3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮೊದಲು ಗಾಂಧಿ, ಅಟಲ್ ಸ್ಮಾರಕಕ್ಕೆ ಮೋದಿ ನಮನ

By Anusha Kb  |  First Published Jun 9, 2024, 10:53 AM IST

ಇಂದು ಸಂಜೆ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಧಾನಿ ಮೋದಿ ಅವರು ಇಂದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹಾಗೂ ರಾಷ್ಟ್ರಪಿತ ಗಾಂಧೀಜಿ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿದರು.


ನವದೆಹಲಿ: ಇಂದು ಸಂಜೆ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಧಾನಿ ಮೋದಿ ಅವರು ಇಂದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ದೆಹಲಿಯ ಸದೈವ ಅಟಲ್‌ಗೆ ಭೇಟಿ ನೀಡಿದ ಪ್ರಧಾನಿ ಅಲ್ಲಿ ಮಾಜಿ ಪ್ರಧಾನಿ ಹಾಗೂ ದೇಶ ಕಂಡ ಧೀಮಂತ ನಾಯಕನಿಗೆ ಪುಷ್ಮ ನಮನ ಅರ್ಪಿಸಿ ಗೌರವ ಸಮರ್ಪಣೆ ಮಾಡಿದರು. ಇದಕ್ಕೂ ಮೊದಲು ಪ್ರಧಾನಿ ಮಹಾತ್ಮ ಗಾಂಧಿ ಸಮಾಧಿ ಇರುವ ರಾಜ್‌ಘಾಟ್‌ಗೂ ಭೇಟಿ ನೀಡಿ ಅಲ್ಲಿ ರಾಷ್ಟ್ರಪಿತನಿಗೆ ಪುಷ್ಪನಮನ ಸಲ್ಲಿಸಿದರು.  ಇಂದು ಸಂಜೆ 7.15ಕ್ಕೆ ನರೇಂದ್ರ ಮೋದಿ 3ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ನೆಹರೂ ಬಳಿಕ ಸತತ 3ನೇ ಬಾರಿ ಪ್ರಧಾನಿಯಾಗುತ್ತಿರುವ ಏಕೈಕ ನಾಯಕ ನರೇಂದ್ರ ಮೋದಿ

Tap to resize

Latest Videos

ನರೇಂದ್ರ ಮೋದಿ ನಾಯಕತ್ವದದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದೆ.  ಇಂದು ಮೋದಿ 3ನೇ ಬಾರಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಮಾಜಿ ಪ್ರಧಾನಿ ಪಂಡಿತ್ ಜವಹರ್‌ ಲಾಲ್ ನೆಹರೂ ಅವರ ಬಳಿಕ ಸತತ ಮೂರನೇ ಬಾರಿ ಪ್ರಧಾನಿಯಾದ 2ನೇ ನಾಯಕ ಎಂದೆನಿಸಿಕೊಳ್ಳಲಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಸಚಿವ ಸಂಪುಟದ ಸದಸ್ಯರು ಕೂಡ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ವಂದೇ ಭಾರತ್‌ನ ಮಹಿಳಾ ಲೋಕೋ ಪೈಲಟ್‌ಗೆ ಮೋದಿ ಪ್ರಮಾಣ ವಚನಕ್ಕೆ ವಿಶೇಷ ಆಹ್ವಾನ

ಪ್ರಧಾನಿ ಮೋದಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ರಾಜಧಾನಿಯ ರಸ್ತೆಗಳು ಬ್ಯಾನರ್ ಕಟೌಟ್‌ಗಳಿಂದ ತುಂಬಿ ಹೋಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ಅಧಿಕಾರಾವಧಿಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಸಂಭ್ರಮಿಸುವ ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯಾದ್ಯಂತ ಕಂಡು ಬಂದಿವೆ. ಇನ್ನು ದೆಹಲಿಯಲ್ಲಿ ಇಂದು ವಿಐಪಿ ವಿವಿಐಪಿಗಳೇ ತುಂಬಿ ಹೋಗುವುದರಿಂದ ಅವರ ಸುಗಮ ಸಂಚಾರ ವ್ಯವಸ್ಥೆಗಾಗಿ 1,100ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ಅಲ್ಲದೇ ಸಾರ್ವಜನಿಕರಿಗೂ ಟ್ರಾಫಿಕ್ ಬಗ್ಗೆ ಸೂಚನಾ ಸಲಹೆಗಳನ್ನು ನೀಡಲಾಗಿದೆ. ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವವರಿಗೆ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಅಟಲ್ ಸಮಾಧಿಗೆ ಮೋದಿ ನಮನ: ವೀಡಿಯೋ

PM Shri Narendra Modi Ji paid tribute to Atal Bihari Vajpayee Ji at 'Sadaiv Atal' pic.twitter.com/6K992QznNy

— Daggubati Purandeswari 🇮🇳 (Modi Ka Parivar) (@PurandeswariBJP)

 

ನಮಗೆ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ಸಿಕ್ಕಿಲ್ಲ:

ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರು, ತಮಗೆ ಹಾಗೂ ವಿರೋಧ ಪಕ್ಷದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ. 

ಮೋದಿ ಪ್ರಮಾಣ ವಚನಕ್ಕೆ ಎಚ್‌ಡಿಕೆ ಕುಟುಂಬ ದಿಲ್ಲಿಗೆ: ಬಿಜೆಪಿಯಿಂದ ಕರೆ?

543 ಸದಸ್ಯ ಬಲದ ಲೋಕಸಭೆಯಲ್ಲಿ ಈ ಬಾರಿ ಬಿಜೆಪಿ 240 ಸೀಟುಗಳನ್ನು ಗೆದ್ದಿದೆ. ಕೇಂದ್ರದಲ್ಲಿ ಸ್ವಾತಂತ್ರವಾಗಿ ಅಧಿಕಾರ ಸ್ಥಾಪನೆಗೆ 272 ಸೀಟುಗಳನ್ನು ಪಡೆಯುವುದು ಅಗತ್ಯ. ಆದರೆ ಈ ಬಾರಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಬಿಜೆಪಿ ಸ್ವಾತಂತ್ರವಾಗಿ ಅಧಿಕಾರ ಹಿಡಿಯುವುದಕ್ಕೆ ತಡೆಯೊಡ್ಡಿದೆ. ಹೀಗಾಗಿ ಬಿಜೆಪಿ ಎನ್‌ಡಿಎ ತನ್ನ ಮಿತ್ರಪಕ್ಷಗಳ ಮೊರೆ ಹೋಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಆಂಧ್ರಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹಾಗೂ ಬಿಹಾರ ಸಿಎಂ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಬೆಂಬಲ ನೀಡಿದ್ದು,ಕಿಂಗ್‌ ಮೇಕರ್ ಆಗಿದ್ದಾರೆ. ಇತ್ತ ಇಂಡಿಯಾ ಕೂಟದ ಕಾಂಗ್ರೆಸ್ 100 ಸ್ಥಾನ ಗಳಿಸಿದ್ದು, ಸಮಾಜವಾದಿ ಪಕ್ಷ 37 ಸ್ಥಾನ, ತೃಣಮೂಲ ಕಾಂಗ್ರೆಸ್ 29,  ಡಿಎಂಕೆ 22 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಮಹಾತ್ಮಗಾಂಧಿ ಸಮಾಧಿಗೆ ಮೋದಿ ಪುಷ್ಪನಮನ ವೀಡಿಯೋ

 

| Delhi: PM-designate Narendra Modi arrives at Rajghat to pay tribute to Mahatma Gandhi, ahead of his swearing-in ceremony, to be held today at Rashtrapati Bhawan.

He will take the Prime Minister's oath for the third consecutive term, today at 7:15 PM. pic.twitter.com/L7u5S0uvHo

— ANI (@ANI)

 

click me!