ಕಾರ್‌ಗಳ ಮುಖಾಮುಖಿ ಡಿಕ್ಕಿ; ನಾಲ್ವರು ಯುಟ್ಯೂಬರ್‌ಗಳ ದುರ್ಮರಣ

By Mahmad Rafik  |  First Published Jun 10, 2024, 10:04 AM IST

ಎದುರು ಬರುತ್ತಿದ್ದ ಬುಲೆರೋಗೆ ಡಿಕ್ಕಿ ಹೊಡೆದಿದೆ. ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಎಲ್ಲಾ ಗಾಯಾಳಾಗಳನ್ನು ಸಿಎಚ್‌ಸಿ ಗಜರೌಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಯುವಕರು ಮೃತರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. 


ಲಕ್ನೋ: ಅಪಘಾತದಲ್ಲಿ ನಾಲ್ವರು ಯುಟ್ಯೂಬರ್‌ಗಳು (Youtuber Death) ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ (Amroha district of Uttar Pradesh) ನಡೆದಿದೆ. ಎರಡು ಕಾರ್‌ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಲಕ್ಕಿ, ಸಲ್ಮಾನ್, ಶಾರುಖ್ ಮತ್ತು ಶಾನವಾಜ್  ಎಂದು ಗುರುತಿಸಲಾಗಿದೆ. ಮೃತ ನಾಲ್ವರು ಯುವಕರು ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಉತ್ತರ ಪ್ರದೇಶದ ಭಾಗದಲ್ಲಿ ಇವರ ಕಾಮಿಡಿ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದ್ದವು.  ರೌಂಡ್ 2 ವರ್ಲ್ಡ್ ಚಾನೆಲ್‌ (Round 2 World channel on YouTube) ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿತ್ತು. ಹಾಸ್ಯ ಪ್ರಧಾನ ವಿಡಿಯೋಗಳನ್ನು ಪ್ರಮುಖವಾಗಿ ಚಿತ್ರೀಕರಿಸುತ್ತಿದ್ದರು. 

ನಾಲ್ವರು ಬರ್ತ್ ಡೇ ಸೆಲೆಬ್ರೇಷನ್ ಮುಗಿಸಿ ಹಿಂದಿರುಗುತ್ತಿರುವ ವೇಳೆ ಇವರು ಪ್ರಯಾಣಿಸುತ್ತಿದ್ದ ಕಾರ್ ಎದುರು ಬರುತ್ತಿದ್ದ ಬುಲೆರೋಗೆ ಡಿಕ್ಕಿ ಹೊಡೆದಿದೆ. ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಎಲ್ಲಾ ಗಾಯಾಳಾಗಳನ್ನು ಸಿಎಚ್‌ಸಿ ಗಜರೌಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಯುವಕರು ಮೃತರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. 

Tap to resize

Latest Videos

ರೈಲಿನಲ್ಲಿ ಎರಡು ತುಂಡುಗಳಲ್ಲಿ ಮಹಿಳೆ ಶವ ಪತ್ತೆ; ಕೈ, ಕಾಲುಗಳು ಮಿಸ್!

ಇನ್ನುಳಿದ ಆರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮ್ರೋಹಾ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೃತದೇಹಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಮೃತರ ಕುಟುಂಬಸ್ಥರಿಗೂ ಮಾಹಿತಿ ರವಾನೆ ಮಾಡಲಾಗಿದೆ. ಇತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಅಪಘಾತ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

click me!