋಬ್ಬರಿ 9.3 ಕೋಟಿ ರೈತರ ಖಾತೆಗೆ 20 ಸಾವಿರ ಕೋಟಿ ರೂಪಾಯಿ ಜಮೆ ಮಾಡಿದ್ದಾರೆ.

3ನೇ ಅವಧಿಯ ಮೊದಲ ದಿನವೇ ರೈತರಿಗೆ ಬಂಪರ್ ಗಿಫ್ಟ್ ಘೋಷಿಸಿದ ಪ್ರಧಾನಿ ಮೋದಿ ತಮ್ಮ ಸರ್ಕಾರ ರೈತರ ಏಳಿಗೆ ಹಾಗೂ ಬೆಂಬಲಕ್ಕೆ ಸದಾ ನಿಲ್ಲಲಿದೆ ಅನ್ನೋ ಸಂದೇಶ ಸಾರಿದ್ದಾರೆ. ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ರೈತರ ಕಲ್ಯಾಣಕ್ಕಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ರೈತರಗೆ ಹಣ ಬಿಡುಗಡೆ ಮಾಡಿ ಮೋದಿ ಹೇಳಿದ್ದಾರೆ.

Latest Videos

ಮೊದಲ ಸಂಪುಟ ಸಭೆಯಲ್ಲಿಯೇ ಬಂಪರ್ ಘೋಷಣೆ ಮಾಡ್ತಾರಾ ಪ್ರಧಾನಿಮೋದಿ?

ಪ್ರಧಾನಿ ನರೇಂದ್ರ ಮೋದಿ ರೈತರಿಗೆ ನೀಡುವ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ಬಿಡುಗಡೆ ಮಾಡಲಾಗಿದೆ. ಮೋದಿ ಆರಂಭಿಸಿದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬಡ ರೈತರು, ಸಣ್ಣ ಸಾಗುವಳಿದಾರರಿಗೆ ಕೇಂದ್ರ  ಸರ್ಕಾರ ವಾರ್ಷಿಕ 6,000 ರೂಪಾಯಿ ನೀಡಲಾಗುತ್ತದೆ. ಇದರ 17ನೇ ಕಂತವನ್ನು ಇದೀಗ ಬಿಡುಗಡೆ ಮಾಡಲಾಗಿದೆ. 

ಕಚೇರಿಗೆ ಆಗಮಿಸಿದ ಮೋದಿಗೆ ಸಿಬ್ಬಂದಿಗಳು ಅದ್ಧೂರಿ ಸ್ವಾಗತ ನೀಡಿದ್ದಾರೆ. ಚಪ್ಪಾಳೆ ತಟ್ಟಿ ಮೋದಿಯನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಮೋದಲ ದಿನವೇ ಮೋದಿ ಚುರುಕಿನ ಕೆಲಸಗಳು ಆರಂಭಗೊಂಡಿದೆ. ಭಾನುವಾರ ಪ್ರಧಾನಿ ಮೋದಿ ಹಾಗೂ 72 ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಎನ್‌ಡಿಎ ಸರ್ಕಾರ ರಚನೆಗೊಂಡಿತ್ತು.

ಇಂದು ಸಂಜೆ ಎನ್‌ಡಿಎ ಸರ್ಕಾರದ ಮೊದಲ ಸಂಪುಟ ಸಭೆ ನಡೆಯಲಿದೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಚಿವರನ್ನೊಳಗೊಳಗೊಂಡ ಸಭೆಯಲ್ಲಿ ಮುಂದಿನ 100 ದಿನಗಳ ಕಾರ್ಯಸೂಚಿ ಕುರಿತು ಚರ್ಚೆಯಾಗಲಿದೆ. ಸರ್ಕಾರದ ಯೋಜನೆಗಳು, ತ್ವರಿತವಾಗಿ ಮುಗಿಸಬೇಕಾದ ಕೆಲಸಗಳ ಕುರಿತು ಚರ್ಚೆಯಾಗಲಿದೆ.

ಹೆಚ್‌ಡಿಕೆ ಮೋದಿ ರಾಜನಾಥ್‌ ಸಿಂಗ್ ಸೇರಿದಂತೆ ಮೋದಿ ಸಂಪುಟದಲ್ಲಿ 7 ಮಾಜಿ ಸಿಎಂಗಳು

ಈ ಬಾರಿ ಕೃಷಿ ಖಾತೆ ಯಾರು ನಿಭಾಯಿಸುತ್ತಾರೆ ಅನ್ನೋ ಕುತೂಹಲ ತೀವ್ರಗೊಳ್ಳುತ್ತಿದೆ. ಕಾರಣ ಹೆಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಕೃಷಿ ಖಾತೆ ನಿಭಾಯಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. 
 

click me!