ಮೊದಲ ಸಂಪುಟ ಸಭೆಯಲ್ಲಿಯೇ ಬಂಪರ್ ಘೋಷಣೆ ಮಾಡ್ತಾರಾ ಪ್ರಧಾನಿಮೋದಿ?

By Mahmad Rafik  |  First Published Jun 10, 2024, 11:49 AM IST

ಲೋಕ್ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಗಳ ನಿವಾಸದಲ್ಲಿಯೇ ಎನ್‌ಡಿಎ ಸರ್ಕಾರದ ಮೊದಲ ಸಂಪುಟ ಸಭೆ ನಡೆಯಲಿದ್ದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಯಾವೆಲ್ಲಾ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದರ ಮಾಹಿತಿ ಇಲ್ಲಿದೆ.


ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ (PM Naredra Modi) 3.O ಮೊದಲ ಸಂಪುಟ ಸಭೆ (Modi Cabinet Meeting) ಸಂಜೆ 5 ಗಂಟೆಗೆ ನಿಗದಿಯಾಗಿದೆ. ಲೋಕ್ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಗಳ ನಿವಾಸದಲ್ಲಿಯೇ ಮೊದಲ ಸಂಪುಟ ಸಭೆ ನಡೆಯಲಿದ್ದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಅದರಲ್ಲಿಯೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹೆಚ್ಚು ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ )Pradhan Mantri Awaas Yojana-Gramin) (PMAY-G)  ಫಲಾನುಭವಿಗಳಿಗೆ ನೀಡುವ ಅನುದಾನದ ಮೊತ್ತ ಶೇ.50ಕ್ಕೆ ಏರಿಕೆ ಮಾಡುವ ಕುರಿತು ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಇಂಡಿಯಾ ಟುಡೇ ವರದಿ ಬಿತ್ತರ ಮಾಡಿದೆ. 

ಇದೇ ಸಂಪುಟ ಸಭೆಯಲ್ಲಿ ಶೀಘ್ರದಲ್ಲಿಯೇ ಜಂಟಿ ಅಧಿವೇಶನ ಕರೆಯಬೇಕು ಮತ್ತು ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಕೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಭಾನುವಾರ ಪ್ರಧಾನಿಯಾಗಿ ನರೇಂದ್ರ ಮೋದಿ ಸೇರಿದಂತೆ 70 ಸಂಸದರು ಕೇಂದ್ರ ಮತ್ತು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈವರೆಗೂ ಯಾರಿಗೂ ಖಾತೆ ಹಂಚಿಕೆಯಾಗಿಲ್ಲ.

Tap to resize

Latest Videos

ಎರಡು ಕೋಟಿ ಹೆಚ್ಚುವರಿ ಮನೆ ನಿರ್ಮಾಣದ ಗುರಿ

ಫೆಬ್ರವರಿಯ ಮಧ್ಯಂತರ ಬಜೆಟ್‌ನಲ್ಲಿ ಅಂದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮುಂದಿನ ಐದು ವರ್ಷದಲ್ಲಿ 2 ಕೋಟಿ ಹೆಚ್ಚುವರಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15ರ ಭಾಷಣದಲ್ಲಿ ಮನೆಗಳನ್ನು ನೀಡುವ ಕುರಿತು ಮಾತನಾಡಿದ್ದರು.

 ಮೋದಿ ಪ್ರಮಾಣವಚನ ಸಮಾರಂಭಕ್ಕೆ ಖರ್ಗೆ ಹಾಜರು, ಉಳಿದೆಲ್ಲಾ ವಿಪಕ್ಷ ನಾಯಕರು ಗೈರು

ಬಡ ಮತ್ತು ಕೆಳ ವರ್ಗದ  ಜನರು ಸ್ಲಮ್, ಚಾಳ, ಅನಧಿಕೃತ ಕಾಲೋನಿಗಳಲ್ಲಿ ವಾಸವಾಗಿದ್ದರು. ಇವರೆಲ್ಲರಿಗೂ ಶಾಶ್ವತ ಸೂರು ಕೊಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಜನರಿಗೆ ವಿನಾಯ್ತಿ ಜೊತೆ ಬ್ಯಾಂಕ್‌ಗಳಿಂದ ಗೃಹ ಸಾಲವನ್ನು ಪಡೆಯುವ ಅವಕಾಶ ನೀಡಲಾಗುವುದು. ಗೃಹಸಾಲ ತೆಗೆದುಕೊಳ್ಳುವ ಜನರಿಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೆಲವು ವಿನಾಯ್ತಿ ಲಭ್ಯವಾಗುತ್ತಿದೆ ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.  

ಅಭಿವೃದ್ಧಿಯ ಪಾಠ 

ಇನ್ನು ಮೊದಲ ಸಂಪುಟದಲ್ಲಿ ಎಲ್ಲಾ ನೂತನ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ಪಾಠ ಮಾಡಲಿದ್ದಾರೆ. ಇದರ ಜೊತೆಗೆ ಸರ್ಕಾರದ ಉದ್ದೇಶಗಳು ಏನು? ಹೇಗೆ ಕೆಲಸ ಮಾಡಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ಸಂಪುಟ ಸಭೆಯಲ್ಲಿ 100 ದಿನಗಳ ಕಾರ್ಯಸೂಚಿಯನ್ನು ಪ್ರಸ್ತಾವಿಸಿ ಅಂಗೀಕರಿಸುವ ಸಾಧ್ಯತೆಯಿದೆ. 

ಮೋದಿ ಕ್ಯಾಬಿನೆಟ್‌ನಲ್ಲಿ 6 ಮಾಜಿ ಸಿಎಂ, 9 ಹೊಸ ಮುಖ; 72 ಸಚಿವರ ಪಟ್ಟಿ ಇಲ್ಲಿದೆ!

ಪ್ರಮಾಣವಚನಕ್ಕೂ ಮುನ್ನ ಮೋದಿ ಕಿವಿಮಾತು

ಪ್ರಮಾಣವಚನ ಸ್ವೀಕಾರಕ್ಕೆ ಕೆಲವು ತಾಸುಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶಪಥಗ್ರಹಣ ಮಾಡಲಿರುವ ಎಲ್ಲ ಸಚಿವರನ್ನೂ ತಮ್ಮ ನಿವಾಸಕ್ಕೆ ಕರೆಸಿಕೊಂಡು ಕಿವಿಮಾತುಗಳನ್ನು ಹೇಳಿದ್ದರು. ಮಂತ್ರಿಮಂಡಲ ಸೇರ್ಪಡೆಗೆ ಆಯ್ಕೆಯಾದ ಸಂಸದರನ್ನು ಚಹಾ ಸೇವಿಸಲು ತಮ್ಮ ಸ್ವೀಕಾರಕ್ಕೆ ನರೇಂದ್ರ ಮೋದಿ ಆಹ್ವಾನಿಸಿದರು. 2014ರಿಂದಲೂ ಅವರು ದೆಹಲಿಯಲ್ಲಿ ಈ ಸಂಪ್ರದಾಯ ಪಾಲಿಸುತ್ತಿದ್ದಾರೆ.

click me!